ವಿಶ್ವವಿದ್ಯಾಲಯ ಗೆಸ್ಟ್‌ಹೌಸಲ್ಲಿ ಮಧುಮಂಚ ಏರಿದ ನವ ದಂಪತಿ..! ವಿಡಿಯೋ ವೈರಲ್..

ವಿಶ್ವವಿದ್ಯಾಲಯಗಳಲ್ಲಿ ಅತಿಥಿ ನಿವಾಸ ನಿರ್ಮಾಣ ಮಾಡಲಾಗಿರುತ್ತದೆ. ಅಂದರೆ ವಿಶ್ವವಿದ್ಯಾಲಯಗಳ ಕೆಲಸದ ಮೇಲೆ ಬರುವ ಅಧಿಕಾರಿಗಳಿಗಾಗಿ ಅಥವಾ ವಿಶ್ವವಿದ್ಯಾಲಯದ ಕಾರ್ಯಗಳಿಗಾಗಿ ಬರುವ ಅಧಿಕಾರಿಗಳ ಬಳಕೆಗೆ ಮೀಸಲಿಡುವುದು ಸಾಮಾನ್ಯ. ಇನ್ನೂ ವಿಶ್ವವಿದ್ಯಾಲಯದ ಪ್ರೊಫೆಸರ್​ಗಳು ಕೆಲಸಗಳ ಒತ್ತಡದಲ್ಲಿದ್ದಾಗಲೂ ಅತಿಥಿ ಗೃಹ ಬಳಕೆ ಮಾಡಿಕೊಳ್ಳುವುದು ಸಾಮಾನ್ಯ. ಜೊತೆಗೆ ತನಗೆ ಬೇಕಾದವರು ಬಂದಾಗಲೂ ಕೊಠಡಿ ಕಾಯ್ದಿರಿಸುವ ಪರಿಪಾಠ ಬೆಳೆದುಕೊಂಡು ಬಂದಿದೆ. ಇದರಿಂದ ಯಾವುದೇ ಸಮಸ್ಯೆಯೂ ಆಗುವುದಿಲ್ಲ. ಆದರೆ ಇನ್ಮುಂದೆ ವಿಶ್ವವಿದ್ಯಾಲಯಗಳಲ್ಲಿ ಕೊಠಡಿ ಕಾಯ್ದಿರಿಸಿವುದು ಕಠಿಣ ಆಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಹನಿಮೂನ್​ ಮಾಡಿಕೊಂಡಿರುವುದು. […]