ಹೈಕೋರ್ಟ್​ ಜಸ್ಟೀಸ್​ಗೆ ಬೆದರಿಕೆ ಬಂದಿದ್ದು ಹೇಗೆ..? ಅಸಲಿ ಕಹಾನಿ ಬಿಚ್ಚಿಟ್ಟ ನ್ಯಾಯಮೂರ್ತಿ​..!!

ಉಳ್ಳವರು ಕಾನೂನು ಮೇಲೆ ನಿಯಂತ್ರಣ ಮಾಡಲು ಸದಾ ಕಾಲ ವಾಮ ಮಾರ್ಗವನ್ನು ಹುಡುಕುತ್ತಲೇ ಇರುತ್ತಾರೆ. ಆದರೆ ಕರ್ನಾಟಕ ಹೈಕೋರ್ಟ್​ ಜಸ್ಟೀಸ್​​​ ಹೆಚ್​.ಪಿ ಸಂದೇಶ್​ ಅವರಿಗೂ ಬೆದರಿಕೆ ಬಂದಿದೆ ಎನ್ನುವುದನ್ನು ಸ್ವತಃ ನ್ಯಾಯಮೂರ್ತಿಗಳೇ ಬಹಿರಂಗ ಮಾಡಿದ್ದರು. ಕೋಟಿ ಕೋಟಿ ಹಣ ಸಂಗ್ರಹ ಮಾಡಿರುವ ಹಿರಿಯ ಅಧಿಕಾರಿಯನ್ನು ಬಂಧನ ಮಾಡದೆ ಏನು ಮಾಡುತ್ತಿದ್ದೀರಿ..? ಎಂದು ಕೋರ್ಟ್​ ಪ್ರಶ್ನಿಸಿದ ಕೂಡಲೇ ಬೆಂಗಳೂರಿನ ಹಿಂದಿನ ಡಿಸಿ ಮಂಜುನಾಥ್​ ಅವರನ್ನು ಬಂಧನ ಮಾಡಲಾಗಿತ್ತು. ಈ ವಿಚಾರದಲ್ಲಿ ಎಸಿಬಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್​, ಇಲ್ಲೀವರೆಗೂ ದಾಖಲಾಗಿರುವ ಪ್ರಕರಣಗಳು ಎಷ್ಟು..? ಎಷ್ಟು ಕೇಸ್​ಗಳಲ್ಲಿ ಬಿ ರಿಪೋರ್ಟ್​ ಹಾಕಿದ್ದೀರಿ..? ಅನ್ನೋ ಬಗ್ಗೆ ಕಂಪ್ಲೀಟ್​ ರಿಪೋರ್ಟ್​ ಕೇಳಿದ್ದರು. ಆ ಬಳಿಕ ಹೈಕೋರ್ಟ್​ ಜಡ್ಜ್​ ಹೆಚ್​. ಪಿ ಸಂದೇಶ್​ ಅವರಿಗೆ ಬೆದರಿಕೆ ಸಂದೇಶ ಬಂದಿತ್ತು ಎಂದು ಬಹಿರಂಗ ಮಾಡಿದ್ದರು. ಇವತ್ತು ಮತ್ತೆ ಹೈಕೋರ್ಟ್​ ಗರಂ ಆಗಿದೆ. ಬೆದರಿಕೆ ಹಾಕಿದ ವಿಚಾರವನ್ನು ಆದೇಶದಲ್ಲೂ ಬರೆಸಲಾಗಿದೆ

ಉಪತಹಶೀಲ್ದಾರ್​ ಜಾಮೀನು ಅರ್ಜಿ ವಿಚಾರಣೆ ವೇಳೆ ಚಾಟಿ..!

ಬೆಂಗಳೂರು ಡಿಸಿ ಕಚೇರಿಯಲ್ಲಿ ಜಮೀನು ವ್ಯಾಜ್ಯ ಬಗೆಹರಿಸುವ ಉದ್ದೇಶದಿಂದ 5 ಲಕ್ಷ ಲಂಚ ಸ್ವೀಕರಿಸುವಾಗ ಉಪ ತಹಶೀಲ್ದಾರ್​ ಮಹೇಶ್ ಬಂಧನ ಮಾಡಿದ ಐಎಎಸ್​ ಅಧಿಕಾರಿ ಮಂಜುನಾಥ್​ ಹೆಸರು ಪ್ರಸ್ತಾಪವಾಗಿತ್ತು. ಮಹೇಶ್​ ಜಾಮೀನು ಅರ್ಜಿ ವಿಚಾರಣೆ ವೇಳೆ ಎಸಿಬಿ ಕಾರ್ಯವೈಖರಿ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದ ಜಸ್ಟೀಸ್​ ಹೆಚ್​.ಪಿ ಸಂದೇಶ್​, ಅವರ ಪೀಠಕ್ಕೆ ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್, ಎಸಿಬಿ ಎಡಿಜಿಪಿ ಸೀಮಂತ್​ ಕುಮಾರ್​ ಅವರ ಪ್ರಕರಣದ ಬಗ್ಗೆ ವರದಿ ಸಲ್ಲಿಸಲಾಯ್ತು. ಈ ವೇಳೆ ಸೀಮಂತ್ ಕುಮಾರ್ ಪರ ವಕೀಲ ಅಶೋಕ್ ಹಾರನಹಳ್ಳಿ ಹಾಜರಾಗಿದ್ದರು. ಈ ವೇಳೆ ವಿಚಾರಣೆಗೆ ಅವಕಾಶ ಕೊಡುವುದಿಲ್ಲ, ಕೋರ್ಟ್​ಗೆ ಬೆದರಿಕೆ ಹಾಕುವ ಕೆಲಸ ಆಗುತ್ತಿದೆ. ಅದನ್ನ ಎಲ್ಲಿಗೆ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸಿದ್ದೇನೆ. ನನ್ನ ಪಕ್ಕದಲ್ಲಿ ಕುಳಿತಿದ್ದ ಜಡ್ಜ್​ ಒಬ್ಬರ ಮೂಲಕ ನನಗೆ ಬೆದರಿಕೆ ಸಂದೇಶ ತಲುಪಿಸಲಾಯ್ತು. ದೆಹಲಿಯಿಂದ ಕರೆ ಬಂದಿತ್ತು. ನಿಮ್ಮ ಬಗ್ಗೆ ಮಾಹಿತಿ ಕೇಳಿದ್ರು ಎನ್ನುವ ಮಾತನ್ನು ಹೇಳಿದ್ರು. ನಿಮ್ಮ ಯಾವುದೇ ಅರ್ಜಿ ಇಲ್ಲದೆ ನಿಮ್ಮ ವಾದ ಆಲಿಸಲು ಸಾಧ್ಯವಿಲ್ಲ. ಇಲ್ಲಿ ನನ್ನಿಂದ ತಪ್ಪು ಮಾಡಿಸಲು ಪ್ರಯತ್ನ ಮಾಡಬೇಡಿ ಎಂದು ತಿಳಿಸಿದ ಬಳಿಕ ಆದೇಶದಲ್ಲೂ ಬೆದರಿಕೆ ವಿಚಾರವನ್ನ ಬರೆಸಿದ್ದಾರೆ.

ಎಸಿಬಿ ನೇಮಕ ಮಾಡುವ ಬಗ್ಗೆ ಸರ್ಕಾರಕ್ಕೆ ಖಡಕ್ ನಿರ್ದೇಶನ..!

ಸಿಜೆ ನಿವೃತ್ತಿ ಕಾರ್ಯಕ್ರಮದಲ್ಲಿ ಹಾಲಿ ನ್ಯಾಯಮೂರ್ತಿ ಒಬ್ಬರು ಈ ರೀತಿ ಹೇಳಿದ್ದಾರೆ ‘ಉತ್ತರ ಭಾರತ ಮೂಲದ ಎಡಿಜಿಪಿ ತುಂಬಾ ಪ್ರಭಾವಿ ಆಗಿದ್ದಾರೆ. ಇದಕ್ಕೂ ಮೊದಲು ಇದೇ ಕೇಸ್​ನಲ್ಲಿ ನ್ಯಾಯಮೂರ್ತಿಗಳ ವರ್ಗಾವಣೆ ಆಗಿದೆ’ ಎಂದಿದ್ದಾರಂತೆ. ಯಾವುದಕ್ಕೂ ಜಗ್ಗದ ಹೈಕೋರ್ಟ್​ ನ್ಯಾಯಮೂರ್ತಿ ನ್ಯಾ.ಹೆಚ್.ಪಿ.ಸಂದೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆಲವೊಂದು ​ ನಿರ್ದೇಶನ ನೀಡಿದ್ದಾರೆ. ಎಸಿಬಿಗೆ ಕಳಂಕಿತ ಅಧಿಕಾರಿ ನಿಯೋಜನೆ ಮಾಡಬೇಡಿ, ಎಸಿಬಿ ಭ್ರಷ್ಟಾಚಾರ ನಿಗ್ರಹಿಸುವ ಸಂಸ್ಥೆ ಆಗಿದೆ. ನೇಮಕ ಮಾಡುವಾಗ ಅಧಿಕಾರಿಯ ಸರ್ವೀಸ್ ರೆಕಾರ್ಡ್ ಗಮನಿಸಿ ನಿಯೋಜನೆ ಮಾಡಿ. ಎಸಿಬಿಗೆ ಅಧಿಕಾರಿಗಳ ನಿಯೋಜನೆ ಮಾಡುವಾಗ ಯಾವುದೇ ಪ್ರಭಾವಕ್ಕೆ ಒಳಗಾಗಬೇಡಿ. ಎಸಿಬಿ, ಲೋಕಾಯುಕ್ತದಲ್ಲಿ ಅಧಿಕಾರಿ ಅಥವಾ ಕುಟುಂಬಸ್ಥರು ಹಾಗೂ ಸಂಬಂಧಿಕರ ಕೇಸ್​ ಕೂಡ ಇರಬಾರದು ಅಂತಹ ಅಧಿಕಾರಿಯನ್ನು ನೇಮಕ ಮಾಡಿ ಖಡಕ್​ ಆಗಿ ಸೂಚಿಸಿದ್ದಾರೆ.

ಕಳ್ಳನಿಗೆ ಒಂದು ಪಿಳ್ಳೆ ನೆವ..! ಸುಪ್ರೀಂ ಬಾಗಿಲುತಟ್ಟಿದ ಅಧಿಕಾರಿ..!

ಹೈಕೋರ್ಟ್​ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರು ಎಸಿಬಿ ಇಲ್ಲೀವರೆಗೂ ದಾಳಿ ಮಾಡಿರುವ ಕೇಸ್​ಗಳು ಹಾಗೂ ಬಿ ರಿಪೋರ್ಟ್​ ಹಾಕಿರುವ ವಿಚಾರದಲ್ಲಿ ಗರಂ ಆಗಿದ್ದ ವಿಚಾರ ಮಾಧ್ಯಮಗಳಲ್ಲಿ ಬಂದಿತ್ತು. ಅದನ್ನೇ ಬಂಡವಾಳ ಮಾಡಿಕೊಂಡಿರುವ ಎಸಿಬಿ ಎಡಿಜಿಪಿ ಸೀಮಂತ್​ ಕುಮಾರ್​, ಸುಪ್ರೀಂಕೋರ್ಟ್​ಗೆ ಅರ್ಜಿ ಹಾಕಿದ್ದಾರೆ. ಹೈಕೋರ್ಟ್​ ಜಡ್ಜ್​ ಹೆಚ್​.ಪಿ ಸಂದೇಶ್​ ಅವರ ವಿರುದ್ಧ ದೂರಲಾಗಿದೆ. ಈ ಅರ್ಜಿ ವಿಚಾರಣೆ ಮಂಗಳವಾರ ವಿಚಾರಣೆಗೆ ಬರಲಿದೆ. ನ್ಯಾಯಮೂರ್ತಿ ಸಂದೇಶ್​ ಕೂಡ ಸೀಮಂತ್​ ಕುಮಾರ್​ ಪರ ವಕೀಲರಾದ ಅಶೋಕ್​ ಹಾರನಹಳ್ಳಿ ಅವರಿಗೆ ಇದನ್ನೇ ಹೇಳಿದ್ದು, ಸುಪ್ರೀಂಕೋರ್ಟ್​ ಮುಂದೆ Special Leave Petition (SLP) ವಿಚಾರಣೆಗೆ ಬರಲಿದ್ದು, ಸುಪ್ರೀಂಕೋರ್ಟ್​ ತೀರ್ಪನ್ನು ನೋಡಿಕೊಂಡು ಮುಂದಿನ ನಿರ್ಧಾರ ಎಂದಿದ್ದಾರೆ. ಲೋಕಾಯುಕ್ತವನ್ನು ಧ್ವಂಸ ಮಾಡಿ ಆಂಟಿ ಕರೆಪ್ಷನ್​ ಬ್ಯೂರೋ (ACB) ಸ್ಥಾಪನೆ ಮಾಡಿದ ಸರ್ಕಾರದ ನಿರ್ಧಾರ ಸಾರ್ಥಕವಾದಂತಾಗಿದೆ.

Related Posts

Don't Miss it !