ಮಾನ ಉಳಿಸಿಕೊಳ್ಳಲು ಸಿಎಂ ಸರ್ಕಸ್​, ಮಾನ ಕಳಿಯೋಕೆ ಉಳಿದವರು ವರ್ಸಸ್​..!

ರಾಜ್ಯ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಜನತೆ ಕಂಗಾಲಾಗಿದ್ದಾರೆ. ಹಣದುಬ್ಬರದ ಹೊಡೆತ ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜೀವನ ನಡೆಸುವುದು ಕಷ್ಟವಾಗ್ತಿದೆ. ಮೂಲಭೂತ ಸೌಕರ್ಯಗಳನ್ನು ಪಡೆಯುವುದಕ್ಕೆ ಸಾಧ್ಯವಾಗ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಹಬ್ಬಗಳ ಆಚರಣೆ ಮಾಡುವುದು ಇರಲಿ, ಸಂಸಾರ ನೌಕೆ ಸಾಗಿಸುವುದೇ ದುರ್ಗಮವಾಗಿದೆ. ದಿನನಿತ್ಯದ ಬಳಕೆಗೆ ವಾಹನಗಳನ್ನು ಬಳಸುವುದು ಕಷ್ಟ ಎನ್ನುತ್ತಿದ್ದಾರೆ ಸಾರ್ವಜನಿಕರು. ಪರಿಸ್ಥಿತಿ ಹೀಗಿರುವಾಗ ಸರ್ಕಾರದ ಮಾನ ಕಾಪಾಡಿಕೊಳ್ಳಲು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸರ್ಕಸ್​ ಮಾಡ್ತಿದ್ದಾರೆ. ಆದರೆ ಅದೇ ಬಸವರಾಜ ಬೊಮ್ಮಾಯಿ […]

ತಪ್ಪು ಸಹಜ ಸಮರ್ಥನೆ ಸರೀನಾ..? ಅರಗ ಜ್ಞಾನೇಂದ್ರ ಅಜ್ಞಾನಕ್ಕೆ ಸಚಿವರ ಸಾಥ್​..

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಗ್ಯಾಂಗ್​ ರೇಪ್​ ಪ್ರಕರಣವನ್ನು ನಿರ್ವಹಿಸಲು ಬಾರದ ಗೃಹ ಸಚಿವರು ಮಾತಿನಲ್ಲಿ ಎಡವಿದ್ದಾರೆ. ನಡೆಯುವ ಕಾಲು ಎಡುವುತ್ತದೆ ಎನ್ನುವ ಮಾತಿನಂತೆ ಯಾವುದೇ ಒಂದು ಸರ್ಕಾರದಲ್ಲಿ ಅಪರಾಧಗಳು ನಡೆಯುವುದು ಸಹಜ. ಆದರೆ ಪ್ರಕರಣ ನಡೆದ ಬಳಿಕ ಸರ್ಕಾರ ನಡೆದುಕೊಳ್ಳುವ ರೀತಿ ಆ ಸರ್ಕಾರದ ಬಗ್ಗೆ ಜನರಲ್ಲಿ ಅಭಿಪ್ರಾಯ ಸೃಷ್ಟಿ ಮಾಡುತ್ತದೆ. ಇದೀಗ ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗೃಹ ಸಚಿವರ ಹೇಳಿಕೆ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಮೈಸೂರಿನ ಅತ್ಯಾಚಾರ ಪ್ರಕರಣವನ್ನು […]

ಮುಖ್ಯಮಂತ್ರಿಗಳೇ.. ಇದು ನಮ್ಮೂರ ರಸ್ತೆ, ನೀವೊಮ್ಮೆ ನೋಡಿ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ರಂಗೇನಹಳ್ಳಿಯಿಂದ ಬರಗೇನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯಿದು. ಈ ರಸ್ತೆ ಸಂಪೂರ್ಣವಾಗಿ ಹಾಳಗಿದ್ದು, ರಸ್ತೆಯ ತುಂಬಾ ತಗ್ಗು-ಗುಂಡಿಗಳು ಇರುವುದರಿಂದ ವಾಹನ ಸವಾರರು ಸಂಚಾರ ಮಾಡಲು ಹರಸಾಹಸ ಪಡಬೇಕಾಗಿದೆ. ನಿತ್ಯ ಸಂಚಾರ ಮಾಡುವ ಜನರ ಗೋಳು ಹೇಳ ತೀರದು. ರಾಜ್ಯದಲ್ಲಿ ಬಿಜೆಪಿ ಪಕ್ಷ ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿ ಇದೆ. ನಮ್ಮ ಕ್ಷೇತ್ರದಲ್ಲೂ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗಿದ್ದರೂ ಅಭಿವೃದ್ಧಿ ಮರಿಚಿಕೆಯಾಗಿದೆ. ಇದಕ್ಕೆ ನೂತನ ಮುಖ್ಯಮಂತ್ರಿಯಾದ ನೀವಾದರೂ ಕಾಯಕಲ್ಪ ನೀಡಿ. ಈ ರಸ್ತೆಯು […]

ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ಸ್ವೀಕಾರ..! ಇವರೆಲ್ಲಾ ಗೈರು ಹಾಜರಿ..

ರಾಜ್ಯದ 30ನೇ ಮುಖ್ಯಮಂತ್ರಿ ಆಗಿ ಶಿಗ್ಗಾಂವಿ ಕ್ಷೇತ್ರದ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನೂರಾರು ಕಾರ್ಯಕರ್ತರು ಹಾಗೂ ಹಲವಾರು ಗಣ್ಯರ ಸಮ್ಮುಖದಲ್ಲಿ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್​ ಗೌಪ್ಯತವಿಧಿ ಬೋಧಿಸಿದ್ರು. ಪ್ರಮಾಣ ವಚನ ಸ್ವೀಕಾರ ವೇಳೆ ಕೊಂಚ ಗಾಬರಿ ಮಾಡಿಕೊಂಡ ಬಸವರಾಜ ಬೊಮ್ಮಾಯಿ ತೊದಲು ನುಡಿಗಳಿಗೆ ಸಾಕ್ಷಿಯಾದರು. ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ ಬಳಿಕ ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹಾಗೂ ರಾಜ್ಯಪಾಲರು ನೂತನ ಮುಖ್ಯಮಂತ್ರಿ ಬಸವರಾಜ […]