ವರದಕ್ಷಿಣೆ 4 KG ಚಿನ್ನ, 200 KG ಬೆಳ್ಳಿ, ಮಗಳಿಗೆ ಅಳಿಯನು ಕೊಟ್ಟಿದ್ದು ಪ್ರೀತಿಯಲ್ಲ ಟಾರ್ಚರ್..!

ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ ಎನ್ನುವುದು ಕೆಲವರ ನಂಬಿಕೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಮದುವೆ ಎನ್ನುವುದು ತಾತ್ಕಾಲಿಕ ವ್ಯವಹಾರ ಎನ್ನುವಂತಾಗಿದೆ. ಮದುವೆ ಆದ ಕೆಲವೇ ದಿನಗಳಲ್ಲಿ ಡಿವೋರ್ಸ್​ ಪಡೆಯುವ ಅದೆಷ್ಟೋ ದಂಪತಿಗಳು ಜೀವನ ಪೂರ್ತಿ ಒಬ್ಬಂಟಿಯಾಗಿ ಜೀವನ ಕಳೆಯುವುದಕ್ಕೆ ಇಚ್ಚಿಸುತ್ತಾರೆ. ಇದರಲ್ಲಿ ತಮ್ಮ ಸ್ವಯಂ ಪ್ರತಿಷ್ಠೆಯೋ ಅಥವಾ ಶ್ರೀಮಂತಿಕೆ ಎಂಬ ಅಹಂನಲ್ಲಿ ಹೊಂದಾಣಿಕೆ ಆಗದೆ ಈ ರೀತಿಯ ನಿರ್ಧಾರಕ್ಕೆ ಬರುತ್ತಾರೋ ಎನ್ನುವ ಅನುಮಾನ ಕಾಡುವಂತೆ ಮಾಡಿದೆ. ಅದರಲ್ಲೂ ಬಹುತೇಕ ಬಡ ಕುಟುಂಬಗಳಲ್ಲಿ ನಡೆಯುವ ಮದುವೆ ಹೆಚ್ಚುಕಡಿಮೆ […]