ಮನೆ ಮೇಲೆ ಪಾರಿವಾಳ ಕುಳಿತರೆ ಕಳ್ಳತನದ ಮುನ್ಸೂಚನೆ..! ಬೀ ಅಲರ್ಟ್​

ಮನೆ ಮೇಲೆ ಸಾಕಷ್ಟು ಪಕ್ಷಗಳಿಗಳು ಕುಳಿತುಕೊಳ್ಳುವುದು ಸಾಮಾನ್ಯ ಸಂಗತಿ. ಆದ್ರೆ ಬೆಂಗಳೂರಿನಲ್ಲಿ ಮನೆ ಮೇಲೆ ಸಾಕಿರುವ ಪಾರಿವಾಳ ಬಂದು ಕುಳಿತಿದೆ ಎಂದರೆ ಸ್ವಲ್ಪ ಹುಷಾರಾಗಿ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಪಾರಿವಾಳದ ನೆಪದಲ್ಲೇ ಕಳ್ಳತನ ಮಾಡುವ ಚಾಣಕ್ಯನೊಬ್ಬ ಪೊಲೀಸರ ಅತಿಥಿ ಆಗಿದ್ದಾನೆ. ಈ ಮೂಲಕ ಮೂರು ಮನೆಗಳಲ್ಲಿ ನಡೆದಿದ್ದ ಕಳ್ಳತನವನ್ನು ಪೊಲೀಸರು ಬೇಧಿಸಿದ್ದಾರೆ. ಕಳವು ಮಾಡಿದ್ದ 100 ಗ್ರಾಂ ಚಿನ್ನಾಭರಣಗಳನ್ನೂ ವಶಕ್ಕೆ ಪಡೆದಿದ್ದಾರೆ. ಪರಿವಾಳಗಳನ್ನು ಸಾಕುತ್ತಿದ್ದ ಉದ್ದೇಶವೇ ಕಳ್ಳತನ ಮಾಡುವುದಕ್ಕೆ ಎನ್ನುವ ಮಾಹಿತಿ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. […]