ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ.. ಬದುಕಬೇಕಿದ್ದರೆ ನೀವು ಹೀಗಿರಬೇಕು..

ರಾಜ್ಯದಲ್ಲಿ ಧರ್ಮ ಸಂಘರ್ಷ ಶುರುವಾಗಿದೆ. ಹಿಂದೂಗಳು ಹಾಗು ಮುಸಲ್ಮಾನ ಸಮುದಾಯದ ನಡುವೆ ಪರೋಕ್ಷವಾಗಿ ಬೆಂಕಿ ಹಚ್ಚುವ ಕೆಲಸವನ್ನು ಪಟಭದ್ರ ಹಿತಾಸಕ್ತಿ ಸೂಕ್ತ ರೀತಿಯಲ್ಲಿ ಮಾಡುತ್ತಿದೆ. ರಾಜ್ಯ ಸರ್ಕಾರ ಹಿಂದೂಗಳ ಮನೆಗೆ ತೆರಳಿ ಸಾಂತ್ವನ ಹೇಳುತ್ತದೆ ಪರಿಹಾರದ ಮೊತ್ತವನ್ನೂ ಕೊಡುತ್ತದೆ. ಆದರೆ ಮುಸಲ್ಮಾನ ಸಮುದಾಯದ ಯುವಕರು ಕೊಲೆಯಾದರೆ ತಿರುಗಿಯೂ ನೋಡದ ವಾತಾವರಣ ಸೃಷ್ಟಿಯಾಗಿದೆ. ಒಂದು ಸಮುದಾಯಕ್ಕೆ ಮಾತ್ರ ಸರ್ಕಾರ ಸೀಮಿತವಾಗಿದ್ಯಾ..? ಎನ್ನುವ ಪ್ರಶ್ನೆಯನ್ನು ಜನರೇ ಕೇಳುವಂತಾಗಿದೆ. ಆದರೆ ಹಿಂದೂಗಳು, ಅದರಲ್ಲೂ ಬಿಜೆಪಿ ಪಕ್ಷವನ್ನೇ ಆರಾಧಿಸುವ ಕಟ್ಟರ್​ ಹಿಂದುತ್ವವಾದಿಗಳ ರಕ್ಷಣೆಯಲ್ಲೂ […]

ಶಿವಮೊಗ್ಗದ ಹರ್ಷನಂತೆ ಪುತ್ತೂರಿನಲ್ಲೂ ಹಿಂದೂ ಮುಖಂಡನ ಭೀಕರ ಹತ್ಯೆ..!!

ಕರಾವಳಿಯಲ್ಲಿ ಹಿಂದೂ ಮುಸ್ಲಿಂ ನಡುವಿನ ದ್ವೇಷ ತಾರಕಕ್ಕೇರಿದೆ. ಪುತ್ತೂರಿನಲ್ಲಿ BJP ಯುವ ಮುಖಂಡನಾಗಿದ್ದ ಪ್ರವೀಣ್​ ನೆಟ್ಟಾರು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರ ಕೊಲೆ ಮಾಡಲಾಗಿದೆ. ಬೆಳ್ಳಾರೆ ಪೇಟೆಯಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಭೀಕರ ಹತ್ಯೆ ಮಾಡಿರುವ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಬಿಜೆಪಿ ಮುಖಂಡ ಪ್ರವೀಣ್​ ನೆಟ್ಟಾರು, ಹಿಂದೂಪರ ಸಂಘಟನೆಯಲ್ಲೂ ಸಕ್ರಿಯನಾಗಿ ಗುರುತಿಸಿಕೊಂಡಿದ್ದರು. ಕೇರಳ ನೊಂದಣಿ ಸಂಖ್ಯೆಯ ಬೈಕ್​ನಲ್ಲಿ ಬಂದಿದ್ದ ಮೂವರು ಕಿಡಿಗೇಡಿಗಳು ಪ್ರವೀಣ್​ ನೆಟ್ಟಾರು ಅವರನ್ನು ಹತ್ಯೆ […]