ಕರ್ನಾಟಕದಲ್ಲಿ ನೀವು ನೋಡಬೇಕಾದ ವಿಶೇಷ ಗಣೇಶ ಕ್ಷೇತ್ರಗಳು ಇವು..!

ಗಣೇಶೋತ್ಸವ ಸಾಂಗವಾಗಿ ಸಾಗುತ್ತಿದೆ. ಗಣೇಶ ವಿಘ್ನನಿವಾರಕ ಎನ್ನುವ ನಂಬಿಕೆ ಹಿಂದೂಗಳಲ್ಲಿದ್ದು, ಯಾವುದೇ ಕೆಲಸ ಮಾಡಬೇಕಿದ್ದರೂ ಮೊದಲು ಪೂಜಿಸಿ ಆರಂಭಿಸುವುದು ವಾಡಿಕೆ. ಗಣೇಶ ಬುದ್ಧಿವಂತ ತನ್ನ ತಂದೆ ತಾಯಿ ಅವರನ್ನೇ ಸುತ್ತು ಹಾಕಿ ಭೂಮಂಡಳ ಸುತ್ತಿದೆ ಎಂದಿದ್ದನು ಎನ್ನುವುದು ಪುರಾಣದಲ್ಲಿ ತಿಳಿಯುತ್ತದೆ. ಗಣೇಶನಿಗೆ ವಿಜೃಂಭಣೆ ಆಗತ್ಯವಿಲ್ಲ, ಸಗಳಿಯಿಂದ ಒಂದು ಉಂಡೆ ಮಾಡಿ ಗರಿಕೆಯನ್ನು ಸಿಕ್ಕಿಸಿ ಪೂಜೆ ಮಾಡಿದರೂ ಗಣೇಶನಿಗೆ ಸಲ್ಲುತ್ತದೆ ಎನ್ನಲಾಗುತ್ತದೆ. ಅದೇ ರೀತಿ ನಡೆದುಕೊಂಡು ಬಂದಿದೆ ಕೂಡ. ಇಂತಹ ಗಣೇಶನಿಗೆ ಕರ್ನಾಟಕದಲ್ಲಿ ವಿಶೇಷ ಕ್ಷೇತ್ರಗಳಿವೆ. ವಿಶ್ವದಲ್ಲಿ ಖ್ಯಾತಿ ಪಡೆದಿರುವ ಸ್ಥಳಗಳೂ ಇವೆ. ಅವುಗಳಲ್ಲಿ ಕೆಲವು ಪ್ರಮುಳ ಸ್ಥಳಗಳನ್ನು ಪಟ್ಟಿ ಮಾಡಲಾಗಿದೆ.

ಕೃಷ್ಣ ನಗರಿ ಉಡುಪಿಯಲ್ಲಿ ಕುಂಭಾಶಿ ಗಣೇಶ..!

ಉಡುಪಿ ಎಂದಾಕ್ಷಣ ನೆನಪಿಗೆ ಬರುವ ಶ್ರೀಕೃಷ್ಣ ದೇವಸ್ಥಾನದಂತೆ ಪ್ರಸಿದ್ಧಿ ಪಡೆದಿರುವುದು ಕುಂಭಾಶಿ ಆನೆಗುಡ್ಡೆ ಗಣಪತಿ ದೇವಸ್ಥಾನ, ಪರಶುರಾಮ ಸೃಷ್ಟಿಸಿದ ಏಳು ಕ್ಷೇತ್ರಗಳ ಪೈಕಿ ಉಡುಪಿ ಕುಂಭಾಶಿ ಆನೆಗುಡ್ಡವೂ ಒಂದು ಎನ್ನುವುದು ವಿಶೇಷ. ಇಲ್ಲಿರುವ ಗಣೇಶ ಮೂರ್ತಿಯನ್ನ ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನ್ನುವ ಭಾವನೆ ಮೂಡುತ್ತದೆ. ಏನನ್ನೇ ಬೇಡಿದರೂ ಈಡೇರಿಸುತ್ತಾನೆ ಎನ್ನುವುದು ಕುಂಭಾಶಿ ಗಣೇಶನ ಭಕ್ತರ ನಂಬಿಕೆ. ಗೌತಮ ಮುನಿಗಳು ತಪಸ್ಸು ಮಾಡುವಾಗ ಯಾಗಕ್ಕೆ ಕುಂಭಾಸುರ ಎಂಬ ರಾಕ್ಷಸನು ಉಪಟಳ ನೀಡುವಾಗ ಪಾಂಡವರು ಕುಂಭಾಸುರನ ಹತ್ಯೆ ಮಾಡಿದರು. ಹತ್ಯೆಗೂ ಮುನ್ನ ದೊಡ್ಡ ಬಂಡೆಯನ್ನು ಗಣೇಶ ರೂಪವೆಮದು ಭಾವಿಷಿ ಪೂಜಿಸಿದರು, ಜಯಶೀಲರನ್ನಾಗಿ ಮಾಡುವಂತೆ ಬೇಡಿಕೊಂಡ ಪಾಂಡವರ ಬೇಡಿಕೆಯನ್ನು ಗಣೇಶ ಈಡೇರಿಸಿದ ಎನ್ನುವುದು ಪುರಾಣದಿಂದ ತಿಳಿದು ಬರುತ್ತದೆ.

Read this also;

ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಗಣೇಶ..!

ಪ್ರಕೃತಿ ಮಡಿಲಲ್ಲಿ ಇರುವ ಇಡಗುಂಜಿ ಗಣೇಶನಿಗೆ 1500 ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ಖ್ಯಾತಿ ಪಡೆದಿರುವ ಇಡಗುಂಜಿ ಗಣೇಶನಿಗೆ ದೇಶಾದ್ಯಂತ ಭಕ್ತರಿದ್ದಾರೆ. ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಂತೆ ಇರುವ ಈ ಪ್ರಸಿದ್ದ ಗಣೇಶ ದೇಗುಲ ಸುಮಾರು 4ನೇ ಶತಮಾನದಲ್ಲಿ ಸ್ಥಾಪಿತವಾಗಿದೆ ಎನ್ನಲಾಗುತ್ತದೆ. ಇಡಗುಂಜಿ ಗಣಪತಿಗೆ ಬಾಲ ಗಣಪತಿ ಎನ್ನುವ ಹೆಸರೂ ಇದೆ. ಗೋಕರ್ಣ ಹೊರತುಪಡಿ ದ್ವಿಭುಜ ಹೊಂದಿದ್ದು, ನಿಂತಿರುವ ಭಂಗಿಯಲ್ಲಿ ಇರುವುದು ಇಡಗುಂಜಿ ಗಣೇಶನ ವಿಶೇಷ. ಭಕ್ತರು ಬಯಸಿದ್ದನ್ನು ಬಾಲಗಣೇಶ ಈಡೇರಿಸುತ್ತಾನೆ ಎನ್ನುವುದು ಲಕ್ಷಾಂತರ ಭಕ್ತರ ನಂಬಿಕೆ.

ಕೋಲಾರದಲ್ಲಿ ವಿಶ್ವದ ಎತ್ತರದ ಪೂಜಾ ಮೂರ್ತಿ..!

ವಿಶ್ವದ ಅತಿ ಎತ್ತರದ ಗಣೇಶನ ಪೂಜಾ ಮೂರ್ತಿ ಎಂಬ ಖ್ಯಾತಿ ಕೋಲಾರದ ಕುರುಡುಮಲೆ ವಿನಾಯಕನ ದೇಗುಲದ ವಿಶೇಷ. ತ್ರಿಮೂರ್ತಿಗಳಿಂದ ಸ್ತಾಪಿಸಲ್ಪಟ್ಟಿರುವ ಸಾಲಿಗ್ರಾಮ ಶಿಲಾ ಮೂರ್ತಿಯ ಗಣೇಶನನ್ನು ಕೌಂಡಿನ್ಯ ಋಷಿಗಳು ಇಂದಿಗೂ ಪೂಜಿಸುತ್ತಲೇ ಇದ್ದಾರೆ ಎನ್ನುವುದು ಇಲ್ಲಿನ ವಿಶೇಷ. ಸುಮಾರು 400 ವರ್ಷಗಳ ಹಿಂದೆ, ವಿಜಯನಗರ ಸಾಮ್ರಾಟ ಶ್ರೀ ಕೃಷ್ಣದೇವರಾಯರು ನಿರ್ಮಿಸಿದ ದೇವಾಲಯವಿದು. ಏಕಶಿಲಾ ಸಾಲಿಗ್ರಾಮದಿಂದ 14 ಅಡಿ ಎತ್ತರದ ಮೂರ್ತಿಯನ್ನು ಪ್ರತಿಸ್ಠಾಪಿಸಲಾಗಿದೆ. ಲಂಕಾಧಿಪತಿ ರಾವಣನ ಸಂಹಾರಕ್ಕೂ ರಾಮ, ಲಕ್ಷ್ಮಣರು, ಕುರುಕ್ಷೇತ್ರ ಯುದ್ಧಕ್ಕೂ ಮುನ್ನ ಪಂಚ ಪಾಂಡವರು ಪೂಜೆ ಸಲ್ಲಿಸಿದ್ದರು ಎನ್ನುವ ಪ್ರತೀತಿ ಇದೆ.

Read this also;

ಹಾಳು ಹಂಪಿಯಲ್ಲಿವೆ ವಿಶೇಷ ಗಣೇಶ ಮೂರ್ತಿ..!

ಶ್ರೀಕೃಷ್ಣದೇವರಾಯ ಆಳಿದ ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು ರತ್ನಗಳನ್ನು ಬೀದಿಯಲ್ಲಿ ಮಾರಾಟ ಮಾಡುತ್ತಿದ್ದರು ಎನ್ನುವುದು ಇತಿಹಾಸ ಹೇಳುತ್ತೆ. ಆದರೆ ಈಗ ಹಾಳುಬಿದ್ದ ಹಂಪಿಯಲ್ಲಿ ಎರಡು ವಿಶೇಷ ಗಣೇಶ ಮೂರ್ತಿಗಳಿವೆ. ವಿಶ್ವವಿಖ್ಯಾತ ಆಗಿರುವ ವಿಜಯನಗರ ಅರಸರ ರಾಜಧಾನಿ ಹಂಪಿಯಲ್ಲಿ ಗಣೇಶನ 2 ಮೂರ್ತಿಗಳಿವೆ. ಹೇಮಕೂಟದಲ್ಲಿ ಸಾಸಿವೆಕಾಳು ಗಣಪತಿ. ಮತ್ತೊಂದು ಕಡಲೆ ಕಾಳು ಗಣಪತಿ. ಸಾಸಿವೆಕಾಳು ಗಣಪತಿ 8 ಅಡಿ ಎತ್ತರವಿದ್ದು, ಪದ್ಮಾಸನ ಭಂಗಿಯಲ್ಲಿದೆ. ಕಡಲೆಕಾಳು ಗಣೇಶ ವಿಗ್ರಹ 15 ಅಡಿ ಎತ್ತರವಿದ್ದು, ಗಣಪನ ಹೊಟ್ಟೆ ಕಡಲೆಕಾಯಿ ಆಕೃತಿಯಲ್ಲಿದೆ. 1506 ವಿಜಯನಗರ ಅರಸರಾದ ಸಾಳ್ವ ವಂಶದ ಇಮ್ಮಡಿ ನರಸಿಂಗರಾಯರ ಅವಧಿಯಲ್ಲಿ ಸಾಸಿವೆ ಹಾಗು ಕಡಲೆಕಾಯಿ ವ್ಯಾಪಾರಿಗಳು ನಿರ್ಮಾಣ ಮಾಡಿಸಿದ್ರು ಎನ್ನುವ ಐಹಿತ್ಯವಿದೆ. ತಾಳಿಕೋಟೆ ಕದನದಲ್ಲಿ ಈ ಮೂರ್ತಿಗಳನ್ನು ಭಗ್ನಗೊಳಿಸಿದ ಕಾರಣಕ್ಕೆ ಪೂಜೆ ಇಲ್ಲದೆಇತಿಹಾಸ ಪುಟ ಸೇರಿವೆ.

ಕೆಂಪೇಗೌಡರ ಆಳ್ವಿಯಲ್ಲಿ ಗಣೇಶ ಮೂರ್ತಿ ಸ್ಥಾಪನೆ..!

ಬೆಂಗಳೂರಿನಲ್ಲಿ ಪ್ರಸಿದ್ಧ ದೊಡ್ಡ ಗಣಪತಿ ದೇವಸ್ಥಾನವಿದೆ. 500 ವರ್ಷಗಳ ಇತಿಹಾಸ ಇರುವ ಈ ದೇಗುಲ 1536ನೇ ಇಸವಿಯಲ್ಲಿ ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾಗಿದೆ. ಬ್ರಹ್ಮಾಂಡ ಕಲ್ಲಿಗೆ ವಿಘ್ನೇಶ್ವರನ ರೂಪ ಕೊಡಲಾಯ್ತು ಎಂಬ ಮಾತಿದೆ. ಈ ಗಣೇಶನ ವಿಶೇಷತೆ ಏನೆಂದರೆ ಇಲ್ಲಿನ ಗರ್ಭಗುಡಿಯ ವಿಗ್ರಹವನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ. 11 ಅಡಿ ಉದ್ದ, 16 ಅಡಿ ಅಗಲದ ವಿಘ್ನೇಶ್ವರನ ವಿಗ್ರಹ ಇದಾಗಿದ್ದು, ಭಕ್ತರ ನೆಚ್ಚಿನ ತಾಣ ಇದಾಗಿದೆ. ಡಾ ರಾಜ್​ ಕುಮಾರ್​ ನಟನೆಯ ಎರಡು ಕನಸು, ಬಾಲಿವುಡ್​ ಬಿಗ್​ ಬಿ ಅಮಿತಾಬ್ ಬಚ್ಚನ್ ಅಭಿನಯದ ಕೂಲಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳ ಚಿತ್ರೀಕರಣ ಕೂಡ ನಡೆದಿದೆ. ಬೆಣ್ಣೆ ಅಲಂಕಾರಕ್ಕೆ ಗಣೇಶ ಕರಗುತ್ತಾನೆ ಎನ್ನುವುದು ಭಕ್ತರ ಮಾತು.

Related Posts

Don't Miss it !