ಬಿಜೆಪಿ ಸರ್ಕಾರದಲ್ಲಿ ದೇವಸ್ಥಾನದ ಗಂಟೆಗೂ ಅಪಸ್ವರ..!? ಇದರ ಹಿಂದೆ ಗುಮಾನಿ..!?

ಹಿಂದೂ ಮತಬ್ಯಾಂಕ್​ ಆಧಾರದಲ್ಲೇ ಆಡಳಿತ ನಡೆಸುವ ಬಿಜೆಪಿ ಹಿಜಬ್​ ವಿರುದ್ಧ ನಿಲುವು ತೆಗೆದುಕೊಳ್ಳುವ ಕೆಲಸ ಮಾಡುತ್ತಿದೆ ಎನ್ನುವುದು ಆರೋಪ. ಇದೀಗ ಹಿಂದೂಗಳೂ ಕೂಡ ಬಿಜೆಪಿ ಸರ್ಕಾರ ವಿರುದ್ಧ ತಿರುಗಿ ಬೀಳುವ ಎಲ್ಲಾ ಲಕ್ಷಗಳು ಕಾಣಿಸುತ್ತಿವೆ. ಯಾಕೆಂದರೆ ಹಿಂದುತ್ವ ಅಜೆಂಡಾ ಹೊಂದಿರುವ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿ ಇರುವ ಕರ್ನಾಟದಲ್ಲಿ ದೇವಸ್ಥಾನದ ಗಂಟೆ ಶಬ್ಧವನ್ನು ಕಡಿಮೆ ಮಾಡಬೇಕು ಎಂದು ಆದೇಶವೊಂದು ಹೊರಬಿದ್ದಿದೆ. ಮಹಾ ಮಂಗಳಾರತಿ ಸಮಯದಲ್ಲಿ ಬಾರಿಸುವ ಢಮರುಗ ಸೇರಿದಂತೆ ಹಲವಾರು ವಾದ್ಯಗಳ ಶಬ್ದಕ್ಕೆ ಮಿತಿ ಹೇರುವಂತೆ ಸೂಚನೆ […]