ತಮಿಳುನಾಡಿನ ಬ್ಲಾಸ್ಟ್​​ಗೆ ಉಗ್ರರ ಲಿಂಕ್​.. ದೇವಸ್ಥಾನ ಧ್ವಂಸಕ್ಕೆ ನಡೆದಿತ್ತಾ ಸ್ಕೆಚ್​..??

ತಮಿಳುನಾಡಿನ ಕೊಯಮತ್ತೂರಿನಲ್ಲಿ ತಪ್ಪಿದೆ ಭಾರೀ ದುರಂತ. ದೇವಸ್ಥಾನವನ್ನು ಟಾರ್ಗೆಟ್ ಮಾಡಿ ಬ್ಲಾಸ್​ ಮಾಡಲು ಸಜ್ಜಾಗಿದ್ದ ಉಗ್ರರ ಯೋಜನೆ ಪ್ಲಾಫ್​ ಆಗಿದೆ. ಕೊಯಮತ್ತೂರು ಮಂದಿರದ ಬಳಿ ಕಾರ್ ಬ್ಲಾಸ್ಟ್ ಆಗಿದೆ. ಕಾರ್​ನಲ್ಲಿದ್ದ ಸಿಲಿಂಡರ್​ ಬ್ಲಾಸ್ಟ್​​ ಆಗಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿತ್ತು. ಪೊಲೀಸ್ರು ಕೂಡ ಇದೊಂದು ಆಕಷ್ಮಿಕ ಘಟನೆ ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ರು. ಆದ್ರೆ ಇದೀಗ ಬ್ಲಾಸ್ಟ್​ ಕೇಸ್​​ ಟ್ವಿಸ್ಟ್​ ಸಿಕ್ಕಿದ್ದು, ಇದೊಂದು ಉಗ್ರರ ಕೃತ್ಯ ಅನ್ನೋದು ಬೆಳಕಿಗೆ ಬಂದಿದೆ.

ಕಾರ್​​ ಬ್ಲಾಸ್ಟ್​​ನಲ್ಲಿ ಓರ್ವ ಸಾವು, ಉಗ್ರ ಕೃತ್ಯದ ಶಂಕೆ..!

ಕಾರ್​ ಬ್ಲಾಸ್ಟ್​​ ಆಗಿದ್ದ ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ತನಿಖೆ ಕೈಗೆತ್ತಿಕೊಂಡಾಗ ಭಯಾನಕ ಮಾಹಿತಿ ಬಹಿರಂಗವಾಗಿದ್ದು, ಸ್ಫೋಟದಲ್ಲಿ ಸಾವನ್ನಪ್ಪಿದ್ದು ಜಮೀಶಾ ಮುಬಿನ್, ಈಗಾಗಲೇ ರಾಷ್ಟ್ರೀಯ ಭದ್ರತಾ ಸಂಸ್ಥೆಯಿಂದ ತನಿಖೆಗೆಗೆ ಒಳಪಟ್ಟಿದ್ದ ವ್ಯಕ್ತಿ ಅನ್ನೋದು ಬಹಿರಂಗ ಆಗಿತ್ತು. 2019ರಲ್ಲಿ ಶ್ರೀಲಂಕಾ ಚರ್ಚ್ ದಾಳಿ ವಿಚಾರದಲ್ಲಿ ತನಿಖೆಗೆ ಒಳಪಟ್ಟಿದ್ದ ವ್ಯಕ್ತಿ. ಈ ವಿಚಾರ ಗೊತ್ತಾಗ್ತಿದ್ದ ಹಾಗೆ ತನಿಖೆಯನ್ನು ತೀವ್ರಗೊಳಿಸಿದಾಗ, ಇದೊಂದು ಭಯೋತ್ಪಾದನಾ ಕೃತ್ಯ. ದೇವಸ್ಥಾನವನ್ನು ಸ್ಫೋಟ ಮಾಡಲು ಯೋಜನೆ ರೂಪಿಸಿದ್ದರು ಎನ್ನುವುದು ಬಯಲಾಗಿದೆ.

ಸ್ಫೋಟ ಸ್ಥಳದಲ್ಲಿ ಉಗ್ರ ಕೃತ್ಯದ ವಸ್ತುಗಳು ಪತ್ತೆ..!

ಕೊಯಮತ್ತೂರಿನ ಉಕ್ಕಡಂ ಪ್ರದೇಶದ ಕೊಟ್ಟಾಯಿ ಈಶ್ವರನ್ ದೇಗುಲದ ಎದುರು ಸ್ಫೋಟವಾಗಿದೆ. ಬೆಳಗ್ಗೆ 4 ಗಂಟೆಗೆ ಸ್ಫೋಟಕ್ಕೂ ಮುನ್ನ ಮುಬೀನ್ ಸಿಲಿಂಡರ್ ಲೋಡ್ ಮಾಡ್ತಿರೋ ಸಿಸಿಟಿವಿ ದೃಶ್ಯ ಪೊಲೀಸರಿಗೆ ಲಭ್ಯವಾಗಿದೆ. ಮಾರುತಿ ಕಾರ್​ನಲ್ಲಿ ಸ್ಫೋಟದಿಂದ ದೇಗುಲದ ಮುಂಭಾಗ ಸ್ವಲ್ಪ ಹಾನಿಯಾಗಿದೆ, ಬೇರೆ ಯಾರೂ ಗಾಯಗೊಂಡಿಲ್ಲ. ಓರ್ವ ಕಾರಿನಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆದರೆ ಸ್ಫೋಟ ನಡೆದ ಸ್ಥಳದಲ್ಲಿ 2 ಗ್ಯಾಸ್ ಸಿಲಿಂಡರ್, ಮಾರ್ಬಲ್​ಗಳು, ಮೊಳೆಗಳು, ಬೇರಿಂಗ್ ಬಾಲ್​​ಗಳು ಪತ್ತೆಯಾಗಿದ್ದವು. ಇದು ಉಗ್ರರ ದುಷ್ಕೃತ್ಯ ಎಂಬುದನ್ನು ಸಾಕ್ಷೀಕರಿಸಿತ್ತು.

ಸಾವಿಗೂ ಮುನ್ನವೇ ಶವದ ಮೆರವಣಿಗೆ ಬಗ್ಗೆ ಸಂದೇಶ

2019ರ ಚರ್ಚ್​ ಸ್ಫೋಟದಲ್ಲಿ ಸಾಕ್ಷ್ಯಾಧಾರ ಕೊರತೆಯಿಂದ ಬಿಡುಗಡೆಯಾಗಿದ್ದ ಮುಬೀನ್ ಮನೆಯಲ್ಲಿ ಪೊಟ್ಯಾಶಿಯಂ ನೈಟ್ರೇಟ್, ಅಲ್ಯೂಮಿನಿಯಂ ಪೌಡರ್, ಸಲ್ಫರ್, ಚಾರ್ಕೋಲ್ ಪತ್ತೆಯಾಗಿದೆ. ಸ್ಫೋಟಕ್ಕೆ ಬಳಕೆಯಾಗುವ ರಾಸಾಯನಿಕಗಳು ಲಭ್ಯ ಆಗಿರೋದು ಸ್ಫೋಟದ ಯೋಜನೆಯನ್ನು ಮತ್ತಷ್ಟು ದೃಢಪಡಿಸಿದೆ. ಮುಬೀನ್ ಮೊಬೈಲ್​ನಲ್ಲೂ ಅನುಮಾನಾಸ್ಪದ ಮಾಹಿತಿಗಳು ಪತ್ತೆಯಾಗಿವೆ. ಆತ್ಮಹತ್ಯಾ ದಾಳಿ ಎನ್ನುವುದನ್ನು ಖಚಿತ ಮಾಡುತ್ತಿವೆ. ನಾನು ಮೃತಪಟ್ಟರೆ ನನ್ನ ತಪ್ಪುಗಳನ್ನು ಕ್ಷಮಿಸಿ. ನನ್ನ ಅಂತಿಮಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂದು ಬರೆದುಕೊಂಡಿದ್ದನು ಎನ್ನುವುದು ತನಿಖೆಯಲ್ಲಿ ಬಯಲಾಗಿದೆ. ಇದೀಗ 8 ಜನರನ್ನು ವಶಕ್ಕೆ ಪಡೆದು ತನಿಖೆ ಮಾಡಲಾಗ್ತಿದೆ. ಉಗ್ರರ ಲಿಂಕ್ NIA ಅಖಾಡಕ್ಕೆ ಇಳಿಯುವ ಸಾ

Related Posts

Don't Miss it !