10ನೇ ತರಗತಿ.. 16 ವರ್ಷ 5ನೇ ಮಹಡಿಯಿಂದ ಹಾರಿದ ಏಕೈಕ ಪುತ್ರ..!

ಕೊರೊನಾ ಸೋಂಕು ಬಂದ ಬಳಿಕ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಿದ್ದಾರೆ ಎನ್ನುವ ವಿಚಾರ ವೈದ್ಯಕೀಯ ಲೋಕದಲ್ಲಿ ಕೇಳಿಬರುತ್ತಿರುವ ಆತಂಕಕಾರಿ ವಿಚಾರ. ಆದರೆ ಅದೇ ವೈದ್ಯರ ದಂಪತಿ ಏಕೈಕ ಪುತ್ರ 5ನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಿಂದ ಕೂಗಳತೆ ದೂರದಲ್ಲೇ ಇರುವ ಆನೇಕಲ್ ತಾಲೂಕಿನ ಕಮ್ಮಸಂದ್ರ ಸಮೀಪದ ಡ್ಯಾಡಿಸ್ ಬಡಾವಣೆಯಲ್ಲಿ ಈ ದುರ್ಘಟನೆ ನಡೆದಿದೆ. ಗಾರ್ಡನ್ ಅಪಾರ್ಟ್ಮೆಂಟ್​ನ ಐದನೇ ಮಹಡಿ ಏರಿದ್ದ 16 ವರ್ಷದ ಬಾಲಕ ಮೇಲಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. […]