ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ, ಬಿಜೆಪಿ ನಾಯಕರ ಖಂಡನೆ..! ಪ್ಲ್ಯಾನ್​ ಯಾರದ್ದು..?

ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮಡಿಕೇರಿಯಲ್ಲಿ ಮೊಟ್ಟೆ ಎಸೆಯಲಾಗಿದೆ. ಹಿಂದೂ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ ಬಳಿಕ ಮೊಟ್ಟೆ ಎಸೆದಿದ್ದಾರೆ, ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಇದನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೇರವಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡಿದ್ದು, ಒಂದು ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಇದೇ ರೀತಿ ತಿರುಗಿ ಬಿದ್ದರೆ ನೀವು ಮನೆಯಿಂದ ಹೊರಕ್ಕೆ ಬರುವುದಕ್ಕೆ ಸಾಧ್ಯವಿಲ್ಲ ಗೊತ್ತಿರಲಿ ಎಂದು ಗುಡುಗಿದ್ದಾರೆ. ಇನ್ನು ಮುಂದಿನ ಆರೇಳು ತಿಂಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತದೆ. […]

ಶಿರಾಡಿ ಘಾಟ್​ ರಸ್ತೆ ಬಂದ್​ ಆದ್ರೆ ಬೇರೆ ಬದಲಿ ಮಾರ್ಗ ಯಾವುದು..?

ಕರಾವಳಿ ಕರ್ನಾಟಕ ಹಾಗು ಹಳೇ ಮೈಸೂರು ಭಾಗಕ್ಕೆ ಅಂದರೆ ಪಶ್ಚಿಮಘಟ್ಟ ಇಳಿಯಲು ಹಾಗು ಘಟ್ಟವನ್ನು ಏರುವುದಕ್ಕೆ ಇರುವ ಪ್ರಮುಖ ಮಾರ್ಗ ಶಿರಾಡಿಘಾಟ್. ಪ್ರತಿ ಮಳೆಗಾಲದಲ್ಲೂ ಈ ಮಾರ್ಗದಲ್ಲಿ ಗುಡ್ಡ ಕುಸಿತ, ರಸ್ತೆ ಕುಸಿತ ಹಲವಾರು ಸಂಕಷ್ಟಗಳನ್ನು ಜನರಿಗೆ ತಂದೊಡ್ಡುತ್ತದೆ. ಶಿರಾಡಿ ಮಾರ್ಗದಲ್ಲಿ ಒಮ್ಮೆ ಸಂಪರ್ಕ ಕಡಿತ ಆದರೆ ಜನರು ಬದಲಿ ಮಾರ್ಗವಾಗಿ ಮಡಿಕೇರಿ ಹಾಗೂ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್​ ಮೂಲಕ ಮಂಗಳೂರಿಗೆ ಪ್ರವೇಶ ಪಡೆಯುತ್ತಾರೆ. ಅದೇ ರೀತಿ ಘಟ್ಟವನ್ನು ಏರುವುದಕ್ಕೂ ಅದೇ ಮಾರ್ಗಗಳು ಜನರಿಗೆ ಕಾಣಿಸುತ್ತವೆ. ಆದರೆ […]

ಮಡಿಕೇರಿಯ ಕತ್ತಲೆ ಕೋಣೆಯಿಂದ ಹೊರಕ್ಕೆ ಬಂದಳು 27 ವರ್ಷದ ಪದವಿ ವಿದ್ಯಾರ್ಥಿನಿ..!

ಮಡಿಕೇರಿಯ ಗಾಳಿಬೀಡು ಗ್ರಾಮದಲ್ಲಿ 27 ವರ್ಷದ ಹುಡುಗಿಯನ್ನು ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗಾಳಿಬೀಡು ನಿವಾಸದ ಮೇಲೆ ದಾಳಿ ಮಾಡಿ ಯುವತಿಯನ್ನು ಬಂಧನದಿಂದ ಮುಕ್ತ ಮಾಡಿದ್ದಾರೆ. ಇದೀಗ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರೇಳು ವರ್ಷದಿಂದ ಕತ್ತಲ ಕೋಣೆಯಲ್ಲಿದ್ದ ಯುವತಿಗೆ ಮಾತುಗಳೇ ಮರೆತು ಹೋಗಿವೆ. ಅದೇನೋ ಹೇಳಬೇಕು ಎಂದು ಹಂಬಲಿಸುವ ಆ ಯುವತಿ ಆರೇಳು ವರ್ಷಗಳ ಬಳಿಕ ಸೂರ್ಯನ ಬಿಸಿಲು ಕಂಡಿದ್ದಾಳೆ. ಮಹಿಳಾ […]

6 ವರ್ಷದ ಕೊಡಗಿನ ಬಾಲೆ, ಧರಿಸಿದ್ದಾಳೆ ಸಾಧನೆಯ ಮಾಲೆ..!

ಕೊರೊನಾ ಲಾಕ್​ಡೌನ್​ ವೇಳೆ ಮಕ್ಕಳು ಶಾಲೆಗೆ ಹೋಗಲಾಗದೆ ಸಮಸ್ಯೆ ಅನುಭವಿಸಿದ್ರು. ಇನ್ನೂ ಶಾಲೆಗಳು ಆರಂಭವಾದರೂ ಭೌತಿಕ ತರಗತಿಗಳು ಇರಲಿಲ್ಲ. ಆನ್​ಲೈನ್​ ಪಾಠ ಕೇಳಿ ಸಾಕಷ್ಟು ಮಕ್ಕಳು ಖಿನ್ನತೆಗೆ ಹೋಗಿದ್ದರು ಎನ್ನುವ ಸುದ್ದಿ ತಜ್ಞರಿಂದಲೇ ಬಿಡುಗಡೆ ಆಗಿತ್ತು. ಇದೀಗ ಲಾಕ್​ಡೌನ್​ ಸಮಯದಲ್ಲಿ ಆನ್​ಲೈನ್​ ಪಾಠದ ಜೊತೆಗೆ ಮತ್ತಷ್ಟು ಪಠ್ಯೇತರ ಸಾಧನೆಯನ್ನೂ ಮಾಡಿದ್ದಾಳೆ. ಕೊರೊನಾ ಸಂಕಷ್ಟವನ್ನೇ ಸಾಧನೆಯ ಸಮಯವನ್ನಾಗಿ ಮಾಡಿಕೊಂಡ ಈಕೆಯ ಹೆಸರು ವೈಷ್ಣವಿ. ಆಕೆಗಿನ್ನೂ ಕೇವಲ 6 ವರ್ಷ ಮಾತ್ರ. ಕೊರೊನಾ ಎಂದು ಮನೆಯಿಂದ ಆಟಕ್ಕೆ ಬಿಡದಿದ್ದರೆ ಏನಂತೆ […]