ಅಕ್ಕನ ಜೊತೆಗೆ ವಿದೇಶಕ್ಕೆ ಹೋದಳು ಅಪಾಪೋಲಿ ಅಮ್ಮ..! ತಂದೆ ಜೊತೆ ವಿಷ ಸೇವಿಸಿದ ಮಕ್ಕಳು..

ತುಮಕೂರಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮೂರು ಮಕ್ಕಳಿಗೆ ವಿಷವುಣ್ಣಿಸಿದ ತಂದೆಯೊಬ್ಬ ತಾನೂ ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾವು ಬದುಕಿನೊಂದಿಗೆ ಹೋರಾಟ ಮಾಡುತ್ತಿರುವ ಮಕ್ಕಳು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಮಕೂರು ನಗರದ ಪಿ.ಎಚ್ ಕಾಲೋನಿಯಲ್ಲಿ ವಾಸವಾಗಿದ್ದ ‌ 40 ವರ್ಷದ ಸಮೀವುಲ್ಲಾ ಮೃತ ದುರ್ದೈವಿ. ಕಳೆದ 13 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಮೂವರು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗು ಓರ್ವ ಗಂಡು ಮಗ ಇದ್ದನು. ಆದರೆ ಕಳೆದ 4 ವರ್ಷದ ಹಿಂದೆ ಅಕ್ಕನ ಜೊತೆಗೆ ಮನೆಗೆಲಸ ಮಾಡಿಕೊಂಡು ಹಣ ಸಂಪಾದನೆ ಮಾಡುವ ಉದ್ದೇಶದಿಂದ ದುಬೈಗೆ ತೆರಳಿದ್ದ ಪತ್ನಿ ಸಾಹೇರಾ ಭಾನು ಈ ದುರ್ಘಟನೆಗೆ ಕಾರಣ ಎನ್ನಲಾಗ್ತಿದೆ. ತಿಲಕ್​ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳ ಸ್ಥಿತಿ ಕೂಡ ಗಂಭೀರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎನ್ನಲಾಗ್ತಿದೆ.

ವಿದೇಶಕ್ಕೆ ಹೋದವಳು ಪ್ರೇಮಪಾಶಕ್ಕೆ ಬಿದ್ದಳು ಅಮ್ಮ..!

ನಾಲ್ಕು ವರ್ಷದ ಹಿಂದೆ ದುಬೈಗೆ ಹೋಗಿದ್ದ ಸಾಹೇರಾ ಭಾನು, ಕೆಲವು ದಿನಗಳ ಕಾಲ ಮಕ್ಕಳು ಹಾಗು ಪತಿಯೊಂದಿಗೆ ಚೆನ್ನಾಗೇ ಇದ್ದಳಂತೆ. ಆ ಬಳಿಕ ದುಬೈನಲ್ಲಿ ಸ್ನೇಹಿತನ ಸಹವಾಸ ಸಿಕ್ಕಿದ ಬಳಿಕ ಮಕ್ಕಳು ಹಾಗು ಗಂಡನಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದಳು. ಅಷ್ಟು ಮಾತ್ರವಲ್ಲದೆ ಪ್ರಿಯಕರನೊಂದಿಗೆ ಮೋಜು ಮಸ್ತಿ ಮಾಡುತ್ತ ಗಂಡನಿಗೆ ವೀಡಿಯೋ ಕಾಲ್​ ಮಾಡುತ್ತಿದ್ದಳು. ಪ್ರಿಯಕರನೊಂದಿಗೆ ಚಕ್ಕಂದ ಆಡುತ್ತಾ ವಿಡಿಯೋ ಕಾಲ್ ಮಾಡುತ್ತಿದ್ದ ಸಾಹೇರಾ ಭಾನು, ಗಂಡನಿಗೆ ಮಾನಸಿಕ ಕಿರುಕುಳ ಕೊಡುತ್ತಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದ ಇಡೀ ಕುಟುಂಬ ಸಾಯುವ ನಿರ್ಧಾರ ಕೈಗೊಂಡಿತ್ತು. ಮೊದಲಿಗೆ ಮಕ್ಕಳಿಗೆಲ್ಲಾ ಅಲ್ಪ ಪ್ರಮಾಣದ ವಿಷ ಉಣಿಸಿದ್ದ ಮೋಯಿದ್ದಿನ್ ಸಮೀವುಲ್ಲಾ, ಆ ಬಳಿಕ ತಾನು ಹೆಚ್ಚಾಗಿ ವಿಷ ಸೇವನೆ ಮಾಡಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಮಿವುಲ್ಲಾ ಸಾವನ್ನಪ್ಪಿದ್ದು, ಮಕ್ಕಳ ಸ್ಥಿತಿ ಕೂಡ ಗಂಭೀರ ಆಗಿದೆ.

ಮಕ್ಕಳ ಆಡಿಯೋ ಸಂದೇಶಕ್ಕೂ ಮರುಗದ ತಾಯಿ..!

ಪರ ಪುರುಷನ ಜೊತೆಗೆ ಚಕ್ಕಂದವಾಡುತ್ತ, ಹುಕ್ಕಾ ಸೇವನೆ ಮಾಡುತ್ತಾ ವಿಡಿಯೋ ಕಾಲ್ ಮಾಡುತ್ತಿದ್ದ ಸಹೇರಾ ಭಾನು ತನ್ನ ಐಷಾರಾಮಿ ಜೀವನದ ಮೂಲಕ ಅಣಕಿಸುತ್ತಿದ್ದಳು. ವೀಡಿಯೋ ಕಾಲ್​ ಮಾಡುತ್ತಿದ್ದರಿಂದ ಮಕ್ಕಳಿಗೂ ಈ ಬಗ್ಗೆ ಮಾಹಿತಿ ಇತ್ತು. ಎಲ್ಲರೂ ಒಟ್ಟಾಗಿಯೇ ಸಾಯುವ ನಿರ್ಧಾರ ಮಾಡಿದ್ದರು. ಸಾಯುವ ಮುನ್ನ ತನ್ನ ತಾಯಿಗೆ ವಾಟ್ಸ್​ ಆಪ್​ ಮೂಲಕ ಆಡಿಯೋ ಸಂದೇಶ ಕಳುಹಿಸಿದ್ದ ಮಕ್ಕಳು, ಸೌದಿಯಿಂದ ಬಂದು ಬಿಡುವಂತೆ ಮಕ್ಕಳು ಗೋಗರೆದಿದ್ದರು. ಆದರೆ ಮಕ್ಕಳ ಕಣ್ಣೀರಿಗೂ ಕರಗದ ಸಾಹೇರಾ ಭಾನು, ಯಾವುದೇ ಉತ್ತರ ಕೊಟ್ಟಿರಲಿಲ್ಲ. ಆದ್ದರಿಂದ ಆಗಸ್ಟ್​ 13ರಂದು ವಿಷ ಸೇವಿಸುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ವಿಷ ಕುಡಿಯುವ ಮುನ್ನ ತಾಯಿಗೆ ವಾಯ್ಸ್ ರೆಕಾರ್ಡ್ ಕಳುಹಿಸಿದ್ದ ಮಕ್ಕಳು, ಇವತ್ತು ಒಂದೇ ಒಂದು ದಿನ ಮಾತನಾಡು ಅಮ್ಮ. ಇವತ್ತು ಕೊನೆ ದಿನ ನಾವು ನಾಲ್ಕು ಜನರೂ ಸಾಯುತ್ತಿದ್ದೇವೆ ಎಂದು ಆಡಿಯೋ ಕಳಿಸಿದ್ದಾರೆ. ಮಕ್ಕಳ ಅಳುವ ವಾಯ್ಸ್​ಗೂ ತಾಯಿ ಸಾಹೇರಾ ಭಾನು ಹೃದಯ, ಮನಸ್ಸು ಕರಗಿಲ್ಲ.

ಹೆಣ್ಣು ಮಕ್ಕಳ ವಿದ್ಯಾಬ್ಯಾಸ ಸಂಸಾರಕ್ಕೆ ಹೊಡೆತ ಆಗ್ತಿದ್ಯಾ..?

ನಮ್ಮ ದೇಶದ ಸಂವಿಧಾನದ ಪ್ರಕಾರ ಹೆಣ್ಣು ಗಂಡು ಎಂದು ತಾರತಮ್ಯ ಮಾಡುವಂತಿಲ್ಲ. ಸಮಾಜದಲ್ಲಿ ಎಲ್ಲರೂ ಸಮಾನರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈ ಸಮಾನತೆ ಕಾಲಕ್ರಮೇಣ ಆಕ್ರಮಿಸುತ್ತಾ ಸಾಗುತ್ತಿದೆ. ಎಲ್ಲಾ ಹೆಣ್ಣು ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗಂಡಿನ ಹಾಗೆಯೇ ಕೆಲಸ ಮಾಡುತ್ತಿದ್ದಾರೆ. ಅಷ್ಟರಲ್ಲಿ ಸಮಾಜದಲ್ಲಿ ಸಂಸಾರ ಎಂಬ ಕೌಟುಂಬಿಕ ವ್ಯವಸ್ಥೆ ವ್ಯವಹಾರ ಆಗಿ ಬದಲಾಗುತ್ತಿದೆ. ಮನೆಯಿಂದ ಹೊರ ಬೀಳುವ ಹೆಣ್ಣು ಆಕರ್ಷಣೆಗೆ ಒಳಗಾಗುತ್ತಿದ್ದಾಳೆ ಎನ್ನುವುದು ಹಲವರ ಆರೋಪ. ಈ ಪ್ರಕರಣದಲ್ಲೂ ಗಂಡನಾದ ವ್ಯಕ್ತಿ ದುಡಿಮೆ ಮಾಡಲು ಹೋಗಿದ್ದರೆ, ಇಡೀ ಕುಟುಂಬವೇ ಸುಖವಾಗಿ ಇರುತ್ತಿತ್ತು. ಹೆಂಡತಿ ಮಕ್ಕಳಿಗೆ ಗಂಡಸು ದುಡಿದು ಹಾಕುವುದು ಸರಿಯಾಗಿತ್ತು. ಆದರೆ ಹೆಂಡತಿಯನ್ನೇ ದುಡಿಮೆಗೆ ಬಿಟ್ಟಿದ್ದು, ಇಡೀ ಕುಟುಂಬ ಸರ್ವನಾಶ ಆಗುವ ಹಂತಕ್ಕೆ ಬಂದು ನಿಂತಿದೆ. ಸಾಹೇರಾ ಭಾನು ಮನಸ್ಥಿತಿಗೆ ಆಕೆ ಅನುಭವಿಸಿರುವ ಈ ಹಿಂದಿನ ಜೀವನವೂ ಕಾರಣ ಇರಬಹುದು. ಆಕೆಯ ಗಂಡ ಆಕೆಯ ಆಸೆಗೆ ತಕ್ಕಂತೆ ಜೀವನ ನಡೆಸದೆ ಇರಬಹುದು. ಆದರೆ ಆ ಮೂರು ಮಕ್ಕಳನ್ನು ಹಡೆದಿದ್ದ ಸಾಹೇರಾ ಭಾನುಳಿಗೆ ಮಕ್ಕಳನ್ನು ಸಾಕುವ ಜವಾಬ್ದಾರಿ ಮರೆತು ಹೋಗಿದ್ದನ್ನು ಮಾತ್ರ ಸಮಾಜ ಒಪ್ಪಲಾರದು.. ಅಲ್ಲವೇ..?

Related Posts

Don't Miss it !