ಟೆಕ್ಕಿ ಮನೆಯಲ್ಲಿ ಸತ್ತ 19 ವರ್ಷದ ಯುವತಿ.. ಆತ್ಮಹತ್ಯೆಯೋ..? ಕುಡಿದ ಮತ್ತಿನ ಕೊಲೆಯೋ..?

ಬೆಂಗಳೂರು ಹೊಸ ವರ್ಷವನ್ನು ಸ್ವಾಗತ ಮಾಡುವ ಗಲಿಬಿಲಿಯಲ್ಲಿತ್ತು. ಬೆಳ್ಳಂದೂರಿನ ಫ್ಲಾಟ್​ ಒಂದರಲ್ಲಿ 19 ವರ್ಷದ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಬೆಳಗ್ಗೆ ತಮಿಳುನಾಡಿನಿಂದ ಬಂದ ಕುಟುಂಬಸ್ಥರು, ಮಗಳ ಶವ ಕಂಡು ಕಣ್ಣೀರು ಸುರಿಸಿದ್ದರು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣು ಮಗಳಲ್ಲ, ಯಾರೋ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಬೆಳ್ಳಂದೂರು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸೇಂಟ್​ ಜಾನ್ಸ್​ ಆಸ್ಪತ್ರೆಗೆ ರವಾನೆ ಮಾಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಬಗ್ಗೆ ನಿಖರ ಕಾರಣ ಗೊತ್ತಾಗಬೇಕಿದೆ. ಫ್ಲಾಟ್​​ನಲ್ಲಿ ಕೆಲಸ ಮಾಡಿ ಕೊಠಡಿಗೆ ಹೋಗಬೇಕಿತ್ತ ಕವಿತಾ ಫ್ಲಾಟ್​ನ ಸ್ನಾನದ ಮನೆಯಲ್ಲಿ ನೇಣು ಹಾಕಿಕೊಂಡಿದ್ದು ಯಾಕೆ ಎನ್ನುವ ಅನುಮಾನ ಕಾಡುತ್ತಿದೆ.

ಕೊಲೆ ಎನ್ನುವುಕ್ಕೆ ಇದೆ ಬಲವಾದ ಅನುಮಾನ..!

ಗಂಡ, ಹೆಂಡತಿ ಇಬ್ಬರು ಟೆಕ್ಕಿಗಳಾಗಿ ಕೆಲಸ ಮಾಡ್ತಿದ್ದು, ಪುಟ್ಟ ಮಗುವಿದ್ದು, ಮಗುವನ್ನು ನೋಡಿಕೊಳ್ಳುವ ಉದ್ದೇಶದಿಂದ ತಮಿಳುನಾಡು ಮೂಲದ ಕವಿತಾ ಎಂಬಾಕೆಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಎಸ್​ಎಸ್​ಎಲ್​ಸಿ ಪರೀಕ್ಷೆ ಮುಗಿಸಿದ ಬಳಿಕ ಬೆಂಗಳೂರಿಗೆ ಬಂದಿದ್ದ ಕವಿತಾ ಎಂಬಾಕೆಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರು. ತಮ್ಮದೆ ಫ್ಲಾಟ್​ನಲ್ಲಿ ವಾಸಕ್ಕೆ ಕೊಠಡಿಯನ್ನೂ ನೀಡಿದ್ರು. ಡಿಸೆಂಬರ್​ 31ರ ರಾತ್ರಿ ಟೆಕ್ಕಿ ಮನೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು. ಆ ವೇಳೆ ಕೊಠಡಿಗೆ ಹೋಗಿದ್ದ ಯುವತಿ ಕವಿತಾ ಆತ್ಮಹತ್ಯೆಗೆ ಶರಣಾಗಿದ್ದಳು ಎನ್ನುವುದು ಟೆಕ್ಕಿ ಕುಟುಂಬಸ್ಥರ ಮಾತು. ಆದರೆ, ಟೆಕ್ಕಿ ಮನೆಯಲ್ಲಿ ಅವರ ಪತ್ನಿ ಇರಲಿಲ್ಲ, ಬೇರೆ ಏನೋ ಆಗಿದೆ ಎನ್ನುವ ಗುಮಾನಿ ಕಾಡುತ್ತಿದೆ.

ರಾತ್ರಿ ಪೂರ್ತಿ ಕರೆ ಮಾಡಿದ್ರೂ ನೋ ರೆಸ್ಪಾನ್ಸ್​..!

ಟೆಕ್ಕಿ ವಿವೇಕ್ ನಿವಾಸದಲ್ಲೇ ಉಳಿದುಕೊಳ್ತಿದ್ದ ಕವಿತಾ ಕೆಲಸ ಮುಗಿದ ಬಳಿಕ ತನ್ನ ಹುಟ್ಟೂರು ತಮಿಳುನಾಡಿನಲ್ಲಿದ್ದ ಅಪ್ಪ, ಅಮ್ಮನಿಗೆ ​ಫೋನ್​ ಮಾಡಿ ಮಾತನಾಡುತ್ತಿದ್ದಳು. ಡಿಸೆಂಬರ್​ 31ರ ರಾತ್ರಿ ಮಗಳು ಫೋನ್​ ಮಾಡಿಲ್ಲ ಎನ್ನುವ ಕಾರಣಕ್ಕೆ ಪೋಷಕರೇ ಆಕೆಗೆ ಫೋನ್​ ಮಾಡಿದ್ದರು. ಸಾಕಷ್ಟು ಬಾರಿ ಫೋನ್​ ಮಾಡಿದರೂ ರಿಸೀವ್​ ಮಾಡಿರಲಿಲ್ಲ. ಬೆಳಗ್ಗೆ 9.30ರ ವೇಳೆಗೆ ಕವಿತಾ ಪೋಷಕರಿಗೆ ಕರೆ ಮಾಡಿ, ನಿಮ್ಮ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕರೆ ಕಟ್​ ಮಾಡಿದ್ದರು. 8 ತಿಂಗಳ ಕಾಲ ತನ್ನ ಮಗುವನ್ನು ನೋಡಿಕೊಂಡಿದ್ದ ಯುವತಿ ಸಾವಿನ ಬಗ್ಗೆ ಅಸ್ಪಷ್ಟ ಮಾಹಿತಿ ನೀಡಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಪ್ರೀತಿ ಪ್ರೇಮದ ಹೊಸ್ತಿಲಲ್ಲಿ ಎಡವಿದ್ಲಾ ಕವಿತಾ..!?

ಕವಿತಾ ಹದಿಹರೆಯದ ವಯಸ್ಸಿನ ಹೆಣ್ಣು. ಹೊಸ ವರ್ಷದ ಸಂಭ್ರಮದಲ್ಲಿದ್ದ ಯುವತಿ ಕವಿತಾ ಎಸ್​ಎಸ್​ಎಲ್​ಸಿ ಪರೀಕ್ಷೆ ಬಳಿಕ ಕಾಲೇಜು ಮೆಟ್ಟಿಲು ಹತ್ತದಿದ್ದರೂ ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕಿದ್ದಳೇ..? ಎನ್ನುವ ಬಗ್ಗೆ ಬೆಳ್ಳಂದೂರು ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಒಂದು ವೇಳೆ ಮನೆ ಮಾಲೀಕ ಕುಡಿದ ಜ್ಞಾನದಲ್ಲಿ ಯುವತಿ ಮೇಲೆ ಹಲ್ಲೆ ಮಾಡಿದನೋ..? ಅಥವಾ ಹೆಂಡತಿ ಇಲ್ಲದ ಸಮಯದಲ್ಲಿ ಈಕೆಯನ್ನು ಕಾಮತೃಷೆಗೆ ಏನಾದರೂ ಬಳಸಿಕೊಂಡನೋ..? ಆ ಸಂಕಷ್ಟದಲ್ಲಿ ನೊಂದುಕೊಂಡು ಆತ್ಮಹತ್ಯೆಗೆ ಶರಣಾದಳೋ..? ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಎಲ್ಲಾ ಅನುಮಾನಗಳಿಗೂ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಪೊಲೀಸರ ಎಲ್ಲಾ ಅನುಮಾನಗಳಿಗೆ ಉತ್ತರ ಸಿಗಲಿದೆ.

Related Posts

Don't Miss it !