ರಾಜ್ಯದ ಗಮನ ಸೆಳೆದ ಮದುವೆಯಲ್ಲಿ ಭೀಕರ ದುರಂತ..! ಬಾಳು ಕೊಟ್ಟಿದ್ದವನ ಬದುಕು ಅಂತ್ಯ..! ಕಾರಣ ಕೇಳಿದ್ರೆ ಶಾಕ್​..

ಕಳೆದ 6 ತಿಂಗಳ ಹಿಂದೆ ರಾಜ್ಯದ ಗಮನ ಸೆಳೆದಿದ್ದ ಒಂದು ವಿಚಾರ ಎಂದರೆ ತುಮಕೂರು ಜಿಲ್ಲೆ ಕುಣಿಗಲ್​ನಲ್ಲಿ ನಡೆದಿದ್ದ ವಿಶೇಷ ಮದುವೆ. ದೃಶ್ಯ ಮಾಧ್ಯಮಗಳಲ್ಲಿ 45 ವರ್ಷದ ವ್ಯಕ್ತಿ 21 ವರ್ಷದ ಯುವತಿ ಮದುವೆ ಅನ್ನೋ ಹೆಸರಿನಲ್ಲಿ ಸಾಕಷ್ಟು ಖ್ಯಾತಿ ಪಡೆದಿತ್ತು. ತುಂಬಾ ಚಿಕ್ಕ ಪ್ರಾಯಕ್ಕೆ ವಿಧವೆ ಆಗಿದ್ದ 21 ವರ್ಷದ ಹುಡುಗಿಯನ್ನು 45 ವರ್ಷದ ಶಂಕ್ರಪ್ಪ ಎಂಬಾತ ವರಿಸಿದ್ದನು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆದ ಬಳಿಕ ದೃಶ್ಯ ಮಾಧ್ಯಮಗಳ ಮೂಲಕ ಶಹಬ್ಬಾಸ್​ಗಿರಿ ಸಿಕ್ಕಿತ್ತು. ರಾಜ್ಯಾದ್ಯಂತ ನಡೆದಿದ್ದ ಚರ್ಚೆಯಲ್ಲಿ ವಿಧವೆಗೆ ಬದುಕು ಕೊಟ್ಟಿದ್ದ ವಿಚಾರ ಪ್ರಶಂಸೆಗೂ ಒಳಗಾಗಿತ್ತು . ಆದರೆ ಇಂದು ಆ ವಿಚಾರ ದುರಂತ ಅಂತ್ಯ ಕಂಡಿದೆ. 45 ವರ್ಷದ ಬಳಿಕ ಮದುವೆ ಆಗುವ ಮೂಲಕ ಭಾರೀ ಸುದ್ದಿಯಾಗಿದ್ದ ಶಂಕ್ರಪ್ಪ, ಇಂದು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಜೀವನವನ್ನೇ ಅಂತ್ಯ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಸಮಯವಲ್ಲದ ಸಮಯದಲ್ಲಿ ಮದುವೆ ಆಗಿದ್ದು, ಅಲ್ಲ ಪತ್ನಿ ಗರ್ಭಿಣಿ ಆಗಿದ್ದು ಎನ್ನುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಆತ್ಮಹತ್ಯೆಗೆ ಕಾರಣವೇ ಅಚ್ಚರಿ..! ಅಮ್ಮ, ಹೆಂಡತಿ ವಿಭಿನ್ನ ಹೇಳಿಕೆ..!

ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ ಚೌಡನಕುಪ್ಪೆ ಬಳಿಯ ಅಕ್ಕಿಮರಿ ಪಾಳ್ಯದ ಶಂಕರಪ್ಪ, ತಮ್ಮ ತೋಟದಲ್ಲಿ ಬೆಳೆದಿದ್ದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಸಂತೆಮಾವತ್ತೂರು ಗ್ರಾಮದ ಮೇಘನಾ ಜೊತೆಗೆ ಮದುವೆ ಆಗಿದ್ದರು. ದೇವಸ್ಥಾನದಲ್ಲಿ ಭೇಟಿಯಾಗಿದ್ದ ಮೇಘನಾ ಹಾಗೂ ಶಂಕರಪ್ಪ, ಆ ಬಳಿಕ ಮದುವೆ ಆಗುವ ಪ್ರಸ್ತಾಪ ಮುಂದಿಟ್ಟು, ಸಪ್ತಪದಿ ತುಳಿದಿದ್ದರು. ಅಲ್ಲಿಂದ ಇಲ್ಲೀವರೆಗೂ ಸಂತಸದಿಂದಲೇ ಕೂಡಿದ್ದ ದಾಂಪತ್ಯ, ಕಳೆದ ಫೆಬ್ರವರಿಯಲ್ಲಿ ಪ್ರೇಮಿಗಳ ದಿನಾಚರಣೆಯನ್ನು ವಿಭಿನ್ನವಾಗಿ ಆಚರಣೆ ಮಾಡಿಕೊಂಡಿದ್ದರು. ಊರಿನ ಜನರಿಗೆಲ್ಲಾ ಊಟವನ್ನೂ ಹಾಕಿಸಿ ಸಂಭ್ರಮಿಸಿದ್ದರು. ಹೋಟೆಲ್​ನಲ್ಲಿ ಹೋಗಿ ಸಂತಸ ಅನುಭವಿಸಿದ್ದ ಮೇಘನಾ ವಿಡಿಯೋಗಳು ಇದೀಗ ವೈರಲ್​ ಆಗಿದೆ. ಇದರ ನಡುವೆ ತಾಯಿಯನ್ನು ಮನೆಯಿಂದ ಹೊರ ಹಾಕಿದ್ದ ವಿಚಾರವೂ ಇದೀಗ ಹೊರಬಿದ್ದಿದ್ದು ಸ್ವತಃ ಶಂಕರಪ್ಪ ಕೂಡ ಸಾವಿಗೆ ನಿಖರ ಕಾರಣವೇನು ಎನ್ನುವುದನ್ನು ಮರಣ ಪತ್ರದಲ್ಲಿ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಆ ವಿಚಾರವನ್ನು ಪೊಲೀಸ್ರು ಮಾತ್ರ ಬಚ್ಚಿಟ್ಟಿದ್ದಾರೆ.

ಅತ್ತೆ ಮೇಲೆ ಸೊಸೆ, ಸೊಸೆ ಮೇಲೆ ಅತ್ತೆ ಆರೋಪ ಪ್ರತ್ಯಾರೋಪ..!

ನನ್ನ ಮಗ ಮದುವೆ ಆದ ಕೆಲವೇ ದಿನಗಳಲ್ಲಿ ಸೊಸೆ ನನ್ನನ್ನು ಹೊರಕ್ಕೆ ಹಾಕಿದಳು. ನಾನು ಪ್ರತ್ಯೇಕವಾಗಿ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದೆ. ಮಧ್ಯೆ ಮಧ್ಯೆ ನನ್ನ ಜೊತೆಗೆ ಜಗಳ ಆಡುತ್ತಿದ್ದ ಮೇಘನಾ, ನನ್ನ ಮಗನನ್ನು ಬೆಂಗಳೂರಿಗೆ ಕರೆದೊಯ್ಯಲು ಒತ್ತಾಯ ಮಾಡುತ್ತಿದ್ದಳು. ಆಸ್ತಿ ಮಾರಾಟ ಮಾಡಿ ಹಣ ಮಾಡಿಕೊಳ್ಳಲು ಹವಣಿಸುತ್ತಿದ್ದಳು. ಆದರೆ ಆಸ್ತಿ ನನ್ನ ಗಂಡನ ಹೆಸರಲಿತ್ತು. ಆದರೆ ಶಂಕರನಿಗೆ ಸಾಕಷ್ಟು ಚಿನ್ನಾಭರಣ ಮಾಡಿಸಿಕೊಟ್ಟಿದ್ದೆ, ಎಲ್ಲವನ್ನೂ ಅಡವಿಟ್ಟು ಮೋಜು ಮಸ್ತಿ ಶುರು ಮಾಡಿಕೊಂಡಿದ್ದರು ಎಂದು ಶಂಕರಪ್ಪನ ತಾಯಿ ದೂರಿದ್ದಾರೆ. ಜೊತೆಗೆ ಸೊಸೆಯ ಕಾಟದಿಂದಲೇ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್​ ಠಾಣೆಗೂ ದೂರು ನೀಡಿದ್ದಾರೆ. ಆದರೆ ನಾನು ಯಾವುದೇ ಸಮಸ್ಯೆ ಮಾಡಿರಲಿಲ್ಲ, ಊರಿನಲ್ಲಿ ಇರುವ ಬದಲು ಸಿಟಿಗೆ ಹೋಗಿ ಕೆಲಸ ಮಾಡಿಕೊಂಡು ಉತ್ತಮ ಜೀವನ ನಡೆಸೋಣ ಎಂದು ಗಂಡನಿಗೆ ಹೇಳಿದ್ದು ಸತ್ಯ ಎಂದು ಪತ್ನಿ ಮೇಘನಾ ಹೇಳಿಕೊಂಡಿದ್ದಾರೆ. ಅತ್ತೆ ನನ್ನನ್ನು ಬೈಯ್ಯುವಾಗ ನೀನು ಹೊಂದಾಣಿಕೆ ಮಾಡಿಕೊಂಡು ಹೋಗು, ವಯಸ್ಸಾದವರ ಜೊತೆಗೆ ಜಗಳ ಆಡಬೇಡ ಎಂದು ಪತ್ನಿಗೆ ಸಲಹೆಯನ್ನೂ ನೀಡಿದ್ದರಂತೆ. ಜಗಳ ನಿಲ್ಲದಿದ್ದಾಗ ತಾಯಿ ಮೇಲೆ ಕೋಪಗೊಂಡು ಹೊಡೆಯಲು ಮುಂದಾಗಿದ್ರಂತೆ. ಆ ಬಳಿಕ ಎಲ್ಲಾದರೂ ಹೋಗಿ ಸಾಯಿ ಎಂದು ಸುಮ್ಮನಾಗಿದ್ದರು. ಅದಕ್ಕೆ ನೀನೇ ಎಲ್ಲಾದರೂ ಹೋಗಿ ಸಾಯಿ ಎಂದು ತಾಯಿ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ ಮೇಘನಾ. ಆದರೆ ಸಾವಿಗೆ ನಿಖರ ಕಾರಣ ಅದಲ್ಲ ಎನ್ನುವುದು ಸ್ಥಳೀಯರ ಮಾತು.

ಮೃತ ಶಂಕರಪ್ಪ

ಪುರುಷತ್ವದ ವಿಚಾರದ ಬಗ್ಗೆ ನಡೀತಿದೆ ಚರ್ಚೆ..!!

ಹುಲಿಯೂರುದುರ್ಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿಗೆ ಕಾರಣ ಏನು ಎನ್ನುವ ವಿಚಾರ ಸಾವಿನ ಪತ್ರದಲ್ಲಿ ಇದೆ ಎನ್ನಲಾಗ್ತಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಮೇಘನಾ ಗರ್ಭಿಣಿ ಆಗಿದ್ದು ಎನ್ನುವ ಗುಸುಗುಸು ಕೇಳಿಬಂದಿದೆ. ಪತ್ನಿ ಗರ್ಭಿಣಿ ಆದರೆ ಗಂಡ ಸಾಯುವುದು ಉಂಟೇ ಎನ್ನುವ ಪ್ರಶ್ನೆ ಎದುರಾಗುವುದು ಸರಿ. ಆದರೆ ಶಂಕರಪ್ಪನಿಗೆ ಲೈಂಗಿಕ ಆಸಕ್ತಿ ಇರಲಿಲ್ಲ ಎನ್ನಲಾಗಿದ್ದು, ಇದೇ ಕಾರಣದಿಂದ 45 ವರ್ಷವಾದರೂ ಶಂಕರಪ್ಪ ಮದುವೆ ಆಗಿರಲಿಲ್ಲ ಎನ್ನಲಾಗಿದೆ. ಇನ್ನೂ ಈ ವಿಚಾರವನ್ನು ಮದುವೆ ಪ್ರಸ್ತಾಪ ಇಟ್ಟಿದ್ದ ಮೇಘನಾಗೂ ಮದುವೆಗೂ ಮುನ್ನವೇ ತಿಳಿಸಿದ್ದರು ಎನ್ನುವುದು ಗೊತ್ತಾಗಿದೆ. ಆದರೂ ಮೇಘನಾ ನಾಲ್ಕು ತಿಂಗಳ ಗರ್ಭಿಣಿ ಆಗಿದ್ದು, ಮನೆಯಲ್ಲಿ ಕಿಚ್ಚು ಹಚ್ಚಿತ್ತು ಎನ್ನುವ ಮಾಹಿತಿ ಇದೆ. ಆದರೆ ನಾಲ್ಕು ತಿಂಗಳ ಗರ್ಭಿಣಿ ಆಗಿದ್ದರೆ, ಪ್ರೇಮಿಗಳ ದಿನವನ್ನು ಅದ್ಧೂರಿಯಾಗಿ ಆಚರಿಸಿದ್ದು ಹೇಗೆ..? ಮನಸ್ತಾಪ ಇದ್ದರೆ ಈ ಬಗ್ಗೆ ವೈದ್ಯರ ಬಳಿ ತಪಾಸಣೆ ಮಾಡಿಸಿ ಖಚಿತ ಮಾಡಿಕೊಳ್ಳಲು ಅವಕಾಶವಿತ್ತು. ಆದರೂ ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ..? ಎನ್ನುವ ಪ್ರಶ್ನೆಯೂ ಉದ್ಭವ ಆಗುತ್ತಿದೆ. ಏನೇ ಆಗಲಿ ತಪ್ಪು ತಿಳುವಳಿಕೆಯಿಂದಲೋ ಅಥವಾ ಪತ್ನಿ ಹಾಗೂ ತಾಯಿ ನಡುವಿನ ಜಗಳವನ್ನು ತಹಬದಿಗೆ ತರುವುದಕ್ಕೆ ಸಾಧ್ಯವಾಗದಕ್ಕೋ ಶಂಕರಪ್ಪ ಆತ್ಮಹತ್ಯೆಗೆ ಶರಣಾಗಿದ್ದು ದುರಂತವೇ ಸರಿ. ಮೊದಲ ಗಂಡನ ಸಾವಿನ ಬಳಿಕ 45 ವರ್ಷದ ವ್ಯಕ್ತಿಯನ್ನು ಮದುವೆ ಆಗಿದ್ದ ಮೇಘನಾ ಬದುಕು ಕೂಡ ಮತ್ತೆ ದುರಂತ ಕಂಡಿದ್ದು ವಿಚಿತ್ರವೇ ಸರಿ.

Related Posts

Don't Miss it !