ಸ್ಪೀಕರ್ ಮಾತಿಗೆ ಮಾಜಿ ಸ್ಪೀಕರ್ ಗಾಧೆ, ಅತ್ಯಾಚಾರವನ್ನು ಎಂಜಾಯ್ ಮಾಡಬೇಕಂತೆ..!!

ವಿಧಾನಸಭಾ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿದೆ. ಸದನದಲ್ಲಿ ನಡೆದಿರುವ ಚರ್ಚೆಯೊಂದು ಇದೀಗ ವಿವಾದದ ಸುಳಿಯೆಬ್ಬಿಸಿದೆ. ಹಾಲಿ ಸ್ಪೀಕರ್ ಹಾಗೂ ಮಾಜಿ ಸ್ಪೀಕರ್ ನಡುವೆ ನಡೆದಿರುವ ಮಾತಿನ ಸಂಭಾಷಣೆ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಅದರಲ್ಲೂ ಅತ್ಯಾಚಾರದ ಬಗ್ಗೆ ನಡೆದಿರುವುದು ಸಂಭಾಷಣೆ ಸದನವೇ ತಲೆ ತಗ್ಗಿಸುವಂತೆ ಮಾಡಿದೆ. ಜೊತೆಗೆ ವಿಧಾನಸಭಾ ಅಧಿವೇಷನದಲ್ಲಿ ಈ ರೀತಿಯ ಮಾತುಗಳು ಕೇಳಿದಾಗಲೂ ಯಾವೊಬ್ಬ ಸದಸ್ಯರು ವಿರೋಧ ಮಾಡದೆ ಇರುವುದು ಅಚ್ಚರಿಗೂ ಕಾರಣವಾಗಿದೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತಿಗೆ ಕಾರಣ ಏನು..?

ವಿಧಾನಸಭಾ ಕಲಾಪದಲ್ಲಿ ಸದಸ್ಯರು ಮಿತಿಮೀರಿ ವರ್ತಿಸುತ್ತಿದ್ದರು. ಈ ವೇಳೆ ಇದೇ ರೀತಿ ಮಾತನಾಡಿದ್ರೆ, ನಾನು ಕೂಡ ಸುಮ್ಮನೆ ಕುಳಿತು ಲೆಟ್ಸ್​​ ಎಂಜಾಯ್​ ದಿ ಸಿಚುಯೇಷನ್​​ ಎನ್ನುವಂತೆ ಆಗಿದೆ. ಏನಾದರೂ ಮಾತನಾಡಿ ಇದನ್ನು ಕಂಟ್ರೋಲ್​ ಮಾಡಿ, ಇದನ್ನು ನಿಯಂತ್ರಣದಲ್ಲಿ ಇಟ್ಟು, ಇದನ್ನು ಒಂದು ವ್ಯವಸ್ಥಿತವಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಬಿಟ್ಟು, ಹೇಗೆ ಬೇಕು ಹಾಗೆ ಮಾತನಾಡಿ ಅಂತಾ ಹೇಳಿ ಬಿಡೋದು ಅಷ್ಟೆ ನನ್ನ ಕೆಲಸ. ಈಗ ಆ ಸ್ಥಿತಿಗೆ ಬಂದು ಸದನ ಮುಟ್ಟಿದೆ ಎಂದಿದ್ದಾರೆ. ಈ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರಸ್ತಾಪ‌ ಮಾಡಿದ್ದಾರೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತಿನಿಂದ ಪ್ರೇರಿತಗೊಂಡ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಉದಾಹರಣೆ ನೀಡುವಾಗ ಅತ್ಯಾಚಾರದ ಗಾಧೆ ಹೇಳಿದ್ದಾರೆ.

ರಮೇಶ್ ಕುಮಾರ್ ಹೇಳಿದ್ದು

ರೇಪ್​ ತಡೆಯಲು ಸಾಧ್ಯವಿಲ್ಲದಿದ್ದಾಗ ಸುಖ ಅನುಭವಿಸಬೇಕು..!

ಇಂಗ್ಲೀಷ್‌ನಲ್ಲಿ ಒಂದು ಗಾಧೆ ಮಾತಿದೆ. ಆ ಗಾಧೆ ಮಾತನ್ನು ಹೇಳುವ ಮೂಲಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎಡವಟ್ಟು ಮಾಡಿಕೊಂಡಿದ್ದಾರೆ.  ಯಾರು ಏನಾದರೂ ಮಾತನಾಡಿ, ನಾನು ಸುಮ್ಮನೆ ಕುಳಿತು ಹೌದು ಹೌದು ಎನ್ನುತ್ತೇನೆ ಎಂದು ಸ್ಪೀಕರ್ ಕಾಗೇರಿ ಅಸಹಾಯಕ ಪರಿಸ್ಥಿತಿ‌ ಬಗ್ಗೆ ಹೇಳಿಕೊಂಡರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತ್ಯಾಚಾರದ ಬಗ್ಗೆ ಗಾಧೆ ಹೇಳಿದ್ರು. ಒಂದು ಮಾತಿದೆ. ಯಾವಾಗ ಅತ್ಯಾಚಾರವನ್ನು ತಡೆಯಲು ಸಾಧ್ಯವಿಲ್ಲದ ಸಮಯದಲ್ಲಿ ಅನಿವಾರ್ಯವಾಗು ಮಲಗಿ ಆನಂದಿಸಬೇಕು ( There is saying, when rape Is inevitable , lie down and enjoy it ) ಎಂದು ಹೇಳಿದರು. ಈ ಮಾತಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಯಾರೊಬ್ಬರೂ ವಿರೋಧ ಮಾಡಲಿಲ್ಲ. ಜೊತೆಗೆ ಸ್ಪೀಕರ್ ಕೂಡ ಗಹಗಹಿಸಿ ನಕ್ಕಿದ್ದು ದೃಶ್ಯಗಳಲ್ಲಿ ಪ್ರಸಾರವಾಗಿದೆ.

ವೇದ ಸುಳ್ಳಾದರೂ ಗಾಧೆ ಮಾತು ಸುಳ್ಳಾಗದು..!!

ನಿಜ, ರಮೇಶ್ ಕುಮಾರ್ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ನಡೆದಿರುವ ಸಂಭಾಷಣೆ ಅಶ್ಲೀಲವೂ ಅಲ್ಲ, ಮಡಿವಂತಿಕೆಗೆ ಭಂಗವೂ ಅಲ್ಲ. ಆದರೆ ವಿಧಾನಸಭಾ ಕಲಾಪದಲ್ಲಿ ಈ ರೀತಿಯ ಮಾತುಗಳು ಬೇಕಿತ್ತಾ ಎನ್ನುವ ಪ್ರಶ್ನೆ ಉದ್ಬವ ಆಗುತ್ತದೆ. ಯಾವುದೋ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್ ಹೀಗೆ ಮಾತನಾಡಿದ್ದರೆ, ಮನಬಿಚ್ಷಿ ಮಾತನಾಡಿದರು ಎನ್ನಬಹುದಿತ್ತು. ಅತ್ಯಾಚಾರವನ್ನು ತಡೆಯುವುದಕ್ಕೆ ಅಸಾಧ್ಯ ಎನ್ನುವುದು ತಿಳಿದ ಮೇಲೆ ಅತ್ಯಾಚಾರವನ್ನೇ ಸುಖದ ಲೈಂಗಿಕ ಕ್ರಿಯೆಯಾಗಿ ಬದಲಾಯಿಸಿಕೊಳ್ಳುವುದು ಬುದ್ಧಿವಂತರ ಲಕ್ಣಣವೂ ಹೌದು. ಆದರೆ ಹಾಗೆಂದ ಮಾತ್ರಕ್ಕೆ ಸದನದಲ್ಲಿ ಪ್ರಸ್ತಾಪ ಮಾಡಿದ್ದು ಸರಿಯಲ್ಲ ಎನ್ನಬಹುದು. ಸದನದಲ್ಲಿ ಎಲ್ಲಾ ಮಾತುಗಳು ದಾಖಲೆಗೆ ಸೇರುತ್ತವೆ. ಇನ್ನೂ ಈ ಮಾತು ಸಾಕಷ್ಟು ಹೆಣ್ಣು ಮಕ್ಕಳಿಗೆ ಮುಜುಗರ ಉಂಟು ಮಾಡಬಹುದು ಅಥವಾ ರಮೇಶ್ ಕುಮಾರ್ ಬಗ್ಗೆ ಹೊಂದಿದ್ದ ಪ್ರೀತಿ ವಿಶ್ವಾಸ ಕಳೆದುಕೊಳ್ಳುವಂತೆ ಆಗಬಹುದು.

Related Posts

Don't Miss it !