5 ಜನರು ಸತ್ತು 5 ತಿಂಗಳಾಯ್ತು..! ಎಲ್ಲರೂ ದೆವ್ವಗಳಾದ್ರಾ..? ಕಳ್ಳನನ್ನು ರಕ್ಷಿಸಿದ ದೇವರ ಮನೆ..!?

ಬೆಂಗಳೂರಿನ ಬ್ಯಾಡರಹಳ್ಳಿ ಬಳಿಯ ತಿಗಳರ ಪಾಳ್ಯದಲ್ಲಿ 3 ಅಂತಸ್ಥಿನ ಕಟ್ಟಡ. ಮಂಡ್ಯದ ಹಲ್ಲೆಗೆರೆ ಮೂಲದ ಶಂಕರ್​ ಎಂಬುವರ ನಿವಾಸ. ಇಬ್ಬರು ಹೆಣ್ಣು ಮಕ್ಕಳು ಹಾಗೂ ಹೆಂಡತಿ ಮತ್ತು ಶಂಕರ್ ಪುತ್ರ ಆತ್ಮಹತ್ಯೆಗೆ ಶರಣಾಗಿದ್ದರು. ಸಾಯುವ ಮುನ್ನ ಶಂಕರ್​ ಅವರ ಮಗಳ 9 ತಿಂಗಳ ಪುಟ್ಟ ಮಗುವನ್ನು ಕೊಲೆ ಮಾಡಿ, ಸಾವಿಗೆ ತಂದೆಯೇ ಕಾರಣ ಎಂದು ಪತ್ರ ಬರೆದಿಟ್ಟು ಎಲ್ಲರೂ ತಮ್ಮ ತಮ್ಮ ರೂಮಿನಲ್ಲಿ ನೇಣಿಗೆ ಶರಣಾಗಿದ್ದರು. ಆ ಬಳಿಕ ಮನೆ ಮಾಲೀಕ ಶಂಕರ್​ ಬಂಧಿಸಿದ ಪೊಲೀಸರು, ಆತ್ಮಹತ್ಯೆಗೆ ಕಾರಣನಾದ ಆರೋಪದ ಮೇಲೆ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. ಆದರೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮನೆಯನ್ನು ಪೊಲೀಸರು ಸೀಜ್​ ಮಾಡಿದ್ದಾರೆ. ಆದರೆ ಆ ಮನೆಯಲ್ಲಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಇರುವುದು ಖಚಿತವಾಗಿದ್ದ ಹಿನ್ನೆಲೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿತ್ತು. ಆದರೆ ಅಷ್ಟರಲ್ಲಿ ನಡೆಯಬಾರದ ಘಟನೆಯೊಂದು ನಡೆದಿದೆ ಅಂತೆ..!!

ಇದನ್ನೂ ಓದಿ: ಒಂದೇ ಕುಟುಂಬದ ಐವರ ಸಾವು, ಮೂವರಿಗೆ ಜೈಲು, ಪ್ರಚೋದನೆಗೆ ಶಿಕ್ಷೆ ಆಗುತ್ತಾ..?

ಭೂತ ಬಂಗಲೆ ಎಂಟ್ರಿ ಕೊಟ್ಟಿದ್ದ ಗಟ್ಟಿ ಗುಂಡಿಗೆ ಕಳ್ಳ..!

2021ರ ಸೆಪ್ಟೆಂಬರ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸ್ಥಳ ಮಹಜರು ಮಾಡಿದ್ದ ಪೊಲೀಸರು ಆರೋಪಿ ಶಂಕರ್​ನನ್ನು ಬಂಧಿಸಿ ಮನೆಯನ್ನು ಸೀಜ್​ ಮಾಡಿದ್ದರು. ಕೋಟಿ ಕೋಟಿ ಬೆಳೆಬಾಳುವ ಮನೆ ಭೂತ ಬಂಗಲೆ ಎನ್ನುವ ಅಪಖ್ಯಾತಿಗೂ ಒಳಗಾಗಿತ್ತು. ವಿದ್ಯುತ್​ ಬಿಲ್​ ಪಾವತಿ ಮಾಡದ ಕಾರಣ ಕಳೆದ ಕೆಲವು ತಿಂಗಳ ಹಿಂದೆ ವಿದ್ಯುತ್​ ಸಂಪರ್ಕ ಕಡಿತ ಕೂಡ ಮಾಡಲಾಗಿತ್ತು. ಈ ನಡುವೆ ಫೆಬ್ರವರಿ 1 ರ ರಾತ್ರಿ ಆ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಬೆಳಕು ಗೋಚರವಾಗಿತ್ತು. ಅಕ್ಕಪಕ್ಕದ ಮನೆಯವರ ಎದೆ ಬಡಿತ ಹೆಚ್ಚಾಗಿತ್ತು. ಕತ್ತಲೆ ಕೂಪದಲ್ಲಿದ್ದ ಮನೆಯಲ್ಲಿ ಬೆಳಕು ಬಿಟ್ಟವರು ಯಾರು..? ಪೊಲೀಸರು ಸೀಜ್​ ಮಾಡಿದ್ದ ಮನೆ ಒಳಕ್ಕೆ ಹೋಗುವುದಕ್ಕೆ ಯಾರಿಗೆ ಧೈರ್ಯವಿದೆ ಎಂದು ಚರ್ಚೆ ಮಾಡಿದ್ದರು. ಆ ವೇಳೆಗೆ ಆ ಮನೆಯಿಂದ ಘನಘೋರ ಶಬ್ಧವೊಂದು ಹೊರಕ್ಕೆ ಕೇಳಿಸಿತ್ತು. ದೆವ್ವ ದೆವ್ವ, ಕಾಪಾಡಿ ಕಾಪಾಡಿ ಎನ್ನುವ ಚೀರಾಟ ಅಕ್ಕಪಕ್ಕದ ನಿವಾಸಿಗಳನ್ನು ಭಯಭೀತರನ್ನಾಗಿ ಮಾಡಿತ್ತು. ಸುತ್ತಮುತ್ತ ನಿವಾಸಿಗಳೆಲ್ಲಾ ಧೈರ್ಯ ಮಾಡಿ ಮನೆ ಒಳಕ್ಕೆ ಹೋದಾಗ ಕಳ್ಳನೊಬ್ಬ ಸಿಕ್ಕಿಬಿದ್ದ, ಆದರೆ ಕಿರುಚಿದ ಕಾರಣ ಕೇಳಿ ಜನರೇ ನಡುಗಿದ್ದರು.

ಐಶಾರಾಮಿ ಬಂಗಲೆ

ಇದನ್ನೂ ಓದಿ: ಹಿಂದೂ – ಮುಸಲ್ಮಾರ ನಡುವಿನ ಕೊಂಡಿಯಾಗಿದ್ದ ಇಬ್ರಾಹಿಂ ಇನ್ನಿಲ್ಲ..!

ಅಮವಾಸ್ಯೆ ದಿನ, ಕದ್ದ ಚಿನ್ನಾಭರಣ ಮನೆ ಬಿಟ್ಟು ಬರಲಿಲ್ಲ..!!

ಫೆಬ್ರವರಿ 1 ರಂದು ಅಮವಾಸ್ಯೆ, ಕಳ್ಳ ಮೊದಲೇ ಸ್ಕೆಚ್​ ಹಾಕಿದ್ದಂತೆ ಐಶಾರಾಮಿ ಬಂಗಲೆಯ ಕಳ್ಳತನ ಮಾಡಿ ಆಗಿತ್ತು. ಕೇಜಿಗಟ್ಟಲೆ ಬೆಳ್ಳಿ ವಸ್ತುವಗಳು, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಗಂಟು ಮೂಟೆ ಕಟ್ಟಿಕೊಂಡು ಅಲ್ಲಿಂದ ಎಸ್ಕೇಪ್​ ಆಗಲು ಸಿದ್ಧನಾಗಿದ್ದ. ಹಿಂಬಾಗಿಲು ಮುರಿದು ಒಳಕ್ಕೆ ಬಂದಿದ್ದ ಖದೀಮ ಭರತ್​, ಅದೇ ಬಾಗಿಲು ಮೂಲಕ ವಾಪಸ್​ ಹೋಗಲು ಸಿದ್ಧನಾಗಿದ್ದ. ಆದರೆ ಅದೇ ಸಮಯಕ್ಕೆ ನೆರಳು ಬೆಳಕಿನ ಆಟ ಶುರುವಾಗಿತ್ತು. ಕತ್ತಲಲ್ಲೇ ಕಳ್ಳತನ ಮಾಡಿ ಮುಗಿಸಿದ್ದ ಭರತ್​​ಗೆ ವಿಚಿತ್ರ ನೆರಳು ಕಾಣಿಸಿತ್ತು. ಕತ್ತಲಲ್ಲಿ ನೆರಳು ಕಂಡ ಕೂಡಲೇ ಕಂಗಾಲಾದ ಭರತ್​ ಮೊಬೈಲ್​ ಟಾರ್ಚ್​ ಹಾಕಿಕೊಂಡು ಓಡುವ ಪ್ರಯತ್ನ ಮಾಡಿದಾಗ ನೆರಳು ಅಡ್ಡ ನಿಂತಿತ್ತು. ಹಿಂದಿನಿಂದ ಯಾರೋ ಎಳೆದ ಅನುಭವ ಆಗಿತ್ತು. ಖದಿಯುವ ಹುಮ್ಮಸ್ಸಿನಲ್ಲಿ ಮನೆಯೊಳಕ್ಕೆ ಬಂದಿದ್ದ ಭರತ್​​, ಬದುಕಿದರೆ ಸಾಕು ಎನ್ನುವಂತೆ ಜೋರಾಗಿ ಕೂಗಲಾರಂಭಿಸಿದ್ದ. ಅದಕ್ಕೂ ಮೊದಲು ದೇವರ ಮನೆಗೆ ಓಡಿ ಹೋಗಿ ಕುಳಿತುಕೊಂಡ ಭರತ್​ ಕುಮಾರ್​, ಮೊಬೈಲ್​ ಟಾರ್ಚ್​ ಹಾಕಿ ಕಳ್ಳ ಕಳ್ಳ, ದೆವ್ವ ದೆವ್ವ ಎಂದು ಬಡಬಡಾಯಿಸಿದ್ದ. ಜನರು ಪೊಲೀಸ್​ ಕರೆಸಿ ಮನೆಯೊಳಕ್ಕೆ ಹೋದಾಗ ನಡೆದ ಘಟನೆ ವಿವರಿಸಿದ. ಆದರೆ ಅದಕ್ಕೂ ಮೊದಲು ಜನರು ಖದೀಮನಿಗೆ ಗೂಸಾ ಕೊಟ್ಟಿದ್ದರು.

ಇದನ್ನೂ ಓದಿ: 100 ರೂಪಾಯಿ ಲಂಚ.. ಅರ್ಧ ಹೆಲ್ಮೆಟ್​.. ಇದು ಪೊಲೀಸರಿಗೇ ಎಚ್ಚರಿಕೆ ಗಂಟೆ..!!

ನಿಜವಾಗಲೂ ಮೂರಂತಸ್ಥಿನ ಕಟ್ಟಡದಲ್ಲಿ ಕಂಡಿದ್ದೇನು..?

ಕದಿಯುವ ಉದ್ದೇಶದಿಂದ ಮನೆಯೊಳಕ್ಕೆ ಬಂದಿದ್ದ ಕಳ್ಳ ಭರತ್​ ಕುಮಾರ್​ ಈ ರೀತಿ ಕಿರುಚಾಡಲು ಕಾರಣವೇನು..? ತಾನೇ ಕಳವು ಮಾಡಲು ಹೋಗಿ ಸಿಕ್ಕಿಬಿದ್ದು ಜನರಿಂದ ಒದೆ ತಿನ್ನುವುದಕ್ಕೆ ಅವನಿಗೇನು ತಲೆ ಕಟ್ಟಿದ್ಯಾ..? ದೆವ್ವ ಆಗಿರುವುದು ಸತ್ಯ. ಅಕಾಲಿಕ ಮರಣ ಹೊಂದಿದ ಆತ್ಮಗಳು ಮುಕ್ತಿ ಸಿಗದೆ ಈ ರೀತಿ ಅಲೆದಾಡುತ್ತವೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಯೊಳಕ್ಕೆ ಕಳ್ಳ ಬಂದಿದ್ದರಿಂದ ತಮ್ಮ ಆಸ್ತಿಯ ರಕ್ಷಣೆಗೆ ಈ ರೀತಿ ಮಾಡಿವೆ ಎನ್ನುವುದು ಧಾರ್ಮಿಕ ವ್ಯಕ್ತಿಗಳ ಮಾತು. ಇನ್ನೂ ಇದಕ್ಕೆ ಸಾಕ್ಷಿ ಪುರಾವೆ ರೀತಿ ಕಳ್ಳ ಭರತ್​ ಕುಮಾರ್​ ಪೊಲೀಸ್​ ಠಾಣೆಗೆ ಹೋದ ಬಳಿಕ 2 ದಿನಗಳ ಕಾಲ ನಿರಂತರ ಜ್ವರ ಬಂದಿದೆ. ಇದು ಆತ್ಮಗಳ ಕಾಟದ ಮುನ್ಸೂಚನೆ ಎನ್ನುತ್ತಾರೆ. ಆದರೆ ಮನೋ ವೈದ್ಯರು ಹೇಳುವ ಪ್ರಕಾರ ಆತ್ಮಗಳು ಸುತ್ತುವುದು, ಆಸ್ತಿ ರಕ್ಷಣೆ ಮಾಡಿಕೊಳ್ಳುವುದು ಎಲ್ಲವೂ ಭ್ರಮೆ. ಪೊಲೀಸರಿಗೆ ಸಿಕ್ಕಿಬಿದ್ದಿರುವ ಭರತ್​ ಕುಮಾರ್​ ಮನೆಗೆ ಹೋಗುವಾಗ ಸಾಕಷ್ಟು ಧೈರ್ಯ ಮಾಡಿಯೇ ಮನೆಗೆ ಹೋಗಿದ್ದಾನೆ. ಅಲ್ಲಿನ ವಸ್ತುಗಳು, ಆಭರಣಗಳನ್ನು ಕಳವು ಮಾಡುವ ವೇಳೆ ಸತ್ತವರನ್ನು ಮನಸು ನೆನಪು ಮಾಡಿಕೊಳ್ಳುತ್ತಾ ಸಾಗಿದೆ. ಆ ಬಳಿಕ ಆತನಿಗೆ ಅರಿವಿಲ್ಲದ ಹಾಗೆ ಧ್ಯಾನ ಸ್ಥಿತಿಯಲ್ಲಿರುವ ಮನಸು ಚಂಚಲವಾಗಿದೆ. ನೆರಳಿನ ಆಕಾರದಲ್ಲಿ ಯಾರೋ ಚಲಿಸಿದಂತೆ ಕಾಣಿಸಿದೆ. ಆ ಭಯದಲ್ಲೇ ಕೂಗಿಕೊಂಡಿದ್ದಾನೆ. ಹೆದರಿಕೊಂಡಿದ್ದ ಕಳ್ಳನಿಗೆ ಜನರು ಧರ್ಮದೇಟು ನೀಡಿದ್ದರಿಂದ ನೋವಿಗೆ ಜ್ವರ ಬಂದಿದೆ ಅಷ್ಟೆ ಎನ್ನುವ ಸ್ಪಷ್ಟನೆ ನೀಡುತ್ತಾರೆ. ಆದರೂ ದೇವರು ದೆವ್ವ ಎನ್ನುವುದು ನಿಮ್ಮ ನಿಮ್ಮ ನಂಬಿಕೆಗೆ ಬಿಟ್ಟ ವಿಚಾರ ಎನ್ನುವುದು The Public Spot ನಿಲುವು.

Related Posts

Don't Miss it !