ನಾಯಿ ಸಾಕುವುದು ತಪ್ಪಾ..? ನಾಯಿಗೆ ಹೊಡೆಯುವುದು ತಪ್ಪಾ..? ಕೇಸ್ ಹಾಕಿದ್ಯಾಕೆ..?

ಬೆಂಗಳೂರಿನಲ್ಲಿ ನಾಯಿ ಸಾಕುವುದು ಶ್ರೀಮಂತಿಕೆಯ ಪ್ರತೀಕವಾಗಿದೆ. ಯಂತ್ರಗಳೊಂದಿಗೆ ಬದುಕು ರೂಪಿಸಿಕೊಂಡಿರುವ ಬೆಂಗಳೂರಿನ ಜನ ನಾಯಿ ಸಾಕುತ್ತ ಕೆಲಸದ ಒತ್ತಡ ನಿವಾರಣೆಗೆ ಪ್ರಯತ್ನಿಸುತ್ತಾರೆ. ಅದೇ ರೀತಿ ಮನೆಯಲ್ಲಿ ಒಬ್ಬಂಟಿ ಜೀವನ ಕಷ್ಟ ಎನಿಸಿದಾಗಲೂ ನಾಯಿಯ ಜೊತೆ ಕಾಲ ಕಳೆಯುವ ಅದೆಷ್ಟೋ ಜೀವಗಳು ಬೆಂಗಳೂರಿನಲ್ಲಿವೆ. ಈ ನಾಯಿ ಸಾಕುವುದು ಶೋಕಿಯ ಜೀವನವೂ ಹೌದು. ಆದರೆ ಈ ರೀತಿ ನಾಯಿ ಸಾಕುವಾಗ ಅದಕ್ಕೇ ಪ್ರತ್ಯೇಕ ವ್ಯವಸ್ಥೆ ಮಾಡಿರುತ್ತಾರೆ. ರಾತ್ರಿ ವೇಳೆಯಲ್ಲಿ ಬೇರೆಯವರ ಮನೆ ಬಾಗಿಲಿಗೆ ಕಸ ಹಾಕಿಸುವುದು ಇವರ ದೊಡ್ಡ ಸಮಸ್ಯೆ. […]