ಉಕ್ರೇನಿಯನ್ನರ ದೇಶಪ್ರೇಮ ರಸ್ತೆ ರಸ್ತೆಯಲ್ಲೂ ಅಬ್ಬರ..! ರಷ್ಯಾಗೆ ಸಂಧಾನವೇ ಸಕ್ಸಸ್..!

ರಷ್ಯಾ – ಉಕ್ರೇನ್​ ನಡುವೆ ಯುದ್ಧ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ತಿದೆ. ಉಕ್ರೇನ್​ನ ಒಂದೊಂದೇ ನಗರಗಳು ರಷ್ಯಾ ಸೈನಿಕರ ಹಿಡಿತಕ್ಕೆ ಹೋಗುತ್ತಿವೆ. ರಷ್ಯಾ ಸೇನೆಯ ಯುದ್ಧ ಟ್ಯಾಂಕರ್​​ಗಳ ಅಬ್ಬರ ಉಕ್ರೇನ್​​ ರಸ್ತೆಗಳಲ್ಲಿ ಕಾಣಿಸುತ್ತಿದೆ. ಬಾಂಬ್​​ಗಳ ಸುರಿಮಳೆ ಆಗುತ್ತಿದೆ. ಉಕ್ರೇನ್​ ದೇಶಕ್ಕೆ ಲಗ್ಗೆ ಇಟ್ಟಿರುವ ರಷ್ಯಾ ಸೈನಿಕರ ಸ್ಥಿತಿ ಅಯೋಮಯವಾಗಿದೆ. ರಷ್ಯಾ ಸೈನಿಕರು ತಿನ್ನಲು ಆಹಾರ ಸಿಗದೆ ಉಕ್ರೇನ್​ ದೇಶದ ಸೂಪರ್​ ಮಾರ್ಕೆಟ್​​ಗಳಲ್ಲಿ ತಡಕಾಡುತ್ತಿರುವ ದೃಶ್ಯ ಸರ್ವೇ ಸಮಾನ್ಯವಾಗಿದೆ. ಉಕ್ರೇನ್​​ ದೇಶದ ಅಣು ವಿದ್ಯುತ್​​ ಸ್ಥಾವರಗಳನ್ನು ವಶಕ್ಕೆ ಪಡೆದಿರುವ […]

ರಷ್ಯಾ – ಉಕ್ರೇನ್​ ಯುದ್ಧ ನಿಲ್ಲೋದು ಯಾವಾಗ..? ಜನರ ರಕ್ಷಣೆಗೆ ಮೆಟ್ರೋ ಸುರಂಗ..!!

ರಷ್ಯಾ ಹಾಗೂ ಉಕ್ರೇನ್​​ ನಡುವೆ ಯುದ್ಧ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯದ ರಷ್ಯಾ, ಉಕ್ರೇನ್ ಮೇಲೆ ಆರ್ಭಟ ಮುಂದುವರಿಸಿದೆ. ಇದೀಗ ಭಾರತ ಸೇರಿದಂತೆ ಇತರೆ ರಾಷ್ಟ್ರಗಳು ಯುದ್ಧದ ತೀವ್ರತೆ ನಿಲ್ಲಿಸುವಂತೆ ಮನವಿ ಮಾಡುತ್ತಿವೆ. ತಮ್ಮ ದೇಶದ ಪ್ರಜೆಗಳನ್ನು ಉಕ್ರೇನ್‌ನಿಂದ ವಾಪಸ್ ಕರೆತರುವುದಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿವೆ. ನೂರಾರು ಕನ್ನಡಿಗ ವಿದ್ಯಾರ್ಥಿಗಳೂ ಸೇರಿದಂತೆ ಭಾರತದ 20 ಸಾವಿರಕ್ಕೂ ಅಧಿಕ ಕನ್ನಡಿಗರು ಉಕ್ರೇನ್​ನ ಯುದ್ಧ ಭೀತಿಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ರಷ್ಯಾ […]

ರಷ್ಯಾ ಹಾಗೂ ಉಕ್ರೇನ್​ ನಡುವೆ ಯುದ್ಧ ಆರಂಭಕ್ಕೆ ಕಾರಣ ಏನು..!? ಉಕ್ರೇನ್‌ಗೆ ಬೆಂಬಲಿಸ್ತಾರಾ ಮೋದಿ..?

ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿರುವ ರಷ್ಯಾ, ತನ್ನ ನೆರೆಯ ರಾಷ್ಟ್ರ ಉಕ್ರೇನ್​​ ಮೇಲೆ ಯುದ್ಧ ಘೋಷಣೆ ಮಾಡಿದೆ. ಉಕ್ರೇನ್​ನ ಎರಡು ನಗರಗಳಾದ ಕ್ರಿಮಿಯ ಮತ್ತು ಡೋನ್​ಬಾಸ್​ಗಾಗಿ ಯುದ್ಧ ಶುರುವಾಗಿದ್ದು, ಉಕ್ರೇನ್​ ಮೇಲೆ ರಷ್ಯಾ ಆಧಿಪತ್ಯ ಸ್ಥಾಪನೆ ಮಾಡಲು ಮುಂದಾಗಿದೆ. ಬಾಂಬ್​​ ದಾಳಿ ನಡೆಸುತ್ತಿರುವ ರಷ್ಯಾ, ಸಾಕಷ್ಟು ಸೇನಾ ನೆಲೆಗಳನ್ನು ಧ್ವಂಸ ಮಾಡಿರುವ ರಷ್ಯಾ, ಉಕ್ರೇನ್​ ತನ್ನ ಎದುರು ಶರಣಾಗುವಂತೆ ಸಲಹೆ ನೀಡಿದೆ. ಒಂದು ವೇಳೆ ಶರಣಾಗತಿ ಆದರೆ ರಷ್ಯಾ ಎದುರು ಉಕ್ರೇನ್​​ ತಲೆಬಾಗಬೇಕಿದೆ. ಈ ಮೂಲಕ ರಷ್ಯಾ […]