ಮಲೆನಾಡು, ಕರಾವಳಿ ಜನರು ಅರೆಸ್ಟ್‌ ಆಗ್ತಾರಾ..?

Cheetha Skin

ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್‌‌ ಹಾಕಿಕೊಂಡಿರುವ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ವರ್ತೂರು ಸಂತೋಷ್‌‌ ಬಂಧನ ಮಾಡಿ ಬೇಲ್‌ ಮೇಲೆ ಬಿಡುಗಡೆ ಆಗಿದ್ದರೂ ಹುಲಿ ಉಗುರಿನ ಪೆಂಡೆಂಟ್‌ ಹಾಕಿದ ಆರೋಪದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದೆ. ಪೆಂಡೆಂಟ್‌ಗಳನ್ನು ವಶಕ್ಕೆ ಪಡೆಯುತ್ತಲೇ ಇದ್ದಾರೆ. ಆದರೆ ಈ ನಡುವೆ ಮಲೆನಾಡು ಹಾಗು ಕರಾವಳಿ ಭಾಗದ ಎಲ್ಲಾ ಮನೆಯವರನ್ನು ಅರೆಸ್ಟ್‌ ಮಾಡುವ ಭೀತಿ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮಲೆನಾಡು ಭಾಗದಲ್ಲಿ ಪ್ರತಿಯೊಂದು ಮನೆಯಲ್ಲೂ ಹುಲಿ ಉಗುರು ಸೇರಿದಂತೆ ಕಾಡು ಪ್ರಾಣಿಗಳ ಕೊಂಬು, ಕಾಡು ಪ್ರಾಣಿಗಳ ಚರ್ಮ ಇದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಎಲ್ಲರ ಮನೆಯಲ್ಲೂ ಇವೆಯಂತೆ ಪ್ರಾಣಿ ಜನ್ಯ..!

ವನ್ಯಜೀವಿ ಹತ್ಯೆ ಹಾಗು ವಸ್ತುಗಳ ಮಾರಾಟ ಮಾಡುವವ ವಿರುದ್ಧ ಕ್ರಮ ಆಗಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಪ್ರಚಾರದ ಗೀಳಿಗೆ ಬಿದ್ದವರಂತೆ ಅರೆಸ್ಟ್ ಮಾಡಲಾಗ್ತಿದೆ. ಯಾವುದೇ ಪೂರ್ವಾಪರ ವಿಚಾರ ಮಾಡದೆ ಪ್ರಕರಣಗಳನ್ನು ದಾಖಲು ಮಾಡ್ತಿದ್ದಾರೆ. ಮಲೆನಾಡು, ಕರಾವಳಿ ಭಾಗದ ಮನೆ ಮನೆಗಳಲ್ಲಿ ಇಂದಿಗೂ ನೂರಾರು ವರ್ಷದ ಕೋಡುಗಳಿವೆ. ಕಾಡೆಮ್ಮೆ, ಜಿಂಕೆಯ ಕೋಡುಗಳನ್ನು ಆಲಂಕಾರಿಕ ವಸ್ತುಗಳನ್ನಾಗಿ ಬಳಕೆ ಮಾಡ್ತಿದ್ದಾರೆ.. ವನ್ಯಜೀವಿ ಸಂರಕ್ಷಣಾ ಕಾಯ್ದೆ ಬರುವ ಮುಂಚೆಯೇ ಕೆಲವು ವಸ್ತುಗಳನ್ನು ಬಳಸುತ್ತಿದ್ದರು.. ನವಿಲು ಗರಿ ಸಂಗ್ರಹ ಹಿನ್ನೆಲೆ ಅರೆಸ್ಟ್ ಮಾಡೋಕೆ ಆಗುತ್ತಾ..? ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.

ಹುಲಿ ಉಗುರು ಪೆಂಡೆಂಟ್‌ ಅನ್ನೋದೇ ನಾಟಕನಾ..?

ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಸರ್ಕಾರ, ರಾಜ್ಯದ ಜನರ ದಾರಿ ತಪ್ಪಿಸಲು ಕಾಂಗ್ರೆಸ್ಸಿಗರು, ಹುಲಿ ಉಗುರಿನ ನಾಟಕ ಶುರು ಮಾಡಿದ್ದಾರೆ ಅಂತ ಮಾಜಿ ಸಚಿವ ಸಿ.ಟಿ.ರವಿ ಜಾಲತಾಣದಲ್ಲಿ‌ ವಾಗ್ದಾಳಿ ಮಾಡಿದ್ದಾರೆ. ಐಟಿ ದಾಳಿಯಲ್ಲಿ ಪತ್ತೆಯಾದ ಕೋಟ್ಯಂತರ ಹಣದ ಚರ್ಚೆಯ ದಾರಿ ತಪ್ಪಿಸಲು ಹುಲಿ ಉಗುರಿನ ನಾಟಕವಾಡುತ್ತಿದ್ದಾರೆ. ಕಮಿಷನ್ ಕಲೆಕ್ಟರ್ ಅಂದರೆ ಸಿಎಂ, ಡೆಪ್ಯೂಟಿ ಕಮಿಷನ್ ಕಲೆಕ್ಟರ್ ಅಂದರೆ DCM ಈ ನಾಟಕ ಸೃಷ್ಟಿಸಿದ್ದಾರೆ. ಜನ ನೂರಾರು ವರ್ಷಗಳಿಂದ ಹುಲಿ ಉಗುರನ್ನ ಆಭರಣವಾಗಿ ಧರಿಸುತ್ತಿದ್ದಾರೆ. ಇದು ಅರಣ್ಯ ಇಲಾಖೆಗೆ ಕಾಣದ್ದೇನು ಅಲ್ಲ. ರಾಜ್ಯ ಸರ್ಕಾರದ ವೈಫಲ್ಯ, ಬೋಗಸ್ ಭರವಸೆಗಳಿಂದ ಜನರು ಆಕ್ರೋಶ ಆಗ್ತಿದ್ದಾರೆ. ರೈತರಿಗೆ ವಿದ್ಯುತ್ ಪೂರೈಸ್ತಿಲ್ಲ, ಕತ್ತಲೆ ಭಾಗ್ಯ ಹೆಚ್ಚಾಗಿದೆ, ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ವೈಫಲ್ಯ, ಕಾಂಗ್ರೆಸ್‌ ಪಕ್ಷದ ಶಾಸಕರೇ ಬಂಡಾಯದ ಬಸ್ ಹತ್ತುತ್ತಿರುವ ಬೇಗುದಿ ಮುಚ್ಚಿಡಲು ಈ ನಾಟಕ ಎಂದಿದ್ದಾರೆ ಸಿ.ಟಿ ರವಿ.

Related Posts

Don't Miss it !