ಆತನಿಗೆ ಮೂವರು.. ಈಕೆಗೆ ನಾಲ್ವರು.. ಗಂಡ ಹೆಂಡ್ತಿ ಕಾಮದಾಹ.. ಜಮೀನಿಗಾಗಿ ಮರ್ಡರ್​..!!

ಹಣದ ವ್ಯಾಮೋಹ ಹೆಚ್ಚಾಗುತ್ತಿದ್ದ ಹಾಗೆ ಮನುಷ್ಯರಲ್ಲಿ ಮಾನವೀಯತೆ ಕಡಿಮೆ ಆಗುತ್ತಾ ಸಾಗುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಾದ ಆನೇಕಲ್​, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ ವ್ಯಾಪ್ತಿಯಲ್ಲಿ ಕೊಲೆಗಳು ಸರ್ವೇ ಸಾಮಾನ್ಯ ಎನ್ನುವ ಘಟನೆಗಳು. ಇದಕ್ಕೆ ಕಾರಣ ಅಲ್ಲಿನ ಭೂಮಿಗೆ ಬಂದಿರುವ ಬೆಲೆ. ಭೂಮಿಗೆ ಬೆಲೆ ಹೆಚ್ಚಾಗುತ್ತಿದ್ದ ಹಾಗೆ ಸಂಬಂಧಗಳ ಬೆಲೆಗಳು ಕಣ್ಮರೆಯಾಗಿ ಆಸ್ತಿ, ಹಣಕ್ಕಾಗಿ ಕೊಲೆ ಮಾಡುವ ಸಂಗತಿಗಳು ಕಾಣಸಿಗುತ್ತಿವೆ. ಇದೀಗ ಆನೇಕಲ್​ನಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಸ್ವತಃ ಹೆಂಡತಿಯೇ ಗಂಡನ ಕೊಲೆಗೆ ಸುಪಾರಿ ಕೊಟ್ಟಿದ್ದಾಳೆ ಎನ್ನುವುದು ಅಚ್ಚರಿಯ ಸಂಗತಿ.

ಇದನ್ನೂ ಓದಿ: B.S ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ, ಅಬ್ಬಿಗೆರೆಯಲ್ಲಿ ಅಂತ್ಯಸಂಸ್ಕಾರ..! ಕಾರಣ..

ಅಪ್ಪನನ್ನೇ ಕೊಂದು ಸುಟ್ಟು ಹಾಕಿದ ಸುಪುತ್ರ..!

ತಮಕೂರು ಜಿಲ್ಲೆ ಹೆಬ್ಬೂರು ಸಮೀಪದ ತೊಂಡೆಕೆರೆ ಗ್ರಾಮದ ಚನ್ನಿಗರಾಯಪ್ಪ ತನ್ನ ಕುಟುಂಬದ ಜೊತೆಗೆ ಆನೇಕಲ್​ ವ್ಯಾಪ್ತಿಯಲ್ಲಿ ವಾಸವಾಗಿದ್ದ. ಪಿತ್ರಾರ್ಜಿತವಾಗಿ ಚನ್ನಿಗರಾಯಪ್ಪನಿಗೆ 21 ಗುಂಟೆ ಜಮೀನು ಬಂದಿತ್ತು. ಈ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಡು ಎಂದು ಹಿಂಸೆ ಕೊಡುತ್ತಿದ್ದರು. ಆದರೆ ಚನ್ನಿಗರಾಯಪ್ಪ ಜಮೀನು ಕೊಡುವುದಕ್ಕೆ ನಿರಾಕರಿಸಿದ್ದ. ಇದರಿಂದ ಸಿದ್ದಟಿಗೆದ್ದ ಹೆಂಡತಿ ಹಾಗೂ ಮಗ ಸಂಚು ಮಾಡಿ ಕೊಂದೇ ಬಿಟ್ಟಿದ್ದರು. ಅದಕ್ಕೂ ಮೊದಲು ಹೆಚ್​ಎಸ್​ಆರ್​ ಲೇಔಡ್​ ಬಳಿಯ ಮಂಗಮ್ಮನಪಾಳ್ಯದ ಮನೆಯಲ್ಲಿ ಕೂಡಿ ಹಾಕಿ ಹಿಂಸೆ ಕೊಟ್ಟಿದ್ದರು. ಆಸ್ತಿ ಕೊಡುವುದೇ ಇಲ್ಲ ಎಂದು ಹಠವಿಡಿದಾಗ ಚೆನ್ನಾಗಿ ಎಣ್ಣೆ ಕುಡಿಸಿ 15 ಸಲ ಚಾಕುವಿನಿಂದ ಚುಚ್ಚಿ ಕೊಂದು, ಬನ್ನೇರುಘಟ್ಟ ಅರಣ್ಯದಲ್ಲಿ ಹೆಣವನ್ನು ಅರ್ಧಂಬರ್ದ ಸುಟ್ಟುಹಾಕಿದ್ರು.

ಆಕೆಗೆ ನಾಲ್ವರು ಬಾಯ್​ ಫ್ರೆಂಡ್ಸ್​​.. ಈತನಿಗೆ ಮೂವರು ಹೆಂಡಿರು..!

ಇದೊಂದು ರೀತಿಯ ಅಚ್ಚರಿಯ ವಿಚಾರ ಆದರೂ ಸತ್ಯ. ಕೊಲೆಗೆ ಸ್ಕೆಚ್​​ ಹಾಕಿದ ಚನ್ನಿಗರಾಯಪ್ಪನ ಪತ್ನಿ ಗೌರಮ್ಮ ಅಲಿಯಾಸ್​ ಯಶೋಧಳಿಗೆ ನಾಲ್ವರು ಸ್ನೇಹಿತರು ಇದ್ದರು ಎನ್ನುವುದು ಗೊತ್ತಾಗಿದೆ. ಎದೆ ಮಟ್ಟಕ್ಕೆ ಬೆಳೆದಿದ್ದ ಮಗನೊಬ್ಬ ಇದ್ದರೂ ಭಾಯ್​ ಫ್ರೆಂಡ್ಸ್​ ಜೊತೆಗೆ ಮೋಜು ಮಸ್ತಿ ಸಾಮಾನ್ಯವಾಗಿತ್ತಂತೆ. ಕೊಲೆ ಮಾಡುವುದಕ್ಕೆ ಮಗನ ಜೊತೆ ಆಕೆಯ ಸ್ನೇಹಿತರೂ ಸಾಥ್​​ ನೀಡಿದ್ದಾರೆ ಎನ್ನುವುದು ಪೊಲೀಸ್​ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನೂ ಕೊಲೆಯಾದ ಚನ್ನಿಗರಾಯಪ್ಪ ಕೂಡ ಸಾಮಾನ್ಯ ವ್ಯಕ್ತಿಯಲ್ಲ. ಕಟ್ಟಿಕೊಂಡ ಪತ್ನಿ ಗೌರಮ್ಮ ಅಲಿಯಾಸ್​​ ಯಶೋಧ ಇದ್ದರೂ ಇನ್ನೆರಡು ಮದುವೆ ಆಗಿದ್ದನಂತೆ. ಇದೇ ಕಾರಣಕ್ಕೆ ಇರುವ 21 ಗುಂಟೆ ಜಾಗ ಕೈತಪ್ಪಬಾರದು ಎಂದು ಚಟ್ಟ ಕಟ್ಟುವ ಸ್ಕೆಚ್​ ಹಾಕಿ ಮುಗಿಸಿದ್ದಾರೆ.

ಇದನ್ನೂ ಓದಿ: ಸಕ್ಕರೆ ಕಾಯಿಲೆಗೆ ನಾಟಿ ಔಷಧಿ, ಕುತ್ತಿಗೆ ಕೊಯ್ದು ಬಂಗಾರ ಕದ್ದ ಬಿಹಾರಿ..!

ಪ್ರೇಮಿಗಳು ಕಂಬಿ ಹಿಂದೆ.. ಅವರ ಜೊತೆಗೆ ಮಗ..!

ಬನ್ನೇರುಘಟ್ಟ ಪೊಲೀಸರು ಕೊಲೆ ಮಾಡಿ ಸುಟ್ಟು ಹಾಕಿದ್ದ ಪ್ರಕರಣವನ್ನ ಬೇಧಿಸಿದ್ದು, ಕೊಲೆಗಾರ ಮಗ ನಿಖಿಲ್​​, ಗಂಡನ ಕೊಲೆಗೆ ಮಗನನ್ನು ಪ್ರೇರೇಪಿಸಿದ್ದ ಯಶೋಧ ಹಾಗೂ ಆಕೆಯ ಪ್ರಿಯಕರ ಮಂಜ ಹಾಗೂ ಇನ್ನುಳಿದ ಸ್ನೇಹಿತರಾದ ಗುರುಕಿರಣ್, ವಿಶ್ವಾಸ್​ನನ್ನೂ ಕಂಬಿ ಹಿಂದೆ ಕಳುಹಿಸಿದ್ದಾರೆ. ಹೆಣ್ಣಿನ ಸೆರಗು ಹಿಡಿದು ಮೂರು ಮದುವೆಯಾದ ತುಮಕೂರಿನ ಚೆನ್ನಿಗರಾಯಪ್ಪ ಕೊಲೆಯಾಗಿದ್ದಾನೆ. ನಾಲ್ವರು ಪರಪುರುಷರ ಜೊತೆಗೆ ಪಲ್ಲಂಗದಾಟ ಆಡುತ್ತಿದ್ದ ಗೌರಮ್ಮ ಅಲಿಯಾಸ್​ ಯಶೋಧ ಪರಪ್ಪನ ಅಗ್ರಹಾರ ಸೇರಿದ್ದಾಳೆ. ಇನ್ನೂ ಕಾಮದ ರುಚಿ ನೋಡಿ ಆಕೆ ಹೇಳಿದ್ದೆಲ್ಲವನ್ನೂ ಮಾಡಿ ನಾಲ್ವರು ಸ್ನೇಹಿತರು ಅಂದರ್​ ಆಗಿದ್ದಾರೆ. ಇನ್ನೊಬ್ಬ ಮಗ ನಿಖಿಲ್​ ಜಮೀನಿನ ಆಸೆಗಾಗಿ ಕೊಲೆಗಾರ ಆಗಿದ್ದಾನೆ ಎನ್ನುವುದು ವಿಪರ್ಯಾಸ.

Related Posts

Don't Miss it !