ಸ್ವಾತಂತ್ರ್ಯ ಹೋರಾಟ; ಕರುನಾಡಲ್ಲೂ ನಡೆದಿವೆ ಹೆಮ್ಮೆಯ ಸಂಗತಿ..!

ಭಾರತದಿಂದ ಬ್ರಿಟೀಷರನ್ನು ಓಡಿಸಿ ಇಂದಿದೆ 75 ವರ್ಷ ಪೂರ್ಣವಾಗಿದೆ. ಭಾರತದಲ್ಲಿ ವ್ಯಾಪಾರ ಮಾಡಲು ಭಾರತಕ್ಕೆ ಬಂದಿದ್ದ ಆಂಗ್ಲನ್ನರು ಕಾಲ ಕ್ರಮೇಣ ಭಾರತದ ಸಣ್ಣ ಸಣ್ಣ ರಾಜ್ಯಗಳ ಮೇಲೆ ಹಿಡಿತ ಸಾಧಿಸಲು ಶುರು ಮಾಡಿದ್ದರು. ಬ್ರಿಟೀಷರು ಬಂದ ಬಳಿಕ ಸಣ್ಣ ಸಣ್ಣ ರಾಜ್ಯಗಳ ಜನರೆಲ್ಲಾ ಸೇರಿಕೊಂಡು ಬ್ರಿಟೀಷರ ದಬ್ಬಾಳಿಕೆ ವಿರುದ್ಧ ನಡೆಸಿದ ಹೋರಾಟ ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟವಾಗಿ ರೂಪುಗೊಂಡಿತ್ತು. ಇದರಲ್ಲಿ ​ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಹೋರಾಟ ಮಾಡಿದ ಫಲವೇ ಇಂದಿನ ಸ್ವಾತಂತ್ರ್ಯೋತ್ಸವ ಸಂಭ್ರಮ. ಈ ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪಾಲು ಗಣನೀಯ ಪ್ರಮಾಣದಲ್ಲಿ ಇದೆ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಮಂಡ್ಯದಲ್ಲೇ ಮೊದಲು ಧ್ವಜಾರೋಹಣ ನಡೆದಿದ್ದು..!

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಶಿವಪುರ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿಯುವ ಹೆಸರು. 1938ರ ಏಪ್ರಿಲ್‌ 10, 11, 12 ರಂದು ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಧ್ವಜ ಸತ್ಯಾಗ್ರಹ ನಡೆದಿತ್ತು. ಮೈಸೂರು ಕಾಂಗ್ರೆಸ್​ ಅಸ್ತಿತ್ವಕ್ಕೆ ಬಂದ ಬಳಿಕ ಶಿವಪುರದಲ್ಲಿ ಮೊದಲ ಸಮಾವೇಶ ನಡೆದಿತ್ತು. ಶಿಂಷಾ ನದಿಯ ದಂಡೆಯ ತಿರುಮಲೇಗೌಡರ ಜಮೀನಲ್ಲಿ ಸಮಾವೇಶಕ್ಕೆ ಸಿದ್ಧತೆ ನಡೆದಿತ್ತು. ತ್ರಿವರ್ಣ ಧ್ವಜ ಹಾರಿಸುವುದರಿಂದ ಮೈಸೂರು ಸಂಸ್ಥಾನದ ಅಸ್ತಿತ್ವಕ್ಕೆ ಧಕ್ಕೆ ಬರುವ ಭೀತಿಯಿಂದ ಅನುಮತಿ ನಿರಾಕರಿಸಲಾಗಿತ್ತು. ಆದರೂ ಛಲ ಬಿಡದ ಹೋರಾಟಗಾರರು ತ್ರಿವರ್ಣ ಧ್ವಜ ಹಾರಿಸಿದ್ದರು. ಸುಮಾರು 10 ಸಾವಿರ ರೈತರು ಭಾಗವಹಿಸಿ ಬ್ರಿಟೀಷರು ಹೇರಿಕೆ ಮಾಡಿದ್ದ ತೆರಿಗೆಯನ್ನು ವಿರೋಧಿಸುವ ನಿರ್ಧಾರ ಕೈಗೊಳ್ಳಲಾಯ್ತು.

ಇದನ್ನೂ ಓದಿ

ಕರ್ನಾಟಕದ ಜಲಿಯನ್​ ವಾಲಾಭಾಗ್ ವಿಧುರಾಶ್ವತ್ಥ..!


ಪಂಜಾಬ್​ನ ಅಮೃತಸರದಲ್ಲಿ ಜಲಿಯನ್​ ವಾಲಾಭಾಗ್​ ಘಟನೆ 1919ರಲ್ಲಿ ನಡೆದಿತ್ತು. ಸಿಖ್ಖರ ಪವಿತ್ರ ದಿನವಾದ ಬೈಸಾಖಿಯಂದು ಜನರೆಲ್ಲಾ ಒಟ್ಟಿಗೆ ಸೇರಿದ್ದರು. ಇದನ್ನೇ ಬಳಸಿಕೊಂಡ ಬ್ರಿಟೀಷರು ಗುಂಡಿನ ಮಳೆ ಸುರಿಸಿ ಹತ್ಯಾಕಾಂಡ ನಡೆಸಿದ್ದರು. ಅದೆಷ್ಟೋ ಮಂದಿ ಗುಂಡೇಟು ಭಯದಲ್ಲಿ ಪಕ್ಕದಲ್ಲಿದ್ದ ಬಾವಿಗೆ ಬಿದು ಸತ್ತರು ಎನ್ನುವ ಮಾಹಿತಿ ನಮ್ಮೆಲ್ಲರಿಗೂ ಗೊತ್ತು. ಇದೀ ರೀತಿಯ ಘಟನೆ ನಮ್ಮ ಕರ್ನಾಟಕದಲ್ಲೂ ನಡೆಸಿದ್ದಾರೆ ನರರಾಕ್ಷಸ ಆಂಗ್ಲರು. ಅದವೇ ವಿದುರಾಶ್ವತ್ಥ. ಚಿಕ್ಕಬಳ್ಳಾಪು ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿಧುರಾಶ್ವತ್ಥ ಗ್ರಾಮ. ಮಂಡ್ಯದ ಶಿವಪುರದಲ್ಲಿ ನಡೆದಿದ್ದ ಧ್ವಜ ಸತ್ಯಗ್ರಹದ ಕೋಪ ಬ್ರಿಟೀಷರಲ್ಲಿ ಮನೆ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ವಿದುರಾಶ್ವತ್ಥದಲ್ಲಿ 1938 ಏಪ್ರಿಲ್ 25ರಂದು ಸಭೆ ಸೇರಲಾಗಿತ್ತು. ಈ ವೇಳೆ ಏಕಾಏಕಿ ಗುಂಡಿನ ಮಳೆಗರೆದಿದ್ದ ಆಂಗ್ಲರು 30 ಕ್ಕೂ ಹೆಚ್ಚು ಮಂದಿ ಹೋರಾಟಗಾರರ ಜೀವ ತೆಗೆದಿದ್ದರು. ಇಂದಿಗೂ ಅವರ ಸಮಾಧಿ ಸ್ಥಳದಲ್ಲಿ ವೀರಗಲ್ಲು ಸ್ಥಾಪನೆ ಮಾಡಲಾಗಿದೆ.

ಇದನ್ನೂ ಓದಿ:

ಶಿವಮೊಗ್ಗದ ಈಸೂರು ಪ್ರಥಮ ಸ್ವಾತಂತ್ರ್ಯ ಗ್ರಾಮ..!

ಭಾರತದಲ್ಲಿ ಮೊದಲು ಸ್ವಾತಂತ್ರ್ಯ ಘೋಷಣೆ ಮಾಡಿಕೊಂಡಿದ್ದು, ನಮ್ಮ ಕರ್ನಾಟಕದ ಈಸೂರು ಗ್ರಾಮ. ಶಿವಮೊಗ್ಗ ಜಿಲ್ಲೆ ಶಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು 1942ರ ಸೆಪ್ಟೆಂಬರ್​ 27ರಂದೇ ನಮ್ಮದು ಸ್ವತಂತ್ರ ಗ್ರಾಮ ಎಂದು ಘೋಷಣೆ ಮಾಡಿಕೊಂಡರು. ಮಹಾತ್ಮ ಗಾಂಧಿ ಕರ (ಕಂದಾಯ) ನಿರಾಕರಣೆಯ ಹೋರಾಟಕ್ಕೆ ಕರೆ ಕೊಟ್ಟಿದ್ದರು. ಈ ಹೋರಾಟವನ್ನು ಕಠಿಣವಾಗಿ ಪಾಲಿಸಿದ್ದು ಈಸೂರಿನ ಜನ. ಬ್ರಿಟೀಷರ ಬಾವುಟ ತೆಗೆದು ಊರಿನ ದೇವಸ್ಥಾನದ ಮೇಲೆ ಪ್ರತ್ಯೇಕ ಧ್ವಜವನ್ನು ಹಾರಿಸಿ ಸ್ವತಂತ್ರ್ಯ ಘೋಷಣೆ ಮಾಡಿಕೊಂಡಿದ್ದರು. ಆಂಗ್ಲರಿಗೆ ಕರವನ್ನು ಕೊಡಲು ನಿರಾಕರಿಸಿದರು. ಕರ ಕೇಳಲು ಬಂದಿದ್ದ ಅಧಿಕಾರಿಗಳನ್ನು ಕೊಂದು ಹಾಕಿದ್ರು. ವಿಷಯ ತಿಳಿದ ಬ್ರಿಟೀಷ್​ ಆಡಳಿ ಹೆಚ್ಚಿನ ಸೇನೆಯೊಂದಿಗೆ ಬಂದು ಊರಿಗೇ ಊರೇ ಕೊಳ್ಳೆ ಹೊಡೆದರು. ಕೈಗೆ ಸಿಕ್ಕ 50 ಜನರ ಮೇಲೆ ಕೇಸ್​ ಹಾಕಲಾಯ್ತು. ಅಂದಿನ ಮೈಸೂರು ಹೈಕೋರ್ಟ್​ ಹಲವಾರು ಜನರಿಗೆ ಮರಣದಂಡನೆ ಹಾಗೂ ಉಳಿದ ಮಹಿಳೆರಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿತ್ತು.

ಇಷ್ಟು ಮಾತ್ರವಲ್ಲದೆ ಉತ್ತರ ಕರ್ನಾಟಕದಲ್ಲಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ. ರಾಣಿ ಅಬ್ಬಕ್ಕ, ಮುಧೋಳದ ಹಲಗಲಿ ಬೇಡರು, ಸುರಪುರದ ವೆಂಕಟಪ್ಪ ನಾಯಕ ಮೈಸೂರು ಹುಲಿ ಟಿಪ್ಪು ಸುಲ್ತಾನ್, ಸೇರಿದಂತೆ ಲೆಕ್ಕವಿಲ್ಲದಷ್ಟು ಕನ್ನಡಿಗರು ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ ತಮ್ಮ ಪ್ರಾಣವನ್ನೇ ದೇಶಕ್ಕಾಗಿ ಅರ್ಪಿಸಿದ್ದಾರೆ. ಆದರೆ ಮೇಲಿನ ಮೂರು ಘಟನೆಗಳು ಇತಿಹಾಸ ಪುಟಗಳಲ್ಲಿ ರಕ್ತಚರಿತ್ರೆಯಾಗಿ ಉಳಿದುಕೊಂಡಿವೆ. ಸ್ವಾತಂತ್ರ್ಯ ಭಾರತದ ಪರಿಕಲ್ಪನೆಯೂ ಇಲ್ಲದೆ ಇರುವಾಗ ಆಂಗ್ಲರ ಹಿಡಿತದಿಂದ ಬಿಡಿಸಿಕೊಳ್ಳಲು ನಡೆಸಿರುವ ಪ್ರಯತ್ನ ಅಪ್ರತಿಮ. 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಕೆಚ್ಚೆದೆಯ ಕನ್ನಡಿಗರ ಪಾಲು ಅಧಿಕ ಎಂದು ಹೆಮ್ಮೆಯಿಂದ ಹೇಳಬಹುದು.

Related Posts

Don't Miss it !