ತ್ರಿಪುರದಲ್ಲಿ ಬಿಜೆಪಿ CM ದಿಢೀರ್ ಚೇಂಜ್​..! ರಾಜ್ಯದಲ್ಲೂ ಮಹತ್ವದ ಬೆಳವಣಿಗೆ..

ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಷಾ ಟೀಂ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಳಿಕ ಸಾಕಷ್ಟು ಬದಲಾವಣೆ ತರಲಾಗಿದೆ. ಸಾಕಷ್ಟು ಅಚ್ಚರಿಯ ರಾಜಕೀಯ ಬೆಳವಣಿಗೆ ಮಾಡೋದ್ರಲ್ಲೂ ಈ ಇಬ್ಬರು ನಾಯಕರು ನಿಸ್ಸೀಮರು ಎನ್ನುವುದನ್ನು ಯಾರೇ ಆಗಲಿ ಒಪ್ಪಿಕೊಳ್ಳಬೇಕು. ಯಾಕಂದ್ರೆ ಚುನಾವಣೆಗಳಲ್ಲಿ ಸೋಲುತ್ತೇವೆ ಎನ್ನುವುದು ಅರಿವಿಗೆ ಬಂದರೆ ಗೆಲ್ಲುವುದಕ್ಕೆ ಬೇಕಾದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಸಚಿವ ಸಂಪುಟವನ್ನೇ ಬರ್ಕಾಸ್ತ್ ಮಾಡಿ ಹೊಸ ಮುಖ್ಯಮಂತ್ರಿಯನ್ನೇ ಆಯ್ಕೆ ಮಾಡ್ತಾರೆ. ಸಾಕಷ್ಟು ರಾಜ್ಯಗಳಲ್ಲಿ ಈ ಯೋಜನೆ ಸಕ್ಸಸ್​ ಆದ ಬಳಿಕ ಇದೀಗ ತ್ರಿಪುರದಲ್ಲೂ ಜಾರಿ ಮಾಡಿದ್ದಾರೆ.

ಇಂದು ನೂತನ ಸಿಎಂ ಆಗಿ ಮಾಣಿಕ್​ ಸಹಾ ಪದಗ್ರಹಣ..!

ತ್ರಿಪುರ ಸಿಎಂ ಆಗಿದ್ದ ಬಿಪ್​ಲಾಬ್​ ಕುಮಾರ್​ ದೇಬ್​ ಏಕಾಏಕಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ರು. ಪಕ್ಷ ರಾಜೀನಾಮೆ ನೀಡುವುದಕ್ಕೆ ಸೂಚನೆ ಕೊಟ್ಟಿದೆ. ಹಾಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ಪಕ್ಷ ಸಂಘಟನೆ ನನ್ನನ್ನು ನಾನು ತೊಡಗಿಸಿಕೊಳ್ತೇನೆ ಎಂದಷ್ಟೇ ಹೇಳಿದ್ದಾರೆ. ರಾಜೀನಾಮೆ ನೀಡುವ ಮೊದಲ ಎರಡು ದಿನಗಳ ಹಿಂದೆ ಅಮಿತ್​ ಷಾ ಅವರನ್ನು ಭೇಟಿಯಾಗಿದ್ದರು. ಬಿಪ್​ಲಾಬ್​ ಕುಮಾರ್​ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಮಾಣಿಕ್​ ಸಹಾ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಯ್ತು. ಇಂದು ಭಾನುವಾರ ಬೆಳಗ್ಗೆ 7 ಗಂಟೆಗೆ ಮುಖ್ಯಮಂತ್ರಿಯಾಇ ಪ್ರಮಾಣ ವಚನ ಸ್ವೀಕಾರ ಮಾಡಲಾಗುತ್ತೆ ಎಂದು ಘೋಷಣೆಯನ್ನೂ ಮಾಡಲಾಯ್ತು. ರಾಜ್ಯಪಾಲರಿಗೆ ಈ ಬಗ್ಗೆ ಮನವಿಯನ್ನೂ ನೀಡಲಾಯ್ತು.

ರಾಜ್ಯದಲ್ಲೂ ಸದ್ದಿಲ್ಲದೆ ಸಾಗಿದೆ ಹೊಸ ಸರ್ಕಾರ ಕಸರತ್ತು..!

ಡೆಂಟಿಸ್ಟ್​ ಆಗಿರುವ ಮಾಣಿಕ್​ ಸಹಾ ಈಗ ರಾಜ್ಯಸಭಾ ಸದಸ್ಯ. ಆದರೂ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಹೊಸ ಮುಖವನ್ನು ತರಲಾಗಿದೆ. ಆದ್ರೆ ಮಾಣಿಕ್​ ಸಹಾ ಆಯ್ಕೆ ಬಗ್ಗೆ ತ್ರಿಪುರ ಬಿಜೆಪಿಯಲ್ಲಿ ಅಸಮಾಧಾನದ ಬುಗ್ಗೆ ಎದ್ದಿದೆ. ಆದರೆ ಕರ್ನಾಟಕದಲ್ಲೂ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕರ್ನಾಟದಲ್ಲೂ ಹೊಸ ಮುಖವನ್ನು ಆಯ್ಕೆ ಮಾಡಲಾಗುತ್ತೆ ಎನ್ನುವ ಗುಸುಗುಸು ಶರುವಾಗಿದೆ. ಆದರೂ ಬಿಜೆಪಿ ಹೈಕಮಾಂಡ್​ ಮಾತ್ರ ಯಾವುದೇ ಸುಳಿವು ಬಿಟ್ಟುಕೊಡ್ತಿಲ್ಲ. ಆದರೆ ಇತ್ತೀಚಿಗೆ ಅನುಮಾನ ಬರುವ ಸಂಗತಿಗಳು ರಾಜ್ಯ ಬಿಜೆಪಿಯಲ್ಲಿ ನಡೆದಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಅದರಲ್ಲೂ ನಿನ್ನೆ ಆರ್​ಎಸ್​ಎಸ್​ ಕಚೇರಿಯಲ್ಲಿ ನಡೆದಿರುವ ಸಂಗತಿ.

RSS ಕಚೇರಿಯಲ್ಲಿ ಗುಪ್ತ್​ ಗುಪ್ತ್​ ಚರ್ಚೆ, ಸಿಎಂ ಪ್ರವಾಸ ರದ್ದು..!

ಶನಿವಾರ ಸಂಜೆ ಆರ್​ಎಸ್​ಎಸ್​ ಕಚೇರಿ ಚಾಮರಾಜಪೇಟೆಯ ಕೇಶವಕೃಪಾದಲ್ಲಿ ಮಹತ್ವದ ಚರ್ಚೆ ನಡೆದಿದೆ. ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಸೇರಿದಂತೆ ಸಾಕಷ್ಟು ಹಿರಿಯ ನಾಯಕರು ಸಭೆ ಸೇರಿದ್ದರು. ಸುಮಾರು 3 ಗಂಟೆಗಳ ಕಾಲ ನಡೆದ ಮಹತ್ವದ ಚರ್ಚೆಯಲ್ಲಿ ಏನೆಲ್ಲಾ ತೀರ್ಮಾನ ಆಯ್ತು ಅನ್ನೋದು ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ. ಇದರ ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ಲಂಡನ್​ ಹಾಗೂ ದಾವೋಸ್​ನಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಗಳಿಗೆ ತೆರಳದಂತೆ ಹೈಕಮಾಂಡ್​ ಸೂಚನೆ ಕೊಟ್ಟಿದೆ ಎನ್ನಲಾಗಿದೆ. ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸಿ, ನೂತನ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟವನ್ನು ಬದಲಾಯಿಸುವ ಎಲ್ಲಾ ಸಾಧ್ಯತೆಗಳೂ ಇವೆ ಎನ್ನಲಾಗ್ತಿದೆ. ಹೈಕಮಾಂಡ್​ ದಿಢೀರ್ ನಿರ್ಧಾರ ಯಾವಾಗ ಎನ್ನುವುದನ್ನು ಬಿಜೆಪಿ ನಾಯಕರು ಕಾಯುತ್ತಿದ್ದಾರೆ ಅಷ್ಟೆ.

Related Posts

Don't Miss it !