ಪ್ರೇಯಸಿ ಕೇಳಿದ ಮೊಬೈಲ್​ ಕೊಡಿಸಲು ಢಿಪರೆಂಟ್​ ಆಗಿ ಕಳವು ಮಾಡಿದ ಟ್ರೂ ಲವ್ವರ್..!!

ಬೆಂಗಳೂರಿನಲ್ಲಿ ಲವ್​ ಮಾಡೋದು ಅಂದ್ರೆ ಕಾಲೇಜು ಹುಡುಗ, ಹುಡುಗೀಗೆ ಅದೊಂದ್ ರೀತಿಯ ಪ್ರೆಸ್ಟೀಜ್​. ಆದ್ರೆ ಇಲ್ಲೊಬ್ಬ ಪ್ರೇಮಿ ತನ್ನ ಲವ್ವರ್​ಗಾಗಿ ಮೊಬೈಲ್​ ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ಕಳ್ಳತನ ಮಾಡೋದಕ್ಕೆ ಈತ ಮಾಡಿರುವ ಐಡಿಯ ಮಾತ್ರ ಇಡೀ ಪ್ರೇಮಿಗಳ ಸಮೂಹವೇ ವಾವ್ಹ್​ ಎನ್ನುವಂತೆ ಮಾಡಿದೆ. ಅದಕ್ಕೆ ಕಾರಣ ಈತ ಕಳವು ಮಾಡಿಕೊಂಡ ಮಾರ್ಗ. ಅಂಗಡಿ ಶೆಟರ್​ ಮುರಿಯಲಿಲ್ಲ, ರಾತ್ರಿ ಗೋಡೆ ಕೊರೆದು ಮೊಬೈಲ್​ ಕಳ್ಳತನ ಮಾಡಲಿಲ್ಲ. ನೇರವಾಗಿ ಅಂಗಡಿ ಒಳಕ್ಕೆ ಬಂದ ತನಗೆ ಬೇಕಾದ ಮೊಬೈಲ್​ಗಳನ್ನು ನೋಡಿದ. ಆ ಬಳಿಕ ಅಂಗಡಿಯಿಂದಲೇ ಹೊರಕ್ಕೆ ನೇರವಾಗಿಯೇ ಹೋಗಿದ್ದ. ನೇರವಾಗಿ ಬಂದ ದಾರಿಯಲ್ಲೇ ಒಳಕ್ಕೆ ಹೋಗಿದ್ದಾನೆ. ಆದರೆ ಈ ನಡುವೆ ಸಣ್ಣದೊಂದು ಟ್ವಿಟ್​ ಇದೆ. ಅದೇ ಈ ಕಳ್ಳನ ವಿಶೇಷ.

ಏನ್​ ಬೇಕಾದ್ರೂ ಕೇಳು ಕೊಡಿಸ್ತೀನಿ’ ಎಂದಿದ್ದೇ ಪ್ರೇಮಿಯ ತಪ್ಪು..!

ಬೆಂಗಳೂರಿನ ಜೆಪಿ ನಗರ ವ್ಯಾಪ್ತಿಯಲ್ಲಿ ವಾಸ ಮಾಡ್ತಿದ್ದ ಮುನಾಫ್​, ಓದನ್ನು ಅರ್ಧಕ್ಕೆ ನಿಲ್ಲಿಸಿ ಸಣ್ಣ ಪುಟ್ಟ ಕೆಲಸ ಮಾಡ್ತಿದ್ದ. ಆದ್ರೆ ಇತ್ತೀಚಿಗೆ ಈತನಿಗೆ ಒಂದು ಹುಡುಗಿ ಜೊತೆಗೆ ಪ್ರೇಮಾಂಕುರ ಆಗಿತ್ತು. ಕೈ ಕೈ ಹಿಡಿದು ಪಾರ್ಕು ಗೀರ್ಕು ಅಂತಾ ಸುತ್ತಾಡಿದ್ದೂ ಆಗಿತ್ತು. ತನ್ನ ಪ್ರೇಮಿಗಾಗಿ ಒಮ್ಮೆಮ್ಮೆ ಹಳ್ಳಕ್ಕೆ ಬೀಳುವ ಹುಡುಗರಂತೆ ಈತನೂ ಕೂಡ ನಿನಗೆ ಏನು ಬೇಕು ಕೇಳು ಚಿನ್ನ, ತಂದು ಕೊಡ್ತೇನೆ ಎಂದಿದ್ದ. ಪ್ರೇಮಿ ಕೇಳಿದ್ದೇ ತಡ ಪ್ರೇಯಸಿ ನನಗೊಂದು ಹೈಫೈ ಮೊಬೈಲ್​ ಕೊಡ್ಸೋ ಅಂದುಬಿಟ್ಲು. ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡ್ಕೊಂಡು ಜೀವನ ಮಾಡ್ತಿದ್ದ ಮುನಾಫ್​ ಚಕ್ರವ್ಯೂಹದಲ್ಲಿ ಸಿಲುಕಿದಂತಾಯ್ತು. ಪ್ರೇಯಸಿ ಕೇಳಿದ ಮೊಬೈಲ್​ ಕೊಡಿಸಲಿಲ್ಲ ಅಂದ್ರೆ ಲವ್​ ಹಳ್ಳ ಹಿಡಿಯುತ್ತೆ, ಅದಕ್ಕಾಗಿಯಾದ್ರೂ ನಾನು ಆಕೆಗೆ ಮೊಬೈಲ್​ ಕೊಡಿಸಿ ಖುಷಿ ಪಡಿಸಬೇಕು ಅನ್ನೋ ಹಠಕ್ಕೆ ಬಿದ್ದು ತಗ್ಲಾಕೊಂಡಿದ್ದಾನೆ.

ಒಂದೇ ಒಂದರ ಆಸೆಯಿಂದ ಒಳಕ್ಕೆ ಹೋದವ ಕದ್ದಿದ್ದು ಲಕ್ಷ..!

ಪ್ರೀತಿಸಿದ ಹುಡುಗಿಯ ಮನಸ್ಸು ಖುಷಿಪಡಿಸಿದ್ರೆ ಸಾಕು ಅನ್ನೋ ಉದ್ದೇಶದಿಂದ ಜೆಪಿ ನಗರದ ಕ್ರೋಮ ಮೊಬೈಲ್​ ಸೆಂಟರ್​ಗೆ ಹೋಗಿದ್ದ. ತನಗೆ ಬೇಕಾದ ಮೊಬೈಲ್​ ಹಾಗು ಅದರಲ್ಲಿ ಇರುವ ಎಲ್ಲಾ ರೀತಿಯ ಫ್ಯೂಚರ್ಸ್​​ ಬಗ್ಗೆ ಕೇಳಿ ತಿಳಿದುಕೊಂಡಿದ್ದ. ಆದ್ರೆ ಹಣ ಇದ್ರೆ ತಾನೇ ಖರೀದಿ ಮಾಡ್ಕೊಂಡು ಮನೆಗೆ ಹೋಗೋದು. ಹೀಗಾಗಿ ಬಾತ್​ರೂಂ ಎಲ್ಲಿದೆ ಅಂತಾ ಕೇಳ್ಕೊಂಡು ಹೋದವನು ಅಲ್ಲೇ ಉಳಿದುಕೊಂಡು ಬಿಟ್ಟ. ಆಮೇಲೆ ಎಲ್ಲರೂ ಅಂಗಡಿ ಬಾಗಿಲು ಹಾಕೊಂಡು ಹೋದ ಬಳಿಕ ಮತ್ತೆ ಅಂಗಡಿ ಒಳಕ್ಕೆ ಬಂದ ಮುನಾಫ್ ಒಂದಲ್ಲ ಎರಡಲ್ಲ ಬರೋಬ್ಬರಿ 5 ಲಕ್ಷ ಮೌಲ್ಯದ 6 ಮೊಬೈಲ್​ಗಳನ್ನು ಬ್ಯಾಗ್​ಗೆ ಹಾಕಿಕೊಂಡು ಬಾತ್​ರೂಂನಲ್ಲೇ ಅಡಗಿ ಕುಳಿತಿದ್ದ. ಬೆಳಗ್ಗೆ ಎಂದಿನಂತೆ ಬಂದು ಬಾಗಿಲು ತೆರೆದ ಸಿಬ್ಬಂದಿಗಳು ವ್ಯಾಪಾರ ಮಾಡುತ್ತಿದ್ದಾಗ, ಬಾತ್​ ರೂಂ ಒಳಗಿಂದ ಮೆಲ್ಲಗೆ ಬಂದ ದಾರಿಯಲ್ಲೆ ಜಾಗ ಖಾಲಿ ಮಾಡಿದ್ದ.

ಕಳವು ಮಾಡಿದ್ದು ಗೊತ್ತಾಗಿದ್ದು ಹೇಗೆ..? ಸಿಕ್ಕಿಬಿದ್ದಿದ್ದು ಹೇಗೆ..?

ಆಧುನಿಕ ಜಗತ್ತಿನಲ್ಲಿ ಬದುಕುತ್ತಿರುವ ನಾವು ಯಾವುದೇ ತಪ್ಪು ಮಾಡಿದಾಗಲೂ ತಪ್ಪಿಸಿಕೊಳ್ಳೋಕೆ ಸಾಧ್ಯ ಇರೋದು ಕೇವಲ ಶೇಕಡ 1 ರಷ್ಟು ಮಾತ್ರ ಅವಕಾಶ. ಯಾಕಂದ್ರೆ ತಂತ್ರಜ್ಞಾನ ಅಷ್ಟೊಂದು ಸಾಕ್ಷ್ಯಗಳನ್ನು ಹೊತ್ತು ನಿಂತಿರುತ್ತದೆ. ಅಂಗಡಿಯಲ್ಲಿ ದಿನಕ್ಕೆ ಒಂದೆರಡು ಬಾರಿ ಮೊಬೈಲ್​ಗಳ ಲೆಕ್ಕ ಮಾಡಲಾಗುತ್ತದೆ. ಬಿಲ್​ ಆಗಿರುವ ಮೊಬೈಲ್​, ಉಳಿಕೆ ಮೊಬೈಲ್​ಗಳ ಪರಿಶೀಲನೆ ಮಾಡುತ್ತಾರೆ. ಅದೆ ರೀತಿ ಮೊಬೈಲ್​ ಕೌಂಟಿಂಗ್​ ಮಾಡಿದಾಗ 6 ಮೊಬೈಲ್​ಗಳು ಏರು ಪೇರಾಗಿದ್ದವು. ಮೊಬೈಲ್​ಗಳು ಏನಾದವು ಎನ್ನುವ ಬಗ್ಗೆ ಪರಿಶೀಲನೆ ಮಾಡಿದ ಸಿಬ್ಬಂದಿ ನಿನ್ನೆಯಿಂದ ಎಷ್ಟು ಜನ ಬಂದಿದ್ದರು. ಎಷ್ಟು ಜನ ಮೊಬೈಲ್​ ಖರೀದಿ ಮಾಡಿದ್ರು ಅನ್ನೋದನ್ನು ಫ್ರೇಮ್​ ಟು ಫ್ರೇಮ್​ ಪರಿಶೀಲನೆ ಮಾಡಿದ್ರು. ಆಗ ಮುನಾಫ್​ ಅಂಗಡಿಗೆ ಬಂದಿದ್ದು ಗೊತ್ತಾಯ್ತು. ಮೊಬೈಲ್​ ನೋಡಿ ಖಾಲಿ ಕೈನಲ್ಲಿ ಹೊರಕ್ಕೆ ಹೋಗಬೇಕಿದ್ದವನು ಬಾತ್​ ರೂಂ ಕಡೆಗೆ ಹೋಗಿದ್ದು ಗೊತ್ತಾಯ್ತು. ಆ ಬಳಿಕ ರಾತ್ರಿ ಕಳ್ಳಬೆಕ್ಕು ಬಂದು ಹಾಲು ಕುಡಿದು ಹೋಗುವಂತೆ ಅಂಗಡಿ ಒಳಗೆಲ್ಲಾ ಸುತ್ತಾಡಿ ಮೊಬೈಲ್​ ಎತ್ತಿಕೊಂಡಿದ್ದೂ ಗೊತ್ತಾಯ್ತು. ಜೆಪಿ ನಗರ ಪೊಲೀಸರಿಗೆ ದೂರು ಕೊಡಲಾಗಿತ್ತು. ನೇರವಾಗಿ ಮುನಾಫ್​ ಮನೆ ಪತ್ತೆ ಹಚ್ಚಿದ ಪೊಲೀಸ್ರು ಮುನಾಫ್​ ಹಾಗು 5 ಲಕ್ಷದ ಮೌಬೈಲ್​ಗಳನ್ನು ಜಪ್ತಿ ಮಾಡಿದ್ದಾರೆ. ಸಾರ್ ನನ್ನ ಲವ್ವರ್​ ಕೇಳಿದ್ಲು ಅಂತಾ ಹೀಗೆ ಮಾಡ್ಬಿಟ್ಟೆ ಸಾರ್ ಅಂದವನು ಕಂಬಿ ಹಿಂದೆ ಹೋಗಿದ್ದಾನೆ. ಟ್ರೂ ಲವ್ವರ್​ ನೌ ಬಿಹೈಂಡ್​ ದಿ ಬಾರ್.

Related Posts

Don't Miss it !