ಸಾವಿನ ಮನೆಯಲ್ಲಿ ಬುಡಬುಡಿಕೆ ಸಮುದಾಯದ ವ್ಯಕ್ತಿ ಮಾಡಿದ ಕರಾಮತ್ತು..!

ಅನ್ಯಾಯಕ್ಕೆ ಮರುಳಾಗುವ ಜನರು ಇರುವ ತನಕ ಅನ್ಯಾಯ ಮಾಡುವವರನ್ನು ತಡೆಯಲು ಸಾಧ್ಯವಿಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್​ ಆಗಿದೆ. ಸಾವಿನ ಮನೆಗೆ ಬಂದಿದ್ದ ಬುಡುಬುಡಿಕೆ ಸಮುದಾಯದ ವ್ಯಕ್ತಿಯೊಬ್ಬ ಈ ಮನೆಯಲ್ಲಿ ಇನ್ನೂ ಮೂರು ಜನರ ಸಾವಾಗುತ್ತದೆ ಎಂದು ಬೆದರಿಕೆ ಹುಟ್ಟಿದೆ. ಮನೆಯಲ್ಲಿದ್ದ ಚಿನ್ನವನ್ನು ದೋಚಿಕೊಂಡು ಹೋಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಜ್ಞಾನ ಭಾರತಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಯನ್ನು ಪತ್ತೆ ಮಾಡಿ ನ್ಯಾಯ ಕೊಡಿಸುವಂತೆ ಪೊಲೀಸ್​ ಠಾಣೆಗೆ ದೂರು ಸಲ್ಲಿಸಲಾಗಿದೆ.

ಮತ್ತೆ ಮೂರು ಸಾವು ಎಂದು ಹೆದರಿಸಿದ್ದ ಬುಡುಬುಡಿಕೆ..!

ಬೆಂಗಳೂರಿನ ಜ್ಞಾನ ಭಾರತಿಯಲ್ಲಿ ಇದೇ ಕಳೆದ ಜುಲೈ ತಿಂಗಳಿನಲ್ಲಿ ಈ ಘಟನೆ ಜರುಗಿದೆ. ನಿವೃತ್ತ ಸರ್ಕಾರಿ ನೌಕರnಆಗಿರುವ ವರದರಾಜು ಎಂಬುವರ ತಂದೆ ಇತ್ತೀಚೆಗೆ ಸಾವನ್ನಪ್ಪಿದ್ರು. ಸಾವಿನ ಸಲುವಾಗಿ ಮನೆ ಮುಂದೆ 11 ದಿನ ದೀಪವನ್ನು ಹಚ್ಚಿದ್ರು. ಜುಲೈ 13ರಂದು ಆ ರಸ್ತೆಯಲ್ಲಿ ಹೋಗಿದ್ದ ಬುಡುಬುಡಿಕೆ ಸಮುದಾಯಕ್ಕೆ ಸೇರಿದ ವ್ಯಕ್ತಿ ಈ ಮನೆಯಲ್ಲಿ ಇನ್ನೂ ಮೂರು ಜನರ ಸಾವಾಗುತ್ತೆ ಎಂದು ಹೇಳುತ್ತಾ ಹೋಗಿದ್ದ. ಆ ಬಳಿಕ ಮರುದಿನ ಬೆಳಗ್ಗೆ ಅದೇ ಮನೆಗೆ ಬಂದಿದ್ದ ಬುಡುಬುಡಿಕೆ ವ್ಯಕ್ತಿ ಮನೆಯಲ್ಲಿದ್ದ ಮಹಿಳೆಯ ಬಳಿ ಇನ್ನೂ ಮೂವರ ಸಾವು ಸಂಭವಿಸುತ್ತದೆ. ಗಂಡಾಂತರದಿಂದ ಪಾರಾಗಲು ಪೂಜೆ ಮಾಡಿಸಬೇಕಿದೆ ಎಂದಿದ್ದ.

ಬುಡುಬುಡಿಕೆ ಕೃಷ್ಣಪ್ಪನ ಪೂಜೆಗೆ 5 ಸಾವಿರ ವೆಚ್ಚ..!

ಬುಡುಬುಡಿಕೆ ಸಮುದಾಯದ ವ್ಯಕ್ತಿಯ ಮಾತನ್ನು ಅಗಾಧವಾಗಿ ನಂಬಿಕೊಂಡಿದ್ದ ಆ ಮಹಿಳೆ ಪೂಜೆ ಮಾಡಿಸಲು ಖರ್ಚಾಗುವ 5 ಸಾವಿರ ರೂಪಾಯಿ ಹಣವನ್ನು ಕೊಟ್ಟ ಪೂಜೆ ಕೂಡ ಮಾಡಿಸಿದ್ದಾರೆ. ಆ ವೇಳೆ ಆ ಮಹಿಳೆಯ ಹಣೆಗೆ ಕಪ್ಪು ಕಾಡಿಗೆ ಹಚ್ಚಿದ್ದಾನೆ. ಆಕೆಯ ಕೊರಳಲ್ಲಿದ್ದ ಎರಡು ಚಿನ್ನದ ಸರಗಳು ಹಾಗು ಕೈಯ್ಯಲ್ಲಿ ಹಾಕಿದ್ದ ಉಂಗುರವನ್ನು ಬಿಚ್ಚಿಸಿಕೊಂಡಿದ್ದಾನೆ. ಆಕೆ ಯಾವುದೇ ಪ್ರತಿರೋಧ ತೋರಿಸಿದೆ ಬಿಚ್ಚಿ ಕೊಟ್ಟಿದ್ದಾರೆ. ಇನ್ನೊಮ್ಮೆ ಪೂಜೆ ಮಾಡುವುದು ಇದೆ. ಪೂಜೆ ಮುಕ್ತಾಯವಾದ ಬಳಿಕ ವಾಪಸ್​ ಕೊಡುತ್ತೇನೆ ಎಂದು ಹೇಳಿ ಹೋಗಿರುವ ಬುಡುಬುಡಿಕೆ ಸಮುದಾಯದ ವ್ಯಕ್ತಿ ಕೃಷ್ಣಪ್ಪ, ಇನ್ನೂ ಕೂಡ ವಾಪಸ್​ ಆಗಿಲ್ಲ.

ಕಣ್ಕಟ್​ ಮಾಡ್ತಾರೆ ಅನ್ನೋದು ನಿಜನಾ ಸುಳ್ಳಾ..?

ಸಂತೆ, ಜಾತ್ರೆಯಲ್ಲೂ ಈ ರೀತಿ ಕಳ್ಳತನ ಮಾಡುವ ಸಂಪ್ರದಾಯವಿದೆ. ಎಲ್ಲಾ ದೃಶ್ಯಗಳು ಕಣ್ಣಿಗೆ ಕಾಣಿಸುತ್ತಿದ್ದರು, ತಾನು ಏನು ಮಾಡುತ್ತೇನೆ ಎನ್ನುವುದು ಅರ್ಥವಾಗುಷ್ಟರಲ್ಲಿ ಎಲ್ಲವೂ ನಡೆದು ಹೋಗಿರುತ್ತದೆ. ತಾವು ಮಾಡುತ್ತಿರುವುದು ತಪ್ಪು ಎಂದು ಅನಿಸುವುದಿಲ್ಲ ಎನ್ನುತ್ತಾರೆ ಈ ಬಗ್ಗೆ ತಿಳಿದವರು. ಇನ್ನೂ ಈ ರೀತಿಯ ಕೆಲಸಕ್ಕೆ ವಂಚಕರು ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಿಕೊಂಡು ಸುಲಭವಾಗಿ ವಂಚನೆ ಮಾಡುತ್ತಾರೆ ಎನ್ನುತ್ತಾರೆ. ಇದೀಗ ಜ್ಙಆನಭಾರತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಸಿಸಿಟಿವಿ ದೃಶ್ಯಗಳು ಸಿಗುವ ವ್ಯವಸ್ಥೆಯಿದ್ದು, ಪೊಲೀಸರು ಮನಸ್ಸು ಮಾಡಿದರೆ ಆರೋಪಿ ಬಂಧನ ಕಷ್ಟವೇನಲ್ಲ ಎನ್ನಬಹುದು.

Related Posts

Don't Miss it !