ತಮಿಳುನಾಡಿನಲ್ಲಿ ಯಾರೇ ಗೆದ್ದರೂ ಕರ್ನಾಟಕಕ್ಕೆ ಹೊಡೆತ..!?

ಮೋದಿ ಭೇಟಿ‌ ಮಾಡಿದ ಸ್ಟಾಲಿನ್..!

ತಮಿಳುನಾಡಲ್ಲಿ ಸರ್ಕಾರ ಬರುತ್ತೆ ಸರ್ಕಾರ ಹೋಗುತ್ತೆ. ಆದರೆ ಯಾವುದೇ ಸರ್ಕಾರ ಬಂದರೂ‌ ಕರ್ನಾಟಕದ ಜೊತೆಗೆ ಸೌಹಾರ್ದಯುತ ನಡವಳಿಕೆ ನಿರೀಕ್ಷೆ ಮಾಡುವಂತಿಲ್ಲ. ಈ ಹಿಂದೆ ಕರ್ನಾಟಕದ ಹೆಣ್ಣು ಮಗಳೇ ಆದ ದಿವಂಗತ ಕು. ಜಯಲಲಿತಾ ತಮಿಳುನಾಡು ಮುಖ್ಯಮಂತ್ರಿ ಆದಾಗಲೂ ಕರ್ನಾಟಕದ ಜೊತೆಗೆ ಸ್ನೇಹ ಸಂಬಂಧವೇನು ಇರಲಿಲ್ಲ. ಆ ಬಳಿಕ ಕರುಣಾನಿಧಿ ಸರ್ಕಾರ ಬಂದ ಮೇಲೆ ಪರಿಸ್ಥಿತಿ‌ ಏನು ಬದಲಾಗಲಿಲ್ಲ. ಆಗಲೂ ಅದೇ ಕಾವೇರಿ ಗಲಾಟೆ. ಇದಕ್ಕೆ ಕಾರಣ ಅಲ್ಲಿನ ಜನತೆ ಪ್ರಾದೇಶಿಕ ಪಕ್ಷಗಳನ್ನೆ ರಾಜ್ಯದ ಆಡಳಿತಕ್ಕೆ ಆಯ್ಕೆ ಮಾಡಿಕೊಳ್ಳುವ‌ ನಿರ್ಧಾರ ಆಗಿದೆ.

ಪ್ರಾದೇಶಿಕ ಪಕ್ಷಗಳು ಕೇಂದ್ರ ಸರ್ಕಾರದ ಮಿತ್ರ..!

ಯಾವುದೇ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ಅಸ್ತಿತ್ವ ಇಲ್ಲದಿದ್ದರೆ ಅಲ್ಲಿ‌ ಪ್ರಾದೇಶಿಕ ಪಕ್ಷಗಳನ್ನು ಕೇಂದ್ರ ಸರ್ಕಾರಗಳು ಓಲೈಸುವುದು ಸರ್ವೇ ಸಾಮಾನ್ಯ. ತಮಿಳುನಾಡು ಜನರು ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳನ್ನು ಗೆಲ್ಲುಸುವ ಛಲ ತೋರಿಸಿಲ್ಲ. ಆ ನಿರ್ಧಾರವೇ‌ ಸದಾ ಕಾಲ ಭಾರತ ಸರ್ಕಾರ ತಮಿಳುನಾಡು ಪರವಾಗಿ ನಿಲ್ಲುವಂತೆ ಮಾಡಿದೆ. ಯಾವುದೇ ಸರ್ಕಾರ ಕೇಂದ್ರದಲ್ಲಿ ಇರಲಿ, ಯಾವುದೇ ಸರ್ಕಾರ ತಮಿಳುನಾಡಿನಲ್ಲಿ ಇರಲಿ ಓಲೈಕೆ ಸರ್ವೇ ಸಾಮಾನ್ಯ. ಈಗಲೂ ಡಿಎಂಕೆ ಸರ್ಕಾರ ಕೇಂದ್ರದ ಮೋದಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಆ ಪ್ರಸ್ತಾವನೆ ಕರ್ನಾಟಕ ಪಾಲಿಗೆ ಮುಖುವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

ಕರ್ನಾಟಕಕ್ಕೆ ಈಗ ಎದುರಾದ ಸಮಸ್ಯೆ ಏನು..?

ತಮಿಳುನಾಡಿನ ರಾಜಕೀಯದ ದಿಗ್ಗಜರಾಗಿದ್ದ ಜಯಲಲಿತಾ ಹಾಗೂ ಎಂ ಕರುಣಾನಿಧಿ ನಿಧನದ ಬಳಿಕ ನಡೆದ ಮೊದಲು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷ ಜಯಭೇರಿ ಬಾರಿಸಿದ್ದು ಎಂ.ಕೆ ಸ್ಟಾಲಿನ್ ಮುಖ್ಯಮಂತ್ರಿ ಆಗಿದ್ದಾರೆ. ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಲವೊಂದು ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದರಲ್ಲಿ ಮೇಕೆದಾಟು ಯೋಜನೆಗೆ ಕೊಟ್ಟಿರುವ ಅನುಮತಿಯನ್ನು ವಾಪಸ್ ಪಡೆದುಕೊಳ್ಳಬೇಕು ಎನ್ನುವುದು ಬಹಳ ಪ್ರಮುಖ ಅಂಶವಾಗಿದೆ.

ತಮಿಳುನಾಡು ಪ್ರಸ್ತಾವನೆ ಪ್ರಮುಖ ಅಂಶ

ಮೇಕೆ ದಾಟು ವಿಷಯದಲ್ಲಿ ತಮಿಳುನಾಡಿನ ಕ್ಯಾತೆ ಮುಂದುವರಿದಿದ್ದು, ಕರ್ನಾಟಕದ ಮೇಕೆದಾಟು ಯೋಜನೆಗೆ ಅಂಗೀಕಾರ ನೀಡದಂತೆ ಆಗ್ರಹ ಮಾಡಲಾಗಿದೆ. ಈ ಮಳೆಗಾಲದಲ್ಲಿ ಇನ್ನೂ ಕೃಷ್ಣರಾಜ ಸಾಗರ ಅಣೆಕಟ್ಟು ಭರ್ತಿ ಆಗುವ ಮುನ್ನವೇ ಕಾವೇರಿ ನೀರು ಸಮರ್ಪಕ ಬಿಡುಗಡೆಗೂ ಆಗ್ರಹ ಮಾಡಲಾಗಿದೆ. ಇಷದೆ ಮುಳ್ಳೈಪೆರಿಯಾರ್ ಡ್ಯಾಂ ಎತ್ತರ ಕರ್ನಾಟಕ ವಿರೋಧ ಮಾಡಿದೆ. ಆದರೆ ಇದೀಗ ಪ್ರಧಾನಿಗೆ ಕೊಟ್ಟಿರುವ ಪ್ರಸ್ತಾವನೆಯಲ್ಲಿ ಕರ್ನಾಟಕದ ವಿರೋಧದ ನಡುವೆಯೂ ಡ್ಯಾಂ ಎತ್ತರಿಸಲು ಅನುಮತಿ ನೀಡುವಂತೆ ಒತ್ತಾಯ ಮಾಡಲಾಗಿದೆ. ಜೊತೆಗೆ ಕಾವೇರಿ – ಗೋಂಡಾರು ನದಿ ಜೋಡಣೆಗೂ ಸ್ಟಾಲಿನ್ ಮನವಿ ಮಾಡಿದ್ದಾರೆ. ಕರ್ನಾಟಕದ ವಿರೋಧಿಸಿದ ನದಿ ಜೋಡಣೆಗೂ ತಮಿಳುನಾಡು ಯತ್ನಿಸುತ್ತಿದೆ.

ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಮೇಲೆ‌ ಒಲವು..!

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಸ್ವರ್ಗವೇ ಧರೆಗೆ ಇಳಿದು ಬರಲಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದರೆ ಕಳೆದ ಎರಡು ವರ್ಷಗಳಿಂದ ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ತಮಿಳುನಾಡಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಆದರೆ ಅಲ್ಲಿ ಗೆದ್ದಿರುವ ಪಕ್ಷವನ್ನೇ ಓಲೈಕೆ ಮಾಡಿಕೊಂಡರೆ ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷಗಳಿಗೆ ಕಾಯ್ದೆಗಳನ್ನು ರೂಪಿಸುವಾಗ ಅನುಕೂಲ ಆಗಲಿದೆ. ಅದೇ ಕಾರಣಕ್ಕೆ ಕೇಂದ್ರ ಸರ್ಕಾರಗಳು ಪ್ರಾದೇಶಿಕ ಪಕ್ಷಗಳನ್ನು ಓಲೈಸುವ ಕೆಲಸ ಮಾಡುತ್ತವೆ. ಇದೀಗ ಸ್ಟಾಲಿನ್ ಸರ್ಕಾರ ಓಲೈಸಲು ಕರ್ನಾಟಕದ ಯೋಜನೆ ಹಳ್ಳ ಹಿಡಿದರೂ ಅಥವಾ ತಮಿಳುನಾಡು ಯೋಜನೆ ಜಾರಿಯಾದರೂ ಅಚ್ಚರಿ ಏನಿಲ್ಲ.

Related Posts

Don't Miss it !