ಒತ್ತಡಕ್ಕೆ ಮಣಿದು, ಹಾಸನಾಂಬ ದರ್ಶನಕ್ಕೆ ಅವಕಾಶ.. ನಿಯಮ ಮಾತ್ರ ಕಟ್ಟುನಿಟ್ಟು..

ಹಾಸನ : ಜಿಲ್ಲಾ ಕೇಂದ್ರದಲ್ಲಿರುವ ಶಕ್ತಿ ದೇವತೆ ಹಾಸನಾಂಬೆ ಉತ್ಸವ ಶುರುವಾಗುವ ಕಾಲ ಸನಿಹವಾಗಿದೆ. ಅಕ್ಟೋಬರ್​ 28 ರಿಂದ ನವೆಂಬರ್​ 6 ರವರೆಗೆ ಹಾಸನಾಂಬ ದೇವಸ್ಥಾನದ ಬಾಗಿಲು ತೆರೆಯಲಿದೆ. ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಕುರಿತು ಸಕಲ ತಯಾರಿ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ, ಕೇವಲ ವಿಶೇಷ ಆಹ್ವಾನಿತರು, ಪ್ರಮುಖ ಗಣ್ಯರಿಗೆ ಮಾತ್ರ ದರ್ಶನ ಸಿಗಲಿದೆ ಎಂದು ಸ್ವತಃ ಜಿಲ್ಲಾಧಿಕಾರಿಗಳು ಹೇಳಿದ್ದರು. ಡಿಸಿ ಮಾತಿನ ಬಳಿಕ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಆದ್ರೆ ಇದೀಗ ಆಕ್ರೋಶ ಮಣಿದು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕೆಲವೊಂದು ನಿಬಂಧನೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ನಾಳೆ ಮಧ್ಯಾಹ್ನ ಗರ್ಭಗುಡಿ ಬಾಗಿಲು ಓಪನ್​..!

ಅಕ್ಟೋಬರ್​ 28 ರಂದು ಅಂದ್ರೆ ನಾಳೆ ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿ ಬಾಗಿಲು ತೆರೆಯಲಿದೆ. ನವೆಂಬರ್​ 6 ರಂದು ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹಾಗೂ ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಜಾತ್ರಾ ಮಹೋತ್ಸವ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಆದರೆ ಸಾರ್ವಜನಿಕರಿಗೂ ಹಾಸನಾಂಬೆ ದರ್ಶನಕ್ಕೆ ಅವಕಾಶ ಕೊಡಿ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಸರ್ಕಾರವನ್ನು ಒತ್ತಾಯ ಮಾಡಿದ್ರು. ಅಷ್ಟು ಮಾತ್ರವಲ್ಲದೆ ರಾಜಕೀಯ ಸಮಾರಂಭ ಮಾಡುವಾಗ ಬಾರದ ಕೊರೊನಾ ದೇವರ ಉತ್ಸವಕ್ಕೆ ಬಂದು ಬಿಡುತ್ತಾ..? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ನನ್ನನ್ನೂ ಸೇರಿದಂತೆ ವಿಐಪಿಗಳಿಗೆ ಈ ಬಾರಿ ದರ್ಶನ ಬೇಡ, ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕೊಡಿ. ಬಡವರಿಗೆ ಮೊದಲು ಆದ್ಯತೆ ಕೊಡಬೇಕು, ಒಂದು ವೇಳೆ ಅವಕಾಶ ಕೊಡದೇ ಹೋದರೆ ನಾನೇ ನಿಂತ್ಕೊಂಡು ನಡಿರ್ಲಾ ನಾನು ನೋಡ್ಕತಿನಿ ಅಂಥಾ ದೇವಸ್ಥಾನಕ್ಕೆ ಬಿಡುಸ್ತೀನಿ. ಅದ್ಯಾವ ಪೊಲೀಸರು ಏನ್ ಮಾಡ್ತಾರೆ ನಾನು ನೋಡ್ತೀನಿ ಎಂದು ಗುಡುಗಿದ್ರು ಎಂದು ಒತ್ತಡ ಹೇರಿದ್ದರು. ಇದೀಗ ಸರ್ಕಾರ ಮಣಿದಿದೆ. ಸಾರ್ವಜನಿಕರಿಗೂ ಅವಕಾಶ ಇದೆ ಎಂದಿದ್ದಾರೆ.

Read this;

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿತ್ತು ಪ್ರತಿಭಟನೆ..!

ರೇವಣ್ಣ ಆಗ್ರಹದ ಬಳಿಕ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ವಿವಿಐಪಿಗಳಿಗೆ ಮಾತ್ರ ಏಕೆ ಹಾಸನಾಂಬೆ ದರ್ಶನ ಎಂದು ಪ್ರಶ್ನೆ ಮಾಡಿದ್ದರು. ಸಾಮಾನ್ಯ ಜನರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹ ಮಾಡಿದ್ದರು. ಅವಕಾಶ ನೀಡದೇ ಹೋದರೆ ಹಾಸನಾಂಬೆ ದೇವಾಲಯದ ಎದುರು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದರು. ಮಂಗಳವಾರ ಹಾಸನದಲ್ಲಿ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, 28 ರಂದು ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಿದೆ. ದಸರಾ ನಡೆದಿದೆ ಹಾಗೂ ಶಾಲೆಗಳು ಆರಂಭವಾಗಿವೆ. ಹೀಗಾಗಿ ಮೊದಲ ದಿನ ಹಾಗೂ ಕೊನೆಯ ದಿನ ಭಕ್ತರಿಗೆ ಅವಕಾಶ ಇರುವುದಿಲ್ಲ. ಉಳಿದ ಏಳು ದಿನಗಳು ಸಾರ್ವಜನಿಕರಿಗೆ ಹಾಸನಾಂಬ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

Also Read;

ಹಾಸನಾಂಬೆ ದರ್ಶನ ಮಾಡೋದು ಹೇಗೆ..?

ಹಾಸನಾಂಬ ದೇವಸ್ಥಾನ ವರ್ಷಪೂರ್ತಿ ತೆರೆದಿರುವುದಿಲ್ಲ, ಕೇವಲ ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ. ದಸರಾ ಮುಗಿದ ಬಳಿಕ ದೀಪಾವಳಿ ಸಮಯದಲ್ಲಿ ತೆರದೆಉ ಪೂಜೆ ಸಲ್ಲಿದ ಬಳಿಕ ವರ್ಷಗಳ ಕಾಲ ಮುಚ್ಚಲಾಗುತ್ತದೆ. ಹೀಗಾಗಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಅಧಿಕ. ಇದೀಗ ಕೇವಲ ಹಾಸನದ ಜನರಿಗೆ ಮಾತ್ರ ಹಾಸನಾಂಬೆ ಸೀಮಿತವಾಗಿಲ್ಲ. ರಾಜ್ಯದ ಪ್ರತಿ ಜಿಲ್ಲೆಗಳಿಂದಲೂ ಭಕ್ತರು ಆಗಮಿಸ್ತಾರೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆ ಹಾಗೂ‌‌ ಮಧ್ಯಾಹ್ನ 3 ರಿಂದ ರಾತ್ರಿ‌ 8 ರವರೆಗೆ ಭಕ್ತರು ದೇವಿ ದರ್ಶನ ಪಡೆಯುವುದಕ್ಕೆ ಅವಕಾಶ ಕೊಡಲಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಖಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು. ಜೊತೆಗೆ ಈಗಾಗಲೇ ಕೊರೊನಾ ಎರಡು ಲಸಿಕೆ ಪಡೆದಿರಬೇಕು. ಒಂದು ಡೋಸ್​ ಲಸಿಕೆ ಪಡೆದವರಿಗೆ ಅವಕಾಶಿರುವುದಿಲ್ಲ. ಇದನ್ನು ದೃಢೀಕರಿಸಲು ಲಸಿಕೆ ಸರ್ಟಿಫಿಕೇಟ್ ಅಥವಾ ಮೆಸೇಜ್ ತೋರಿಸುವುದು ಕಡ್ಡಾಯ.

Related Posts

Don't Miss it !