Swiggy: ಬಾಯ್ ಪ್ರೇಮಿ.. ನಂಬಿ ಸುಟ್ಟವಳು ನಾಲ್ಕನೇ ಹೆಂಡತಿ ಮೀನಾ..!!

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ವಿಗ್ಗಿ ಸೇರಿದಂತೆ ಸಾಕಷ್ಟು ಆನ್‌ಲೈನ್ ಆಪ್‌ಗಳು ಚಾಲ್ತಿಯಲ್ಲಿರುವ ವಿಚಾರ ಎಲ್ಲರಿಗೂ ಗೊತ್ತು. ಫುಡ್ ಬುಕ್ ಮಾಡಿದವರ ಮನೆಗೆ ಡೆಲಿವರಿ ಬಾಯ್ಸ್ ಊಟ ಕೊಟ್ಟು ಬರ್ತಾರೆ. ಸಾಕಷ್ಟು ಜನರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲೂ ಕೆಲಸ ಮಾಡುವ ಮೂಲಕ ಒಂದೊಳ್ಳೆ ಹೆಸರು ಪಡೆದುಕೊಂಡಿದ್ದರು ಸ್ವಿಗ್ಗಿ ಬಾಯ್ಸ್. ಆದರೇ ಸ್ವಿಗ್ಗಿ ಕೆಲಸವನ್ನೇ ಕಾಮಕೃತ್ಯಕ್ಕೆ ಬಳಸಿಕೊಂಡ ಒಬ್ಬ ಯುವಕ ಇಂದು ತನ್ನ ನೀಚ ಕೃತ್ಯದಿಂದ ಸುದ್ದಿಯಾಗಿದ್ದಾನೆ. ಒಂದಲ್ಲ, ಎರಡಲ್ಲ, ಮೂರಲ್ಲ ಬರೋಬ್ಬರಿ ನಾಲ್ಕು ಮದುವೆ ಆಗಿದ್ದಾನೆ.

ಗರ್ಭಿಣಿ ಎನ್ನುವುದನ್ನೂ ಕಾಣದೆ ಬೆಂಕಿ ಹಚ್ಚಿದ ನೀಚ..!

ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ ಮೀನಾ ಎಂಬುವರ ಮೇಲೆ ಸೀಮೆಎಣ್ಣೆ ಹಾಗೂ ಡೀಸೆಲ್ ಸುರಿದು ಗಂಡನೇ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಮೂರು ತಿಂಗಳ ಗರ್ಭಿಣಿ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ ಬಾಬು ಎಂಬಾತನ್ನು ಪೊಲೀಸರು ಬಂಧನ ಮಾಡಿದ್ದಾರೆ. ಮಾರ್ಚ್ 9 ರಂದು ಬಾಬು ಕುಡಿಯುವ ಉದ್ದೇಶದಿಂದ ಪತ್ನಿ ಬಳಿ ಹಣ ಕೇಳಿದ್ದ, ಆದರೆ ಮೀನಾ ಹಣ ಕೊಡಲಿಲ್ಲ. ಹಣ ಇಲ್ಲಾ ಎಂದ ಮೀನಾ ಜೊತೆಗೆ‌ ಜಗಳವಾಡಿದ್ದಾನೆ. ಇದೇ ರೀತಿ‌ ಜಗಳ ಮಾಡಿದರೆ ನಾನು ಸತ್ತು ಹೋಗ್ತೇನೆ ಎಂದು ಬೆದರಿಸಿದ ಮೀನಾ ಮೇಲೆ‌ ಸೀಮೇಎಣ್ಣೆ ಹಾಗೂ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಮೂರು ಮಕ್ಕಳ ತಾಯಿ, ಬಲೆ ಬೀಸಿದ್ದ ಕಾಮುಕ..!!

ಮೀನಾಗೆ ವಿಜಯಕಾಂತ್ ಎಂಬುವರ ಜೊತೆಗೆ ಮದುವೆ ಆಗಿತ್ತು. ಮೂವರು ಹೆಣ್ಣು ಮಕ್ಕಳೂ ಇದ್ದರು. ಕಾರಣಾಂತರಗಳಿಂದ ಗಂಡ ವಿಜಯಕಾಂತ್ ಕಳೆದುಕೊಂಡ ಮೀನಾ ಒಬ್ಬಂಟಿ ಆಗಿದ್ದರು. ಇಬ್ಬರನ್ನು ಹಾಸ್ಟೆಲ್‌ನಲ್ಲಿ ಓದಿಸಿದ್ರೆ, ಇನ್ನು ಎರಡೂವರೆ ವರ್ಷದ ಮಗುವನ್ನು ತನ್ನ ಜೊತೆಯಲ್ಲೇ ಇರಿಸಿಕೊಂಡಿದ್ದರು. ಆಗ ಪರಿಚಯ ಆದವನೇ 37 ವರ್ಷದ ಬಾಬು. ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಬಾಬು ಸಿಕ್ಕಸಿಕ್ಕವರಿಗೆ ಮದುವೆ ಪ್ರಸ್ತಾಪ ಸಲ್ಲಿಕೆ ಮಾಡ್ತಿದ್ದ. ಅದರಲ್ಲೂ ಮದುವೆಯಾಗದ ಯುವತಿಯರು, ಗಂಡ ಬಿಟ್ಟವರು, ಗಂಡ ಸತ್ತವರನ್ನೇ ಟಾರ್ಗೆಟ್ ಮಾಡುತ್ತಿದ್ದ. ಇದೇ ರೀತಿ ಆನ್‌ಲೈನ್‌ನಲ್ಲಿ ಫುಡ್ ಬುಕ್ ಮಾಡಿ ಸಿಕ್ಕಿಬಿದ್ದವಳೇ ಮಹಿಳೆ ಮೀನಾ.

ಮಗುವನ್ನು ಕಚ್ಚಿದ ಬಾಬು, ಹೆಂಡತಿಯನ್ನು ಕೊಲ್ಲಲು ಯತ್ನ..!

ಈ ವಿಕೃತಿ ಮೆರೆದಿರುವ ಬಾಬುಗೆ ಈಗಾಗಲೇ ಮೂರು ಜನರ ಜೊತೆಗೆ ಮದುವೆಯಾಗಿತ್ತು. ಈತನ ಕಾಮದಾಹವನ್ನು ನೋಡಲಾಗದ ಹೆಂಡತಿಯರು ಬಿಟ್ಟು ಹೋಗಿದ್ದರು. ಆದರೆ ಮೂರು ಮಕ್ಕಳ ಜೊತೆಗೆ ಒಬ್ಬಂಟಿಯಾಗಿದ್ದ ಮೀನಾಳ ಎದುರು ಮದುವೆ ಪ್ರಸ್ತಾಪ ಇಟ್ಟಾಗ ಬೇಡ ಎನ್ನಲು ಆಗಿರಲಿಲ್ಲ. ಮನೆಯಲ್ಲಿ ಒಂದು ಗಂಡು ಜೀವ ಇರಲಿ ಎನ್ನುವ ಕಾರಣಕ್ಕೆ ಒಪ್ಪಿಕೊಂಡಿದ್ದಳು. ಆದರೆ ಮದುವೆಯಾದ ಮೇಲೆ ಕುಡಿತಕ್ಕೂ ಹಣ ಕೊಡಬೇಕಿತ್ತು. ಈತ ಎರಡೂವರೆ ವರ್ಷದ ಮಗುವನ್ನೂ ಜೊತೆಯಲ್ಲಿ ಇಟ್ಟುಕೊಳ್ಳಲು ಬಿಡುತ್ತಿರಲಿಲ್ಲ. ಕಳೆದ ನಾಲ್ಕೈದು ತಿಂಗಳಿಂದಲೂ ಪುಟ್ಟ ಕಂದಮ್ಮನನ್ನು ಕಚ್ಚಿ ಗಾಯಗೊಳಿಸಿದ್ದ. ಇದೀಗ ಹೆಂಡತಿಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ.

Related Posts

Don't Miss it !