ಏಳು ವರ್ಷಗಳ ಅಗಲಿಕೆ ಬಳಿಕ ಒಂದಾದ ‘ಕಲಿಯುಗದ ರಾಮ ಸೀತೆ..!’

ಗಂಡು – ಹೆಣ್ಣು ವಿವಾಹ ಎನ್ನುವ ಬಂಧನದಲ್ಲಿ ಬಂಧಿಯಾಗಿ ಮುಂದಿನ ಜೀವನವನ್ನು ಕಳೆಯುತ್ತಾರೆ. ಆ ಮದುವೆ ಎಂದು ಶಾಸ್ತ್ರೋಕ್ತ ಸಂಪ್ರದಾಯದಲ್ಲಿ ಸಪ್ತಪದಿ ಎನ್ನುವ ಧಾರ್ಮಿಕ ವಿಧಿಯೊಂದಿದೆ. ಈ ಸಪ್ತಪದಿ ಜೀವನ ಪೂರ್ತಿ ಹೆಜ್ಜೆ ಮೇಲೆ ಹೆಜ್ಜರಯಂತೆ ಸಾಗಲಿ ಎನ್ನುವುದು ಅದರ ಉದ್ದೇಶ. ಆದರೆ ಅದೆಷ್ಟೋ ಮದುವೆಗಳು ಸಪ್ತಪದಿ ಎನ್ನುವ ನೀತಿಯನ್ನು ಮರೆತು ತಪ್ಪು ದಾರಿ ತುಳಿಯುತ್ತಾರೆ. ಆದರೆ ಇಲ್ಲೊಂದು ಜೋಡಿ ಸಪ್ತಪದಿ ತುಳಿದ ಕೆಲವೇ ದಿನಗಳಲ್ಲಿ ವಿಧಿಯಾಟಕ್ಕೆ ಸಿಲುಕಿ ಸೀತಾರಾಮರಂತೆ ದೂರವಾಗಿದ್ದರು. ಆದರೆ 7 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ. ದೂರದ ತಮಿಳುನಾಡಿನಿಂದ ಕರ್ನಾಟದ ಕಿತ್ತಳೆ ನಗರಿ ಕೊಡಗಿನಲ್ಲಿ ಆನಂದಭಾಷ್ಪ ಸುರಿಸಿದ್ದಾರೆ. ಕಳೆದು ಹೋಗಿದ್ದ ಪತ್ನಿಯನ್ನು ಕಂಡು ಮೂಕವಿಸ್ಮಿತನಾದ ಪತಿ ರಾಜಪ್ಪ, ಆಕೆಯ ತಲೆಯನ್ನು ಸವರಿ ವಿವಾಹ ಬಂಧನವನ್ನು ಮೆಲುಕು ಹಾಕಿದ್ದಾರೆ.

ತಮಿಳುನಾಡಿನ ಜೋಡಿ, ಕರ್ನಾಟಕದಲ್ಲಿ ತಬ್ಬಲಿ..!

ತಮಿಳುನಾಡಿ ರಾಜಪ್ಪ ಹಾಗೂ ಮುತ್ತಮ್ಮ ಕೃಷ್ಣಗಿರಿ ಜಿಲ್ಲೆಯ ಕೊತ್ತೂರು ಗ್ರಾಮದವರು. ಮದುವೆಯಾದ ಕೆಲವೇ ವರ್ಷಗಳಲ್ಲಿ ಮುತ್ತಮ್ಮನ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಅಲ್ಲಿನ ವೈದ್ಯರು ಬೆಂಗಳೂರಿನ ನಿಮ್ಹಾನ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಸೂಚನೆ ನೀಡಿದ್ದರು. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಮುತ್ತಮ್ಮ 2 ತಿಂಗಳ ಚಿಕಿತ್ಸೆ ನಡುವೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ದಿಕ್ಕು ಸಿಗದ ಕಡೆಗೆ ಪಾದ ಬೆಳೆಸಿದ್ದರು. ಪತ್ನಿ ಕಳೆದುಕೊಂಡ ಪತಿ ರಾಜಪ್ಪ, ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಎಲ್ಲಾ ಕಡೆಗಳಲ್ಲೂ ಹುಡುಕಿ ಸುಸ್ತಾಗಿ ತನ್ನ ಪತ್ನಿ ಎಲ್ಲೋ ಸತ್ತು ಹೋದಳೆಂದು ಎದೆಗೆ ಕಲ್ಲು ಹಾಕಿಕೊಂಡು ದುಃಖದಲ್ಲೇ ಜೀವನ ಮುಂದುವರಿಸಿದ್ದರು. ಆದರೆ ಅನಾಮತ್ ಆಗಿ ಬಂದ ಸಂದೇಶವೊಂದು ರಾಜಪ್ಪನ ಸಂತಸಕ್ಕೆ ಪಾರವೇ ಇಲ್ಲದಂತೆ ಮಾಡಿತ್ತು. ಕಳೆದ 7 ವರ್ಷಗಳ ಹಿಂದೆ ಕಳೆದು ಹೋಗಿದ್ದ ಪತ್ನಿ ಬದುಕಿದ್ದಾಳೆ. ಮಾನಸಿಕ ಕಾಯಿಲೆಯೂ ಗುಣವಾಗಿದೆ ಎನ್ನುವ ಪತ್ರ ಸಿಗುತ್ತಿದ್ದ ಹಾಗೆ ಓಡೋಡಿ ಕರ್ನಾಟಕದ ಹಾದಿ ಹಿಡಿದಿದ್ದರು.

Read This;

ಮಾನವೀಯ ಕೆಲಸ ಮಾಡಿದ ಕೊಡಗಿನ ತನಲ್​ ಅನಾಥಶ್ರಮ..!

ಮಾರ್ಚ್​ 2014ರಲ್ಲಿ ನಿಮ್ಹಾನ್ಸ್​ ಆಸ್ಪತ್ರೆಗೆ ಬಂದಿದ್ದ ಮುತ್ತಮ್ಮ, ಮಾನಸಿಕ ಸಮಸ್ಯೆ ಸಂಪೂರ್ಣವಾಗಿ ಗುಣವಾಗುವ ಮುನ್ನವೇ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದರು. ಪತ್ನಿಯನ್ನು ಹುಡುಕಿದ ರಾಜಪ್ಪ ಕೂಡ ಸಪ್ಪೆ ಮೋರೆ ಹಾಕಿಕೊಂಡು ಊರಿನ ಹಾದಿ ಹಿಡಿದಿದ್ದರು. ಆದರೆ ಮುತ್ತಮ್ಮ ನಡೆದಿದ್ದೇ ಹಾದಿ ಎನ್ನುವಂತೆ ತಲುಪಿದ್ದು, ಮಡಿಕೇರಿಯನ್ನು. ಸತತ ಮೂರು ವರ್ಷಗಳ ಕಾಲ ತನ್ನದೇ ಪ್ರಪಂಚದಲ್ಲಿ ಓಡಾಡಿದ ಮುತ್ತಮ್ಮ 2017ರಲ್ಲಿ ಮಡಿಕೇರಿ ಕಸದ ತೊಟ್ಟಿಯೊಂದರ ಬಳಿ ಕೊನೆ ದಿನಗಳನ್ನು ಎಣಿಸುತ್ತಾ ಕುಳಿತಿದ್ದರು. ಒಂದು ಕಾಲು ಗ್ಯಾಂಗ್ರಿನ್​ಗೆ ಒಳಗಾಗಿ ಕೊಳೆತು ಹೋಗುತ್ತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ತನಲ್​ ಅನಾಥಾಶ್ರಮ ಸಿಬ್ಬಂದಿ, ಮುತ್ತಮ್ಮನ ರಕ್ಷಣೆ ಮಾಡಿದ್ದರು. ಅಷ್ಟೇ ಅಲ್ಲ ಕೇರಳದ ಆಯುರ್ವೇಧ ಚಿಕಿತ್ಸಾಲಯಕ್ಕೆ ಕಳುಹಿಸಿ ಮುತ್ತಮ್ಮನಿಗೆ ಚಿಕಿತ್ಸೆಯನ್ನೂ ಕೊಡಿಸಲಾಯ್ತು. ಜೀವನವೇ ಕಳೆದು ಹೋಯ್ತು ಎಂದು ಸಾವಿನ ದಿನಗಳನ್ನು ಎಣಿಸುತ್ತಿದ್ದ ಮುತ್ತಮ್ಮ ತನ್ನ ವಿಳಾಸವನ್ನು ಹೇಳುವಷ್ಟು ಸುಧಾರಿಸಿದ್ದಾರೆ.

Also Read;

ದಾಖಲಾತಿ ಪರಿಶೀಲನೆ

ತನ್ನ ಗಂಡನ ವಿಳಾಸ ಕೊಟ್ಟ ಮುತ್ತಮ್ಮ..!

ಮಾನಸಿಕ ಸ್ಥಿಮಿತ ಕಳೆದುಕೊಂಡು ಅಂತಿಮ ದಿನಗಳನ್ನು ಎಣಿಸುತ್ತಿದ್ದ ಮುತ್ತಮ್ಮನ ಆರೋಗ್ಯ ಶೇಕಡ 90ರಷ್ಟು ಸುಧಾರಿಸಿದೆ. ತನ್ನ ಗಂಡ ರಾಜಪ್ಪ, ನಮ್ಮೂರು ಕೃಷ್ಣಗಿರಿಯ ಕೊತ್ತೂರು ಎನ್ನುವ ಮಾಹಿತಿಯನ್ನು ತನಲ್​ ಸಂಸ್ಥೆಯವರಿಗೆ ತಿಳಿಸಿದ್ದಾರೆ. ಆ ಬಳಿಕ ಪತ್ರ ಬರೆದು ಮುತ್ತಮ್ಮನ ಮಾಹಿತಿ ರವಾನಿಸಿದ್ದರು. ಮುತ್ತಮ್ಮನ ಪತಿ ರಾಜಪ್ಪ ಹಾಗೂ ಆಕೆಯ ಅಳಿಯಂದಿರುವ ಮಡಿಕೇರಿಗೆ ಬಂದಿರುವ ಕುಟುಂಬಸ್ಥರು ಮುತ್ತಮ್ಮನನ್ನು ಆಧರಿಸಿ ಕರೆದುಕೊಂಡು ಹೋಗಲು ಸಜ್ಜಾಗಿದ್ದಾರೆ. ಎಲ್ಲಾ ದಾಖಲೆ ಪತ್ರಗಳನ್ನು ಪೂರೈಸಿದ ಬಳಿಕ ಸಪ್ತ ವರ್ಷಗಳಿಂದ ದೂರಾಗಿದ್ದ ಮುತ್ತಮ್ಮ ಹುಟ್ಟೂರು ತಮಿಳುನಾಡಿನ ಕಡೆಗೆ ಹೆಜ್ಜೆ ಹಾಕಿದ್ದಾರೆ. ಆದರೂ ಕರುನಾಡಿದ ತನಲ್​ ಅನಾಥಶ್ರಮದ ಕಾರ್ಯ ಮಾತ್ರ ಎಲ್ಲರೂ ಮೆಚ್ಚುವಂತಹದ್ದು ಎನ್ನುವ ಜೊತೆಗೆ ದಾನಧರ್ಮ ಮಾಡುವುದಿದ್ದರೆ ಇಂತಹ ಸಂಸ್ಥೆಗ ಮಾಡಬೇಕು ಎಂದು ಅದೆಷ್ಟೋ ಕನ್ನಡದ ಮನಸ್ಸುಗಳಿಗೆ ಎನಿಸದೆ ಇರದು..

ಪೊಲೀಸ್​ ಠಾಣೆಗೆ ಮಾಹಿತಿ

Related Posts

Don't Miss it !