ಇವತ್ತು ಪರೀಕ್ಷೆ ಮಿಸ್​ ಮಾಡಿಕೊಂಡ್ರೆ ಭವಿಷ್ಯವೇ ಭಸ್ಮ..! ಬೀ ಕೇರ್​ ಫುಲ್​

ರಾಜ್ಯದಲ್ಲಿ ಹಿಜಬ್​ ವಿವಾದ ಸಾಕಷ್ಟು ಅನಾಹುತಗಳಿಗೆ ಕಾರಣವಾಗಿದೆ. ನಾಳೆಯಿಂದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಶುರುವಾಗುತ್ತಿದ್ದು, ಒಂದು ವೇಳೆ ಹಿಜಬ್ ಅಥವಾ, ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದರೆ ಪ್ರವೇಶ ಸಿಗೋದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ನಮಗೆ ಪರೀಕ್ಷೆಗಿಂತಲೂ ಧರ್ಮವೇ ಮುಖ್ಯ ಎಂದು ಹಠವಿಡಿದು ಮನೆಯಲ್ಲೇ ಕುಳಿತರೆ ಪ್ರಾಯೋಗಿಕ ಪರೀಕ್ಷೆಯ 30 ಅಂಕಗಳನ್ನು ಕಳೆದುಕೊಳ್ಳುವುದು ಖಚಿತ. ರಾಜ್ಯಾದ್ಯಂತ ಹೈಕೋರ್ಟ್​ ಆದೇಶ ಪಾಲನೆಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಯಾವುದೇ ಕಾರಣಕ್ಕೂ ಹಿಜಬ್​ಗೆ ಅವಕಾಶವಿಲ್ಲ ಎಂದ ಸಚಿವರು ತಿಳಿಸಿದ್ದಾರೆ. ಹಿಜಬ್​ ಧರಿಸಿ ಬಂದರೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವಂತಿಲ್ಲ ಎಂದು ರಾಜ್ಯ ಸರ್ಕಾರ ಈಗಾಗಲೇ ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ. ಈ ಬಾರಿ ಪರೀಕ್ಷೆ ಬರೆಯದಿದ್ದರೆ ಮುಂದೆ ಅವಕಾಶವೂ ಸಿಗುವುದಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.

ಗೈರು ಆದರೆ 70 ಅಂಕಗಳಲ್ಲೇ ಪಾಸ್ ಆಗುವ ಕಠಿಣ ಸವಾಲು..!

ಇಂದು ನಡೆಯುವ ಪ್ರಾಯೋಗಿಕ ಪರೀಕ್ಷೆಗೆ ಒಂದು ವೇಳೆ ಗೈರು ಹಾಜರಿ ಆದರೆ ಪಾಸ್​ ಆಗುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ಮುಂದಿನ ತಿಂಗಳು ನಡೆಯುವ ಮುಖ್ಯ ಪರೀಕ್ಷೆಯಲ್ಲಿ 70 ಅಂಕಗಳಿಗೆ ನಡೆಯುವ ಥಿಯರಿಯಲ್ಲಿ ಪಾಸ್​ ಆಗುವುದಕ್ಕೆ ಬೇಕಾದಷ್ಟು ಅಂಕಗಳನ್ನು ಗಳಿಸಬೇಕು. ಪ್ರಾಕ್ಟಿಕಲ್​ ಎಕ್ಸಾಂಗೆ ಹಾಜರಾಗಿ ಪರೀಕ್ಷೆ ಎದುರಿಸಿದರೆ 30 ಅಂಕಗಳಿಗೆ ಕನಿಷ್ಠ 20, 25 ಅಂಕ ಗಳಿಸಿ ಶೇಕಡವಾರು ಅಂಕಗಳನ್ನು ಹೆಚ್ಚಳ ಮಾಡಿಕೊಳ್ಳಬಹುದು. ಒಂದು ವೇಳೆ ವಿಜ್ಞಾನ ವಿಷಯದಲ್ಲಿ ಪಾಸ್​ ಆಗುವುದಕ್ಕೆ ಕಷ್ಟ ಎನ್ನುವ ವಿದ್ಯಾರ್ಥಿಗಳು ಗೈರು ಹಾಜರಾದರೆ ಫೇಲ್​ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಥಿಯರಿ ಎಕ್ಸಾಂಗೂ ಹಿಜಬ್​ ಅಥವಾ ಕೇಸರಿ ಶಲ್ಯಕ್ಕೆ ಅವಕಾಶ ಇಲ್ಲದಿರುವ ಕಾರಣಕ್ಕೆ ಭವಿಷ್ಯ ಕತ್ತಲಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಮಕ್ಕಳು ಹಠ ಮಾಡದೆ ಪರೀಕ್ಷೆಗೆ ಹಾಜರಾಗುವುದು ಭವಿಷ್ಯದ ದೃಷ್ಠಿಯಿಂದ ಉತ್ತಮ. ರಾಜಕೀಯ ಕಾರಣಕ್ಕಾಗಿ ವಿದ್ಯಾರ್ಥಿಗಳನ್ನು ಮುಂದೆ ಬಿಟ್ಟು ಹಿಂದೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಭವಿಷ್ಯ ಮುಖ್ಯವೇ ಹೊರತು ಧರ್ಮವಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಇದನ್ನೂ ಓದಿ: ಅಪ್ಪು ನಿಧನದ ಬೆನ್ನಲ್ಲೇ ಅಶ್ವಿನಿ ಪುನೀತ್​ ರಾಜ್​​ಕುಮಾರ್​ಗೆ ಮತ್ತೊಂದು ಆಘಾತ..!

ಹೈಕೋರ್ಟ್​ ಆದೇಶ ಪಾಲಿಸಿ, ಪ್ರಾಯೋಗಿಕ ಪರೀಕ್ಷೆ ಬರೆಯಿರಿ..!

ಉಡುಪಿಯಲ್ಲಿ ಹಿಜಬ್​​ಗಾಗಿ ಹೋರಾಟ ನಡೆಸುತ್ತಿರುವ 6 ಮಂದಿ ವಿದ್ಯಾರ್ಥಿಗಳು ಹೈಕೋರ್ಟ್​ ಮಧ್ಯಂತರ ಆದೇಶದ ಬಳಿಕವೂ ಕಾಲೇಜಿಗೆ ಗೈರು ಹಾಜರಾಗಿದ್ದಾರೆ. ಆ 6 ಜನ ವಿದ್ಯಾರ್ಥಿನಿಯರಲ್ಲಿ ಮೂವರು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರೂ ಇದ್ದಾರೆ. ಈ ಹಿಂದೆ ಕಾಲೇಜಿಗೆ ಗೈರಾಗಿದ್ದೇವೆ ಎನ್ನುವ ಕಾರಣಕ್ಕ ನಾಳೆಯೂ ಹೈಕೋರ್ಟ್​ ಆದೇಶ ಪಾಲನೆ ಮಾಡದಿದ್ದರೆ ಸಂಕಷ್ಟ ಗ್ಯಾರಂಟಿ. ಮೂವರು ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರಾದ ಹಜ್ರಾ, ಆಯಿಷಾ ಹಾಗೂ ಆಲ್ಮಾಸ್​ ಅಂಕ ಕಳೆದುಕೊಳ್ಳುವ ಜೊತೆಗೆ ಶೇಕಡ 45ರಷ್ಟು ಅಂಕಗಳನ್ನು ಗಳಿಸದಿದ್ದರೆ ಮುಂದಿನ ವಿದ್ಯಾಭ್ಯಾಸ, ಸಿಇಟಿ ಸೇರಿದಂತೆ ಬಹುತೇಕ ಭವಿಷ್ಯ ಸಂಕಷ್ಟಕ್ಕೆ ಗುರಿಯಾಗಲಿದೆ. ಉಡುಪಿ ಅಷ್ಟೇ ಅಲ್ಲದೆ, ರಾಜ್ಯಾದ್ಯಂತ ಹಿಜಬ್​ ಹೋರಾಟ ಬೆಂಬಲಿಸಿ ಗೈರು ಹಾಜರಾಗಿರುವ ವಿದ್ಯಾರ್ಥಿಗಳು ಧರ್ಮದ ಹಂಗು ತೊರೆದು ಪರೀಕ್ಷೆಗೆ ಹಾಜರಾಗಬೇಕಿದೆ.

ಹೈಕೋರ್ಟ್​ ಕೂಡ ಮನವಿ ಪುರಸ್ಕಾರ ಮಾಡಲ್ಲ..!

ಹಿಜಬ್​​ ಪರವೋ ಅಥವಾ ವಿರುದ್ಧವೋ ತೀರ್ಪು ಬಂದ ಬಳಿಕ ಪ್ರಾಯೋಗಿಕ ಪರೀಕ್ಷೆಗೆ ಅನುವು ಮಾಡಿಕೊಡುವಂತೆ ಕೋರ್ಟ್​ ಮೆಟ್ಟಿಲೇರಿದರೂ ಕೋರ್ಟ್​ ಪರಸ್ಕಾರ ಮಾಡುವ ಸಾಧ್ಯತೆ ತೀರಾ ಕಡಿಮೆ. ಹೈಕೋರ್ಟ್​ ಈಗಾಗಲೇ ಮಧ್ಯಂತರ ಆದೇಶ ನೀಡಿದ್ದು, ಯಾವುದೇ ಧಾರ್ಮಿಕ ಸಂಕೇತ ಬಿಂಬಿಸುವ ವಸ್ತ್ರಗಳನ್ನು ಧರಿಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದೆ. ಹೀಗೆ ಹೇಳಿದ ಕಾರಣಕ್ಕೆ ನಾವು ಕಾಲೇಜಿಗೆ ಹೋಗುವುದಿಲ್ಲ ಎನ್ನುವುದಾದರೆ, ಮುಂದಿನ ದಿನಗಳಲ್ಲಿ ಹಿಜಬ್​ ಪರವಾಗಿ ತೀರ್ಪು ಬಂದರೂ ಪರೀಕ್ಷೆಗೆ ಮತ್ತೆ ಅವಕಾಶ ನೀಡುವುದಿಲ್ಲ. ಕಾರಣ ಏನೆಂದರೆ ಒಮ್ಮೆ ಕೋರ್ಟ್​ ಆದೇಶವನ್ನು ಧಿಕ್ಕರಿಸಿದ್ದೀರಿ ಎಂದರೆ ಕೋರ್ಟ್​ ಮೇಲೆ ವಿಶ್ವಾಸ ಇಟ್ಟಿಲ್ಲ ಎನ್ನುವ ಮಾನದಂಡದ ಆಧಾರದಲ್ಲಿ ಮನವಿಯನ್ನು ತಳ್ಳಿ ಹಾಕಲಾಗುತ್ತದೆ. ಪಿಯುಸಿ ಅಂಕಗಳು ಮುಂದಿನ ಭವಿಷ್ಯಕ್ಕೆ ದಾರಿದೀಪ ಆಗಬಲ್ಲದು. ನೀವು ಹಿಜಬ್​ ಪರವೋಈ ವಿರುದ್ಧವೋ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ. ಹೈಕೋರ್ಟ್​ ಆದೇಶದ ಪ್ರಕಾರ ಇಂದಿನ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವುದು ಉತ್ತಮ ಎನ್ನುವುದು The Public Spot ಅಭಿಮತ.

Related Posts

Don't Miss it !