ಮಂಡ್ಯದ ಅಜ್ಜಿ, ತುಮಕೂರಲ್ಲಿ ಕೊಲೆ, ಬಾಗಲಕೋಟೆಯಲ್ಲಿ ತಲೆ..!

ಮಂಡ್ಯ ಜಿಲ್ಲೆ ತೂಬಿನಕೆರೆ ನಿವಾಸಿ ನಿಂಗಮ್ಮ. ಇಬ್ಬರು ಗಂಡು ಮಕ್ಕಳು. ಕಿರಿಯ ಮಗ ಮಂಡ್ಯದಲ್ಲೇ ವಾಸ ಮಾಡಿದ್ರೆ ಹಿರಿಯ ಮಗ ತುಮಕೂರಿನಲ್ಲಿ ವಾಸವಿದ್ದ, ಕೆಲವೇ ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಆದರೂ ತನ್ನ ಸಂಸಾರವನ್ನು ಅಲ್ಲೇ ಬಿಟ್ಟಿದ್ದ. ಅಜ್ಜಿ ನಿಂಗಮ್ಮ ಮಗ ಸತ್ತ ಮೇಲೂ ಆಗಾಗ್ಗೆ ತುಮಕೂರಿಗೆ ಹೋಗಿ ಸೊಸೆ ಬಳಿ ಹಣ ಪಡೆದು ಬರುತ್ತಿದ್ದರು. ಆದರೆ ಈ ಬಾರಿ ಸೊಸೆ ಬಳಿ ಹಣ ಕೇಳಲು ಹೋದವರು ಹೆಣವಾಗಿದ್ದಾರೆ. ಅದೂ ಕೂಡ ತುಮಕೂರಿನಲ್ಲಿ ಕೊಲೆ, ಬಾಗಲಕೋಟೆಯಲ್ಲಿ ಅಜ್ಜಿಯ ತಲೆ. […]