ಕನ್ನಡಮ್ಮನ ಜನ್ಮದಿನ.. ಕರ್ನಾಟಕದ ಇತಿಹಾಸ ತಿಳಿದುಕೊಳ್ಬೇಕಾ..? ಕರ್ನಾಟಕ ಬಂದಿದ್ದೆಲ್ಲಿಂದ..?

.
ಎಲ್ಲರಿಗೂ 67ನೇ ವರ್ಷದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಇಂದು ನಮ್ಮ ಕರ್ನಾಟಕ ಜನ್ಮ ತಾಳಿದ ದಿನ ಅಂದ್ರೆ ನಮ್ಮ ಕನ್ನಡಾಂಬೆಯ ಹುಟ್ಟುಹಬ್ಬ. 1947ರಲ್ಲಿ 560ಕ್ಕೂ ಹೆಚ್ಚು ಸಂಸ್ಥಾನಗಳು ಒಟ್ಟುಗೂಡಿ ಭಾರತದ ಉದಯ ಆಗಿತ್ತು. ಆಗ ನಮ್ಮ ಮೈಸೂರು ಸಂಸ್ಥಾನ ಕೂಡ ಭಾರತ ಒಕ್ಕೂಟಕ್ಕೆ ಸೇರ್ಪಡೆ ಆಗಿತ್ತು. ಆ ಸಮಯದಲ್ಲಿ ಕಲ್ಯಾಣ​ ಕರ್ನಾಟಕ, ಕಿತ್ತೂರು ಕರ್ನಾಟಕ, ಮದ್ರಾಸು ಕರ್ನಾಟಕ ಸೇರಿದಂತೆ ಕರ್ನಾಟಕದ ಇತರೆ ಭಾಗಗಳು ಮೈಸೂರು ರಾಜ್ಯದ ಭಾಗ ಆಗಿರಲಿಲ್ಲ.

ನವೆಂಬರ್​ 01, 1956ರಲ್ಲಿ ರಾಜ್ಯಗಳನ್ನು ಭಾಷೆಗಳ ಆಧಾರದಲ್ಲಿ ವಿಮಗಡಣೆ ಮಾಡಲಾಯ್ತು. ಆಗ ಕರುನಾಡು ಸೃಷ್ಟಿಯಾಯ್ತು. ಆದರೂ ಮೈಸೂರು ರಾಜ್ಯ ಎಂದೇ ಕರೆಸಿಕೊಂಡಿತ್ತು. ಆದರೆ ಉತ್ತರ ಕರ್ನಾಟಕ ಭಾಗದ ಜನರು ಮೈಸೂರು ರಾಜ್ಯದ ಭಾಗವಾಗಲು ವಿರೋಧ ಮಾಡಿದ್ರು. ಹೀಗಾಗಿ 1973 ನವೆಂಬರ್​ 01ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯ್ತು. ಬಡವರು, ದೀನ ದಲಿತರ ಪರವಾಗಿ ಅಧಿಕಾರ ನಡೆಸಿದ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆ ಪಡೆದಿರುವ ದೇವರಾಜ ಅರಸರ ಕಾಲದಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಯ್ತು.

ಬ್ರಿಟೀಷರ ಆಳ್ವಿಕೆಯಲ್ಲೂ ಕನ್ನಡಿಗರು ಒಟ್ಟಾಗಿ ಇರಲಿಲ್ಲ. 1947ರಲ್ಲಿ ಭಾರತ ಒಕ್ಕೂಟ ವ್ಯವಸ್ಥೆ ಜಾರಿ ಆದಾಗಲೂ ಕರ್ನಾಟಕ ಒಂದು ರಾಜ್ಯ ಆಗಿರಲಿಲ್ಲ. ಒಂದು ಭಾಷೆಯ ಜನರು ಒಂದು ರಾಜ್ಯದಲ್ಲಿದ್ರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗುತ್ತೆ ಅನ್ನೋ ಕಾರಣಕ್ಕೆ ಅಂದಿನ ಕೇಂದ್ರ ಸರ್ಕಾರ, ಭಾಷೆ ಆಧಾರದಲ್ಲಿ ರಾಜ್ಯ ರಚನೆಗೆ ಒಪ್ಪಿರಲಿಲ್ಲ. ಆಲೂರು ವೆಂಕಟರಾಯ ಅವರ ನೇತೃತ್ವದಲ್ಲಿ ಕರ್ನಾಟಕ ಏಕೀಕರಣ ಹೋರಾಟ ಶುರುವಾಯ್ತು. ಎಸ್​ ನಿಜಲಿಂಗಪ್ಪ ಅವರ ನೇತೃತ್ವದಲ್ಲಿ ಏಕೀಕರಣ ಸಮಿತಿ ರಚನೆ ಮಾಡಲಾಯ್ತು. ಖ್ಯಾತ ಲೇಖಕರಾದ ಕುವೆಂಪು, ಅಂದಾನಪ್ಪ ದೊಡ್ಡ ಮೇಟಿ, ಮಂಗಳವೇದ, ಶ್ರೀನಿವಾಸ ರಾವ್​ ಸೇರಿದಂತೆ ಘಟಾನುಘಟಿ ನಾಯಕರು ಬೆಂಬಲ ನೀಡಿದ್ದರು. ಅದರ ಫಲವೇ ಈ ನಮ್ಮ ಕರ್ನಾಟಕ.

ಕರ್ನಾಟಕ ಅನ್ನೋ ಹೆಸರು ಎಲ್ಲಿಂದ ಬಂತು..? ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಯಾಕೆ ಅನ್ನೋದು ಸಾಕಷ್ಟು ಜನರ ಮನಸ್ಸಿನಲ್ಲಿ ಇರುವ ಗೊಂದಲ. ಇದಕ್ಕೆ ಉತ್ತರ ಇಲ್ಲಿದೆ. 3ನೇ ಶತಮಾನದಲ್ಲಿ ಮೌರ್ಯ ಸಾಮ್ರ್ಯಾಜ್ಯದ ಅಶೋಕ ಚಕ್ರವರ್ತಿ ಆಳ್ವಿಕೆ ಮಾಡುತ್ತಿದ್ದನು. ಆ ಬಳಿಕ ಕದಂಬರು ಕರ್ನಾಟಕವನ್ನು ಆಳಿದ ಮೊದಲ ಕನ್ನಡಿಗರು. ಮಯೂರ ಶರ್ಮ ಮೊದಲ ರಾಜ. ತಮಿಳುನಾಡಿನ ಪಲ್ಲವರಿಂದ ಅವಮಾನಕ್ಕೆ ಒಳಗಾದ ಮಯೂರ ಶರ್ಮ, ಬನವಾಸಿಯಲ್ಲಿ ರಾಜ್ಯ ರಚನೆ ಮಾಡಿದ. ಆ ನಂತರ ಗಂಗರು, ಚಾಲುಕ್ಯರು ಕರ್ನಾಕವನ್ನು ಆಳಿದರು. ಚಾಲುಕ್ಯರ ಪ್ರಮುಖ ದೊರೆ 2ನೇ ಪುಲಿಕೇಶಿಯು ಉತ್ತರಾಪಥೇಶ್ವರ ಎಂಬ ಬಿರುದು ಪಡೆದಿದ್ದ ಹರ್ಷವರ್ಧನನ್ನೇ ಸೊಲಿಸಿ ದಕ್ಷಿಣ ಫಥೇಶ್ವರ ಎನ್ನುವ ಬಿರುದು ಪಡೆದಿದ್ದನು. ಚಾಲುಕ್ಯರ ಇಮ್ಮಡಿ ಪುಲಿಕೇಶಿಯ ಸೇನೆಯನ್ನು ಕರ್ನಾಟಕ ಬಲ ಎಂದು ಚೀನಾದ ಪ್ರವಾಸಿಗ ಹ್ಯುಯೆನ್​​​ತ್ಸಾಂಗ್​​ ಅನ್ನು ಕರೆದಿದ್ದಾನೆ. ಕರ್ನಾಟಕ ಬಲಂ ಅಜೇಯಂ ಅನ್ನೋ ಮಾತು ಪ್ರಖ್ಯಾತಿ ಪಡೆದಿತ್ತು. ಅಂದ್ರೆ ಕರ್ನಾಟಕ ಸೇನೆಯನ್ನು ಸೋಲಿಸಲು ಸಾಧ್ಯವಿಲ್ಲ ಅಂತಾ.

ಕರ್ನಾಟಕದಲ್ಲಿ ಮೂರು ರೀತಿಯ ಭೂಪ್ರದೇಶ ಇದೆ. ಕರಾವಳಿ, ಮಲೆನಾಡು, ಬಯಲು ಸೀಮೆ. ಇನ್ನೂ ಕರ್ನಾಟಕದಲ್ಲಿ ಸಾಕಷ್ಟು ನದಿಗಳು ಹರಿಯುತ್ತಿದ್ದು, ಭೂಮಿ ಫಲವತ್ತಾಗಿದೆ. ವಾತಾವರಣ ಅತ್ಯಂತ ಶ್ರೇಷ್ಟಮಟ್ಟದಲ್ಲಿದೆ. ಇಲ್ಲಿ ಬೆಳೆಯುವ ಬೆಳೆಗಳಿಗೆ ವಿದೇಶದಲ್ಲೂ ಭಾರೀ ಬೇಡಿಕೆ ಇದೆ. ಆಹಾರ ಪಾದಾರ್ಥ, ಸಾಂಬಾರ್​ ಪದಾರ್ಥಗಳು, ಸಾಗರೋತ್ಪನ್ನಗಳಿಗೆ ವಿಶ್ವದಲ್ಲಿ ದೊಡ್ಡ ಮಾರುಕಟ್ಟೆಯೇ ಇದೆ. ಹಲವಾರು ರಾಜಮನೆತಗಳು ಆಳ್ವಿಕೆ ಮಾಡಿ ಬಿಟ್ಟು ಹೋಗಿರುವ ಸಮೃದ್ಧ ನಾಡು ನಮ್ಮ ಕರ್ನಾಟಕ. ಆದರೆ ಈಗಲೂ ಕಾಸರಗೋಡು ಸೇರಿದಂತೆ ನಮ್ಮ ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಮಾತನಾಡುವ ಜನರು ಬೇರೆ ಬೇರೆ ರಾಜ್ಯಗಳಲ್ಲಿ ಇದ್ದಾರೆ ಎನ್ನುವುದು ನೋವಿನ ಸಂಗತಿ.

Related Posts

Don't Miss it !