ವಲಸಿಗರಲ್ಲಿ ಯಾರೆಲ್ಲಾ ಮಂತ್ರಿ ಸ್ಥಾನ ಕಳೆದುಕೊಳ್ತಾರೆ!? ಇಲ್ಲಿದೆ ಲಿಸ್ಟ್​..

ಕಾಂಗ್ರೆಸ್​ನಿಂದ ಅಧಿಕಾರಕ್ಕಾಗಿ ವಲಸೆ ಬಂದಿದ್ದ ಬಹುತೇಕ ಮಂದಿ ಮತ್ತೆ ಕಾಂಗ್ರೆಸ್​ ಗೂಡು ಸೇರುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ವಿಚಾರ ಬಿಜೆಪಿ ಹೈಕಮಾಂಡ್​ ಗಮನಕ್ಕೂ ಬಂದಿದ್ದು, ಚುನಾವಣೆಗೂ ಮುನ್ನವೇ ಕೆಲವರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಪಕ್ಷ ನಿಷ್ಠರಿಗೆ ಮಣೆ ಹಾಕುವ ಪೂರ್ವ ತಯಾರಿ ನಡೆಯುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಬಜೆಟ್​ಗೂ ಮುನ್ನ ಸಂಪುಟ ವಿಸ್ತರಣೆ ಆದರೆ ಕೆಲವು ಯೋಜನೆಗಳನ್ನು ತಮ್ಮ ಕ್ಷೇತ್ರಗಳಿಗೆ ತೆಗೆದುಕೊಂಡು ಹೋಗುವ ಹುಮ್ಮಸ್ಸಿನಲ್ಲಿದ್ದಾರೆ ಮೂಲ ಬಿಜೆಪಿ ನಾಯಕರು. ವಲಸಿಗರ ಬಗ್ಗೆ ನೇರವಾಗಿಯೇ ಬಸನಗೌಡ ಪಾಟೀಲ್​ ವಾಗ್ದಾಳಿ […]