9ನೇ ದಿನದ ತಿಥಿ ಕಾರ್ಯಕ್ಕೆ ಬಂದ ವಾನರ..! ಏನಿದರ ವಿಶೇಷ..? ವಿಡಿಯೋ ಇಲ್ಲಿದೆ

ಬಳ್ಳಾರಿ: ವಾನರ ಅಥವಾ ಮಂಗನನ್ನು ಕಂಡರೆ ಹೆದರಿ ದೂರ ಹೋಗುವ ಜನರೇ ಹೆಚ್ಚು. ಆದರೆ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಬಸವೇಶ್ವರ ಕ್ಯಾಂಪ್​ನಲ್ಲಿ 70 ವರ್ಷದ ವಿಶ್ವನಾಥ ರಾಜು ಎಂಬಾತ ನಿಧನರಾಗಿದ್ದರು. ಅಂದು ವಿಶ್ವನಾಥ್​ ರಾಜು ನಿವಾಸಕ್ಕೆ ಬಂದಿದ್ದ ವಾನರ, ಶವದ ಮೇಲಿನ ಬಟ್ಟೆಯನ್ನು ಎಳೆದು ಅಂತಿಮ ದರ್ಶನ ಪಡೆದಿದ್ದ ಎನ್ನಲಾಗಿದೆ. ಇನ್ನೂ ಕೆಲಕಾಲ ಅಲ್ಲಿಯೇ ಕುಳಿತು ವಿಶ್ವನಾಥ ರಾಜು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದ. ಇದೀಗ 9ನೇ ದಿನದ ತಿಥಿ ಕಾರ್ಯದಲ್ಲೂ ಅದೇ ವಾನರ ಭಾಗಿಯಾಗಿದ್ದಾನೆ. […]