22 ವರ್ಷದ ಬಳಿಕ ತಾಯಿಗಾಗಿ ಮಿಡಿದ ಮಲೆನಾಡ ಮಗಳು..! ಕೊನೆಗಾಲಕ್ಕೆ ಬಂದ ಕಳೆದು ಹೋದ ಕಂದ..

ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಮನ ಮಿಡಿಯುವ ಘಟನೆಯೊಂದು ನಡೆದಿದೆ. 22 ವರ್ಷಗಳ ಬಳಿಕ ತನ್ನ ತಾಯಿಯನ್ನು ಹುಡುಕಿಕೊಂಡು ಬಂದ ಮಗಳು ಅಮ್ಮನನ್ನು ಕಂಡು ಕಣ್ಣೀರಾಗಿದ್ದಾರೆ. ಇದೊಂದು ಅಪರೂಪದಲ್ಲಿ ಅಪರೂಪದ ಘಟನೆ ಎಂದರೂ ತಪ್ಪಾಗಲಾರದು. ಸರಿಯಾಗಿ 2000ನೇ ಇಸವಿ, ಅಂಜಲಿ ಇನ್ನೂ 9 ವರ್ಷದ ಪುಟ್ಟ ಹುಡುಗಿ, ಅಮ್ಮನ ಜೊತೆಯಲ್ಲಿ ಕಾಫಿ ಕುಯ್ಲು ಮಾಡಲು ಹೋಗುತ್ತಿದ್ದಳು. ಅಂದು ಅಮ್ಮ ಗದರಿದಳು ಎಂದು ಮನೆ ಬಿಟ್ಟು ಹೋದ ಬಾಲಕಿ ಇಂದು ಮೂರು ಮಕ್ಕಳ ತಾಯಿ ಆದ ಬಳಿಕ ಹೆತ್ತಮ್ಮನನ್ನು ನೋಡಲು ಚಿಕ್ಕಮಗಳೂರಿಗೆ […]