BIG BREAKING: ಬಿಜೆಪಿ ಹೈಕಮಾಂಡ್​ನಿಂದ ಸಂಜೆ ವೇಳೆಗೆ ರಾಜಕೀಯ ಸಂದೇಶ..!

ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗುವ ಮುನ್ಸೂಚನೆ ಸಿಕ್ಕಿದ್ದು, ಘಟಾನುಘಟಿ ನಾಯಕರುಗಳೇ ಸಿಎಂ ಸ್ಥಾನದ ಪೈಪೋಟಿಯಲ್ಲಿದ್ದಾರೆ. ನಾಳೆಗೆ ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಎರಡು ವರ್ಷ ಪೂರ್ಣಗೊಳ್ಳುವ ಜೊತೆಗೆ ಅಧಿಕಾರದಿಂದ ಇಳಿಯಬೇಕು ಎನ್ನುವ ಸಂದೇಶ ಸಿಕ್ಕಿ ಆಗಿದೆ. ಇದೀಗ ರಾಜೀನಾಮೆ ಸಂದೇಶದ ಜೊತೆಗೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಸಂದೇಶ ಇಂದು ಸಂಜೆ ಒಳಗೆ ಬರುವ ಸಾಧ್ಯತೆ ದಟ್ಟವಾಗಿದೆ.

ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ, ದೆಹಲಿಯಿಂದ ಸಂಜೆಯ ವೇಳೆಗೆ ಸಂದೇಶ ಬರದಲಿದೆ ಎಂದಿದ್ದಾರೆ. ಹೈಕಮಾಮಡ್​ ಸಂದೇಶ ಬಂದ ತಕ್ಷಣ ನಿಮಗು ಗೊತ್ತಾಗಲಿದೆ ಎನ್ನುವ ಮೂಲಕ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಇನ್ನೂ ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿ ಸಮಾವೇಶ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಯಾವುದೇ ಸಭೆ ಮಾಡೋದು ಅವಶ್ಯಕತೆ ಇಲ್ಲ ಎನ್ನುವ ಮೂಲಕ ಎಲ್ಲವೂ ಅಂತಿಮವಾಗಿದೆ ಎನ್ನುವ ಸುಳಿವು ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ ಹಾಗೂ ಜೆ.ಪಿ ನಡ್ಡಾ ಬಗ್ಗೆ ನನಗೆ ವಿಶ್ವಾಸವಿದೆ ಎಂದಿದ್ದಾರೆ.

ಬಿಜೆಪಿಯವರು ಸಿಎಂ ಬದಲಾವಣೆ ಮಾಡುತ್ತಿರುವ ಈ ಹೊತ್ತಿನಲ್ಲಿ ದಲಿತ ಸಿಎಂ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ದಲಿತ ಸಿಎಂ ಮಾಡುವ ಬಗ್ಗೆ ಚರ್ಚೆ ಕೂಡ ನಡೆದಿದೆ, ಈಗಾಗಲೇ ಶ್ರೀರಾಮುಲು ಅವರನ್ನು ಹೈಕಮಾಮಡ್​ ನಾಯಕರು ದೆಹಲಿಗೆ ಕರೆಸಿಕೊಂಡು ಚರ್ಚಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿ ದಲಿತ ಸಿಎಂ ಮಾಡುವ ಬಗ್ಗೆ ಎಲ್ಲಾ ತೀರ್ಮಾನ ಮಾಡೊದು ಹೈಕಮಾಂಡ್ ನಾಯಕರು. ಹೈಕಮಾಂಡ್ ನಾಯಕರು ಯಾವ ತೀರ್ಮಾನ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡೊಣ ಎಂದು ಗುಟ್ಟು ಮಾಡಿದ್ದಾರೆ.

ಚುನಾವಣೆ ಅಸ್ತ್ರವಾಗಿ ‘ದಲಿತ ಸಿಎಂ’..!

ಬಿಜೆಪಿ ಪಕ್ಷವನ್ನು ಮುಂದಿನ ಬಾರಿಗೆ ಅಧಿಕಾರಕ್ಕೆ ತರುವ ಉದ್ದೇಶದಿಂದ ಬಿಜೆಪಿ ನಾಯಕರು ಭಾರೀ ತಂತ್ರಗಾರಿಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮತಗಳು ನಿರ್ಣಾಯಕ ಆಗುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಮತಬ್ಯಾಂಕ್​ ಆಗಿರುವ ದಲಿತರನ್ನು ಸೆಳೆಯುವ ಎಲ್ಲಾ ತಂತ್ರಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ದಲಿತ ಸಮುದಾಯಕ್ಕೆ ಸೇರಿರುವ ಗೆಹ್ಲೋಟ್​ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ದಲಿತ ಸಮುದಾಯಕ್ಕೆ ಸೇರಿರುವ ಎ ನಾರಾಯಣಸ್ವಾಮಿ ಅವರನ್ನು ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಲಾಗಿದೆ. ಇದೀಗ ಉಳಿದ ಎರಡು ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನವನ್ನು ದಲಿತ ಸಮುದಾಯಕ್ಕೆ ನೀಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಯೋಜನೆಯೂ ನಡೆಯುತ್ತಿದೆ ಎನ್ನಲಾಗಿದೆ.

Related Posts

Don't Miss it !