ಭಾರತದ ದೀಪಾವಳಿಗೆ ಅಫ್ಘನ್​ ಎಫೆಕ್ಟ್​..! ಮಾರುಕಟ್ಟೆಯಲ್ಲಿ ದರ ದರ್ಬಾರ್​

ಭಾರತದಲ್ಲಿ ಹಬ್ಬಗಳ ಆಚರಣೆಯೇ ಒಂದು ವಿಶೇಷ. ಭಾರತ ಹಲವು ವೈವಿಧ್ಯಮಯ ಸಂಪ್ರದಾಯ ಪಾಲಿಸುತ್ತಿರುವ ರಾಷ್ಟ್ರ. ಆದರೇ ದೀಪಾವಳಿ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡುವುದು ರೂಢಿ. ಈಗಾಗಲೇ ಕೊರೊನಾ ಸೋಂಕಿನಿಂದ ಕೆಲಸ ಕಳೆದುಕೊಂಡಿರುವ ಜನ, ಹಬ್ಬಗಳ ಆಚರಣೆಯಿಂದ ವಿಮುಖ ಆಗುವಂತಾಗಿದೆ. ಇದೀಗ ಮತ್ತೊಂದು ಬರೆ ಬೀಳುವ ದಿನಗಳು ಕಣ್ಣಮುಂದಿವೆ ಎನ್ನುತ್ತಿವೆ ವರದಿಗಳು. ಇದಕ್ಕೆ ಕಾರಣ ಅಫ್ಘಾನಿಸ್ತಾನದಲ್ಲಿ ಶುರುವಾಗಿರುವ ರಾಜಕೀಯ ಅರಾಜಕತೆ. ಅಫ್ಘಾನಿಸ್ತಾನ ದೇಶವನ್ನು ತಾಲಿಬಾನಿ ಉಗ್ರರು ವಶಕ್ಕೆ ಪಡೆದಿದ್ದಾರೆ. ಇದೀಗ ಅಫ್ಘಾನಿಸ್ತಾನಕ್ಕೆ ಹೊಸದಾಗಿ ಮರು ನಾಮಕರಣ ಮಾಡಿರುವ ತಾಲಿಬಾನಿ […]