ಶಿವಮೊಗ್ಗದಲ್ಲಿ ಹಿಂದೂ ಯುವಕನ ಭೀಕರ ಹತ್ಯೆ..! ಶಾಲಾ – ಕಾಲೇಜಿಗೆ ರಜೆ ಘೋಷಣೆ..!

ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಗೆ ಸೇರಿದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಭಾರತಿ ಕಾಲೋನಿಯ ಕಾಮತ್ ಪೆಟ್ರೋಲ್ ಬಂಕ್ ಬಳಿ ರಾತ್ರಿ 9.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಶೀಗೇಹಟ್ಟಿ ನಿವಾಸಿ 26 ವರ್ಷದ ಹರ್ಷ ಎಂಬಾತನನ್ನು ಇರಿದು ಕೊಲೆ ಮಾಡಲಾಗಿದೆ. ಸ್ಥಳೀಯರು ಕೂಡಲೇ ಮೆಗ್ಗಾನ್​ ಆಸ್ಪತ್ರೆಗೆ ಹರ್ಷನನ್ನು ರವಾನೆ ಮಾಡಿದರೂ ಹರ್ಷ ಬದುಕಿ ಉಳಿಯಲಿಲ್ಲ. ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ಶಿವಮೊಗ್ಗದಲ್ಲಿ 144 ಸೆಕ್ಷನ್​​ ಜಾರಿ ಮಾಡಲಾಗಿದೆ. ಮೆಗ್ಗಾನ್​ ಆಸ್ಪತ್ರೆ ಬಳಿ ನೂರಾರು […]