ರಾಜೀನಾಮೆ ನೀಡೋಕೆ ಸಿದ್ಧನಿದ್ದೇನೆ, ಕೊಟ್ಟುಬಿಡಿ ಎಂದ ಮಿನಿಸ್ಟರ್ಸ್​..!!

ಕರ್ನಾಟಕ ಸರ್ಕಾರದ ನೇರ ನುಡಿಯ ಮಿನಿಸ್ಟರ್​ ಅಂದ್ರೆ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅನ್ನೋದ್ರಲ್ಲಿ ಯಾವುದೇ ಅನುಮಾನ ಬೇಕಿಲ್ಲ. ತನಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಜಾಯಮಾನ ಜೆ.ಸಿ ಮಾಧುಸ್ವಾಮಿ ಅವರದ್ದು. ಆದರೆ ಆ ನೇರವಂತಿಕೆಯೇ ಬಿಜೆಪಿ ಸರ್ಕಾರಕ್ಕೆ ಮುಜುಗರ ತಂದೊಡ್ಡಿದ್ದು, ಸರ್ಕಾರ ತಿಣುಕಾಡುತ್ತಿದೆ ಎಂದಿರುವುದು ನುಂಗಲಾರದ ಬಿಸಿ ತುಪ್ಪವಾಗಿದೆ. ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಬಂದಿರುವ ಎಸ್​.ಟಿ ಸೋಮಶೇಖರ್​ ವಿರುದ್ಧ ಗಂಭೀರ ಆರೋಪ ಮಾಡಿರುವ ಜೆ.ಸಿ ಮಾಧುಸ್ವಾಮಿ ವಿರುದ್ಧ ವಲಸೆ ಸಚಿವರ ತಂಡವೇ ತಿರುಗಿಬಿದ್ದಿದೆ. ಸಚಿವ ಮುನಿರತ್ನ ಸಚಿವರಾಗಿ […]