ಗುರುವಾರ ನಡೆದ ಪ್ರಮುಖ ಕ್ರೈಂ ಸುದ್ದಿಗಳ ಚುಟುಕು ನೋಟ..!

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ನಡೆದಿತ್ತಂತೆ ಸ್ಕೆಚ್​..!

ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಇಬ್ಬರನ್ನು ಬಂಧನ ಮಾಡಲಾಗಿದೆ. ಬಿಹಾರ ರಾಜಧಾನಿ ಪಾಟ್ನಾದದಲ್ಲಿ ( Md Jalaluddin ) ಮಹಮದ್​ ಜಲಾಲುದ್ದೀನ್​ ಹಾಗೂ (Athar Parvez) ಅತ್ತಾರ್​ ಪರ್ವೇಜ್​ ಎಂಬುವರನ್ನು ಬಂಧಿಸಿ, ವಿಚಾರಣೆ ನಡೆಸಲಾಗ್ತಿದೆ. ವಿಶೇಷ ಅಂದ್ರೆ ಬಂಧಿತ ಆರೋಪಿ ಜಲಾವುದ್ದೀನ್, ಜಾರ್ಖಂಡ್ ಮೂಲದ ನಿವೃತ್ತ ಪೊಲೀಸ್ ಅಧಿಕಾರಿ. ಇನ್ನು ಬಂಧಿತರಿಂದ 8 ಪುಟಗಳ ಪತ್ರವನ್ನು ವಶಕ್ಕೆ ಪಡೆದಿದ್ದು, ಅದರಲ್ಲಿ 2047ರ ಹೊತ್ತಿಗೆ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವುದಾಗಿ ಬರೆದಿದ್ದಾರೆ ಎನ್ನಲಾಗಿದೆ. ಬಂಧಿತರಿಗೆ ಸಿಮಿ ಸಂಘಟನೆ ಹಾಗು ಪಿಎಫ್​ಐ ಜೊತೆಗೆ ಸಂಬಂಧವಿದೆ ಎಂದು ಹೇಳಲಾಗಿದೆ. ಇದೇ ತಿಂಗಳ ಮೊದಲ ವಾರ ಬಿಹಾರ ಪ್ರವಾಸ ಕೈಗೊಂಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಪೂರ್ವ ತಯಾರಿ ಮಾಡಿಕೊಂಡಿದ್ದರು ಎನ್ನುವುದು ಪೊಲೀಸ್​ ಮೂಲಗಳ ಮಾಹಿತಿ. ಸಂಪೂರ್ಣ ತನಿಖೆ ನಂತರ ಹೆಚ್ಚಿನ ಮಾಹಿತಿ ಸಿಗಬೇಕಿದೆ.

ರಾಜ್ಯದಲ್ಲಿ ಶಿವಮೊಗ್ಗ ರೌಡಿಗಳ ಬ್ರೀಡಿಂಗ್​ ಸೆಂಟರ್​..!!

ಗುರುವಾರ ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ನೆತ್ತರು ಹರಿಸಲಾಗಿತ್ತು. ಕುಖ್ಯಾತ ರೌಡಿ ಆಗಿದ್ದ ಹಂದಿ ಅಣ್ಣಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇನ್ನೋವಾ ಕಾರಿನಲ್ಲಿ ಬಂದ ಆರು ಮಂದಿ ದುಷ್ಕರ್ಮಿಗಳು, ಹಂದಿ ಅಣ್ಣಿಯನ್ನು ಅಟ್ಟಾಡಿಸಿಕೊಂಡು ಹೊಡೆದು ಕೊಲೆ ಮಾಡಿದ್ದರು. ತಲೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಹೊಡೆದಿದ್ದು, ಹಂದಿ ಅಣ್ಣಿ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಹಿಂದೆ ಲವ ಹಾಗೂ ಕುಶರನ್ನು ಹಂದಿ ಅಣ್ಣಿ ಹತ್ಯೆ ಮಾಡಿ ಶಿವಮೊಗ್ಗದ ಭೂಗತ ಲೋಕದಲ್ಲಿ ಮೆರೆದಿದ್ದ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ. ಇನ್ನೂ ರೌಡಿ ಹಂದಿ ಅಣ್ಣಿ ಹತ್ಯೆ ಬಗ್ಗೆ ಮಾಡಿದವರ ಬಗ್ಗೆ ಪೊಲೀಸರಿಗೆ ಬಹುತೇಕ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಬಂಧನ ಮಾಡಲಾಗುತ್ತೆ ಎಂದಿದ್ದಾರೆ ಹೋಂ ಮಿನಿಸ್ಟರ್ ಆರಗ ಜ್ಞಾನೇಂದ್ರ. ಇನ್ನೂ ಬಹಳ ವರ್ಷಗಳಿಂದ ಶಿವಮೊಗ್ಗ ರೌಡಿಗಳ ಬ್ರಿಡಿಂಗ್ ಸೆಂಟರ್ ಆಗಿದೆ. ಅದು ಕೊತ್ವಾಲ್ ರಾಮಚಂದ್ರನಿಂದಲೂ ಆ ಪರಂಪರೆ ನಡೆದು ಕೊಂಡು ಬಂದಿದೆ ಎಂದಿದ್ದಾರೆ.

ಇದನ್ನು ಓದಿ: ಸಿದ್ದರಾಮಯ್ಯ ಸ್ಪರ್ಧೆಗೆ ಕ್ಷೇತ್ರ ಫಿಕ್ಸ್​..! ಮಹತ್ವದ ನಿರ್ಧಾರ ಘೋಷಣೆ..!

ಕಿಕ್​ ಬಾಕ್ಸಿಂಗ್​ ಹೆಸರಲ್ಲಿ ಮೈಸೂರು ಯುವಕನ ಕೊಲೆ..!

ಬೆಂಗಳೂರಿನಲ್ಲಿ ನಡೆದಿದ್ದ ಕಿಕ್ ಬಾಕ್ಸಿಂಗ್ ಆಟದಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ‌ ಸಾವನ್ನಪ್ಪಿದ್ದಾನೆ. ಜುಲೈ 10ರಂದು ಬೆಂಗಳೂರಿನ ಕೆಂಗೇರಿಯಲ್ಲಿ ಕಿಕ್​ ಬಾಕ್ಸಿಂಗ್ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಮೈಸೂರಿನ ನಿಖಿಲ್​ ಎಂಬ ಸ್ಪರ್ಧಾಪಟು ಭಾಗಿಯಾಗಿದ್ದರು. ಆದರೆ ಎದುರಾಳಿಯ ಒಂದೇ ಏಟಿಗೆ ಕುಸಿದು ಬಿದ್ದ ನಿಖಿಲ್​ ಕೋಮಾಗೆ ಹೋಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಗುರುವಾರ ​ ಮೃತಪಟ್ಟಿದ್ದಾರೆ. ಆದರೆ ಕಿಕ್​ ಬಾಕ್ಸಿಂಗ್​ ನಡೆಯುವ ಸಂದರ್ಭದಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ, ಶೀಘ್ರವೇ ಚಿಕಿತ್ಸೆ ದೊರೆಯಲಿಲ್ಲ ಎಂದು ಆರೋಪಿಸಿ ದೂರು ನೀಡಲಾಗಿದೆ. ಆಯೋಜಕ ನವೀನ್ ರವಿಶಂಕರ್​​​ ವಿರುದ್ಧ ನಿಖಿಲ್ ತಂದೆ ಸುರೇಶ್ ದೂರು ನೀಡಿದ್ದಾರೆ. ನನ್ನ ಮಗನನ್ನು ಅನ್ಯಾಯವಾಗಿ ಕೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಇದು ಉದ್ದೇಶ ಪೂರ್ವಕ ಕೊಲೆಯೋ..? ಅಥವಾ ಆಕಸ್ಮಿಕವಾಗಿ ನಡೆದಿರುವ ಸಾವೋ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಗಲಕೋಟೆಯಲ್ಲಿ ಧಾರ್ಮಿಕ ಸಂಘರ್ಷದ ಬೆಂಕಿ ಕಿಡಿ..!

ಕಳೆದ ಕೆಲವು ದಿನಗಳ ಹಿಂದೆ ಎರಡು ಸಮುದಾಯಗಳ ನಡುವೆ ಬಾಗಲಕೋಟೆಯ ಕೆರೂರಿನಲ್ಲಿ ಘರ್ಷಣೆ ನಡೆದಿತ್ತು. ಹಿಂದೂ – ಮುಸ್ಲಿಂ ಘರ್ಷಣೆ ಬಳಿಕ ಇದೀಗ ಗಲಾಟೆ ಮತ್ತೊಂದು ಹಂತಕ್ಕೆ ಹೋಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಬಾಗಲಕೋಟೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆನಂದ ಇಂಗಳಗಾಂವಿಗೆ ಜೀವ ಬೆದರಿಕೆ ಹಾಕಲಾಗಿದೆ. ಮಧ್ಯರಾತ್ರಿ 2.25ಕ್ಕೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ, ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ. ಇಂಟರ್​ನೆಟ್​​ ಕಾಲ್ ಮೂಲಕ ಕರೆ ಮಾಡಿದ್ದು ಕೇವಲ 8 ನಂಬರ್​ಗಳು ಬಂದಿವೆ ಎನ್ನಲಾಗಿದೆ. ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್​ ಹಾಗೂ ಬೀಳಗಿ ಠಾಣೆಗೆ ಈ ಬಗ್ಗೆ ದೂರು ನೀಡಲಾಗಿದೆ. ಚುನಾವಣ ವರ್ಷ ಆಗಿರುವ ಕಾರಣ ಖಾಕಿ ಪಡೆಗೆ ಧಾರ್ಮಿಕ ಸಮುದಾಯಗಳ ಸಂಘರ್ಷ ನಿದ್ರೆಗೆಡಿಸಿದೆ.

Related Posts

Don't Miss it !