Heavy Rain: ರಾಜ್ಯದಲ್ಲಿ ಮುಂಗಾರು ಪೂರ್ವ ಅಬ್ಬರ.. ಮುಂದಿನ 5 ದಿನಗಳ ಕಾಲ ಬಿ ಕೇರ್​ಫುಲ್​..

ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭವಾಗುವ ಮುನ್ನವೇ ಅಬ್ಬರ ಶುರುವಾಗಿದೆ. ಬೇಸಿಗೆಯನ್ನು ಗುಳುಂ ಸ್ವಾಹಃ ಮಾಡಿದ ಮಳೆಗಾಲ, ಏಪ್ರಿಲ್​ ಅಂತ್ಯದಿಂದಲೇ ಎಲ್ಲೆಡೆ ಸುರಿಯಲಾರಂಬಿಸಿತ್ತು. ಇದೀಗ ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಬಯಲುಸೀಮೆಯಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಶುರುವಾಗಿದೆ. ಇನ್ನೂ ಮುಂದಿನ 5 ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಸಿಕ್ಕಿದ್ದು, ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ಹವಾಮಾನ ಇಲಾಖೆ ಕಟ್ಟೆಚ್ಚರ ನೀಡಿದೆ. ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವಿಪರೀತ ಮಳೆಯಾಗುವ ಸಂಭವವಿದ್ದು, ಮಳೆಯನ್ನು ಆಧರಿಸಿ […]

‘ಮೀನು ತಿನ್ನುವವರು ಹಿಂದೂ ಆಗಲು ಸಾಧ್ಯವೇ ಇಲ್ಲ’ ವಿವಾದಕ್ಕೆ ಅಣ್ಣಾಮಲೈ ಸ್ಪಷ್ಟನೆ ಯತ್ನ..

ಕರ್ನಾಟಕದಲ್ಲಿ ಐಪಿಎಸ್​ ಅಧಿಕಾರಿಯಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದ ಐಪಿಎಸ್​ ಅಧಿಕಾರಿ ಅಣ್ಣಾಮಲೈ ರಾಜಕೀಯಕ್ಕೆ ಧುಮುಕಿದ್ದಾರೆ. ಆದ್ರೆ ರಾಜಕೀಯಕ್ಕೆ ಬಂದ ಬಳಿಕ ಸಾಕಷ್ಟು ವಿವಾದಿತ ಹೇಳಿಕೆಗಳನ್ನು ನೀಡುತ್ತಿರುವ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ, ಬಿಜೆಪಿ ನಾಯಕರನ್ನು ಮೆಚ್ಚಿಸಲು ಹವಣಿಸುತ್ತಿದ್ದಾರೆಯೇ..? ಎನ್ನುವ ಶಂಕೆ ವ್ಯಕ್ತವಾಗುವಂತೆ ನಡೆದುಕೊಳ್ತಿದ್ದಾರೆ. ಇತ್ತೀಚಿಗೆ ಸನಾತನ ಧರ್ಮ, ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಕಡೆಗಳಲ್ಲಿ ಭಾಷಣ ಮಾಡುತ್ತಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಮೀನು ತಿನ್ನುವ ಜನರ ಬಗ್ಗೆ ಮಾತನಾಡುವ ಮೂಲಕ ಮತ್ತೊಂದು ವಿವಾದ ಮೈಮೇಲೆ […]