ಮನೆ ಮೇಲೆ ಪಾರಿವಾಳ ಕುಳಿತರೆ ಕಳ್ಳತನದ ಮುನ್ಸೂಚನೆ..! ಬೀ ಅಲರ್ಟ್​

ಮನೆ ಮೇಲೆ ಸಾಕಷ್ಟು ಪಕ್ಷಗಳಿಗಳು ಕುಳಿತುಕೊಳ್ಳುವುದು ಸಾಮಾನ್ಯ ಸಂಗತಿ. ಆದ್ರೆ ಬೆಂಗಳೂರಿನಲ್ಲಿ ಮನೆ ಮೇಲೆ ಸಾಕಿರುವ ಪಾರಿವಾಳ ಬಂದು ಕುಳಿತಿದೆ ಎಂದರೆ ಸ್ವಲ್ಪ ಹುಷಾರಾಗಿ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಪಾರಿವಾಳದ ನೆಪದಲ್ಲೇ ಕಳ್ಳತನ ಮಾಡುವ ಚಾಣಕ್ಯನೊಬ್ಬ ಪೊಲೀಸರ ಅತಿಥಿ ಆಗಿದ್ದಾನೆ. ಈ ಮೂಲಕ ಮೂರು ಮನೆಗಳಲ್ಲಿ ನಡೆದಿದ್ದ ಕಳ್ಳತನವನ್ನು ಪೊಲೀಸರು ಬೇಧಿಸಿದ್ದಾರೆ. ಕಳವು ಮಾಡಿದ್ದ 100 ಗ್ರಾಂ ಚಿನ್ನಾಭರಣಗಳನ್ನೂ ವಶಕ್ಕೆ ಪಡೆದಿದ್ದಾರೆ. ಪರಿವಾಳಗಳನ್ನು ಸಾಕುತ್ತಿದ್ದ ಉದ್ದೇಶವೇ ಕಳ್ಳತನ ಮಾಡುವುದಕ್ಕೆ ಎನ್ನುವ ಮಾಹಿತಿ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಪಾರಿವಾಳ ಸಾಕಿ ಹಾರಿಸುವುದು ಹೆಮ್ಮೆ..!

ಬೆಂಗಳೂರು ಸೇರಿದಂತೆ ಪ್ರಮುಖ ನಗರಳ ನಿವಾಸಿಗಳು ಪಾರಿವಾಳವನ್ನು ಸಾಕುತ್ತಾರೆ. ಮನೆ ಮೇಲೆ ಪಾರಿವಾಳಗಳಿಗೆಂದೇ ಪ್ರತ್ಯೇಕ ಕೊಠಡಿಯನ್ನೂ ಮೀಸಲಿಡುತ್ತಾರೆ. ವರ್ಷದಲ್ಲಿ ಹಲವಾರು ಪಂದ್ಯಗಳನ್ನು ಆಯೋಜಿಸಿ ಪಾರಿವಾಳಗಳ ಹಾರಾಟದ ಸ್ಪರ್ಧೆ ಆಯೋಜನೆ ಮಾಡುತ್ತಾರೆ. ಆದರೆ ಚೆನ್ನಮ್ಮನಕೆರೆ ಅಚ್ಚುಕಟ್ಟೆ ಪ್ರದೇಶ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಡ್​ ನಾಗ ಪಾರಿವಾಳಗಳನ್ನು ಸಾಕಿಕೊಂಡು ಕಳ್ಳತನ ಮಾಡುವ ಹವ್ಯಾಸ ಬೆಳೆರಸಿಕೊಂಡಿದ್ದ. ಪಾರಿವಾಳ ಹಿಡಿಯುವ ನೆಪದಲ್ಲಿ ಕಳವು ಮಾಡುವ ಯೋಜನೆ ರೂಪಿಸುತ್ತಿದ್ದ. ಯಾರಿಗೂ ಅನುಮಾನ ಬಾರದಂತೆ ಕಳ್ಲತನ ಮಾಡಿ ಶೋಕಿ ಜೀವನದ ದಾಸನಾಗಿದ್ದ ಎನ್ನಲಾಗಿದೆ.

ಬ್ಯಾಡ್ ನಾಗ, ಮನೆಗಳ್ಳ

Read this;

ಕನ್ನ ಹಾಕೋಕೆ ಪಾರಿವಾಳ ಹೇಗೆ ಬಳಸ್ತಿದ್ದ..!?

ನಗರದಲ್ಲಿ ಇರುವ ಐಷಾರಾಮಿ ಡೂಪ್ಲೆಕ್ಸ್ ಮನೆಗಳನ್ನು ಟಾರ್ಗೆಟ್ ಮಾಡಿ ಲಿಸ್ಟ್​ ಮಾಡಿಕೊಳ್ತಿದ್ದ ಬ್ಯಾಡ್​ ನಾಗ, ಸಮಯ ನೋಡಿಕೊಂಡು ತನ್ನ ಪಾರಿವಾಳವನ್ನು ಆ ಕಟ್ಟಡದ ಮೇಲೆ ಕೂರುವಂತೆ ಹಾರಿಸುತ್ತಿದ್ದ. ಪಾರಿವಾಳ ಡೂಪ್ಲೆಕ್ಟ್​ ಕಟ್ಟಡದ ಮೇಲೆ ಕೂರುತ್ತಿದ್ದ ಹಾಗೆ ಮನೆಗೆ ಎಂಟ್ರಿ ಕೊಡ್ತಿದ್ದ ಬ್ಯಾಡ್​ ನಾಗ, ನಿಮ್ಮ ಮನೆ ಮೇಲೆ ನಮ್ಮ ಪಾರಿವಾಳ ಕುಳಿತುಕೊಂಡಿದೆ. ಹಿಡಿದುಕೊಳ್ಬೇಕು ಎನ್ನುವ ನೆಪ ಹೇಳಿ ಮನೆಯೊಳಕ್ಕೆ ಹೋಗ್ತಿದ್ದ. ಆ ಬಳಿಕ ಟೆರೇಸ್​ ತಲುಪುವ ಮುನ್ನ ಮನೆಯೊಳಗೆ ಏನೇನು ಎಲ್ಲೆಲ್ಲಿ ಇದೆ..? ಕಿಟಕಿ, ಬಾಗಿಲು, ಬೀರ್​, ರೂಮ್​ ಹೀಗೆ ಪ್ರತಿವೊಂದನ್ನು ಗಮನಿಸಿಕೊಂಡು ಹೋಗಿ ಪಾರಿವಾಳ ಹಿಡಿದು ಬರ್ತಿದ್ದ. ವಾಪಸ್​ ಬರುವ ಮುನ್ನ ಕಳ್ಳತನಕ್ಕೆ ಯಾವ ಕಡೆಯಿಂದ ಬರಬೇಕು, ಯಾವ ಕಡೆಯಿಂದ ಹೋಗಬೇಕು ಎನ್ನುವ ಲೆಕ್ಕಾಚಾರ ಹಾಕಿಬಿಡುತ್ತಿದ್ದ.

Also read;

ಪಾರಿವಾಳ ಹಾರಿಸಿ ಸಿಕ್ಕಿಬಿದ್ದಿದ್ದು ಹೇಗೆ..?

ಪಾರಿವಾಳ ಹಿಡಿಯುವ ನೆಪದಲ್ಲಿ ಮನೆಯೊಳಕ್ಕೆ ಎಂಟ್ರಿ ಕೊಟ್ಟು ಸ್ಕೆಚ್​ ಹಾಕಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಥವಾ ಮನೆಯವರು ಪ್ರವಾಸಕ್ಕೆ ಹೋದ ಸಮಯದಲ್ಲಿ ಕಳ್ಳತನ ಮಾಡೋದು ಈತನ ರೂಢಿ. ಆದರೆ ಈತ ಕೇವಲ ಡೂಪ್ಲೆಕ್ಸ್​ ಮನೆಗಳನ್ನು ಮಾತ್ರ ಕಳವು ಮಾಡುತ್ತಿದ್ದ ವಿಚಾರವೇ ಈತನ ಪಾಲಿಗೆ ಬಂಧನ ಶಾಸನವಾಗುತ್ತೆ ಎಂದು ಈತ ಊಹಿಸಿರಲಿಲ್ಲ. ಕಳವು ಆದ ಬಳಿಕ ಪ್ರಕರಣಗಳು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದವು. ಎಲ್ಲಾ ಮನೆಗಳೂ ಡೂಪ್ಲೆಕ್ಸ್​ ಎನ್ನುವ ವಿಚಾರ ಪೊಲೀಸರ ಕಣ್ಣಿಗೆ ಬಿತ್ತು. ಇತ್ತೀಚಿಗೆ ನಿಮ್ಮ ಮನೆಗೆ ನಿಮ್ಮ ಏರಿಯಾದ ಯಾರೆಲ್ಲಾ ಬಂದಿದ್ದರು. ಚಂದಾ ವಸೂಲಿಗೆ, ಮನೆ ನೋಡೋದಕ್ಕೆ ಹೀಗೆ ಹತ್ತಾರು ಪ್ರಶ್ನೆಗಳನ್ನು ಹಾಕಿದ್ರು. ಈ ವೇಳೆ ಪಾರಿವಾಳ ಹಿಡಿಯೋಕೆ ಬಂದಿದ್ದ ಬ್ಯಾಡ್​ ನಾಗನ ಮಾಹಿತಿ ಪೊಲೀಸರ ಕೈ ಸೇರಿತ್ತು. ಖತರ್ನಾಕ್​ ಐಡಿಯಾ ಮಾಡಿ ಕಳ್ಳತನ ಮಾಡಿ ಜಿಂದಾಲಾಲಾ ಮಾಡ್ತಿದ್ದ ನಾಗನ ಕೈಗೆ ಕೋಳ ಹಾಕಿತ್ತು ಖಾಕಿಪಡೆ.

Related Posts

Don't Miss it !