ಬಾಲ್ಯ ಸ್ನೇಹಿತರನ್ನು ಬಲಿ ತೆಗೆದುಕೊಂಡಿದ್ದು ಒಬ್ಬಳೇ ಹುಡುಗಿ..! ಒಬ್ಬನ ಕೊಲೆ.. ಒಬ್ಬನಿಗೆ ಜೈಲು..

ಬೆಂಗಳೂರಿನಲ್ಲಿ ಒಂದೇ ಹುಡುಗಿ ಇಬ್ಬರು ಮೂವರನ್ನು ಪ್ರೀತಿ ಮಾಡುವ ಸಾಕಷ್ಟು ಪ್ರಕರಣಗಳ ನಮ್ಮ ಕಣ್ಣೆದುರಲ್ಲಿ ಕಾಣಿಸುತ್ತವೆ. ಅದೇ ರೀತಿ ಬೆಂಗಳೂರಿನ ಹಳೇ ಬೈಯ್ಯಪ್ಪನಹಳ್ಳಿ ವಾಸವಾಗಿದ್ದ ಇಬ್ಬರು ಸ್ನೇಹಿತರು ಇಂದು ದುಷ್ಮನ್ಗಳಾಗಿ ಕೊಲೆಯಾಗಿದ್ದಾರೆ. ಒಬ್ಬ ಕೊಲೆ ಮಾಡಿ ಜೈಲು ಸೇರಿದ್ರೆ ಮತ್ತೋರ್ವ ಮದುವೆಯಾದ ತಪ್ಪಿಗೆ ಹೆಣವಾಗಿದ್ದಾನೆ. ಇಬ್ಬರನ್ನು ಪ್ರೀತಿಸಿದ್ದ ಯುವತಿ ಅತ್ತ ಪ್ರಿಯಕರನೂ ಇಲ್ಲದೆ ಇತ್ತ ಗಂಡನೂ ಇಲ್ಲದೆ ಒಂಟಿ ಬಾಳು ಅನುಭವಿಸುವಂತಾಗಿದೆ. ಬಾಲ್ಯದಿಂದಲೂ ಸ್ನೇಹಿತರಾಗಿದ್ದವರು ಪ್ರೇಮ ಪಾಶಕ್ಕೆ ಸಿಲುಕಿ ಜೀವನವನ್ನೇ ಅಂತ್ಯ ಮಾಡಿಕೊಂಡಿದ್ದಾರೆ.

ಪ್ರೀತಿಸಿದವನನ್ನು ಬಿಟ್ಟು ಸ್ನೇಹಿತನನ್ನು ಮದುವೆಯದಳು ಕಿಲಾಡಿ..!!

ಸತೀಶ್ ಮತ್ತು ರಾಕೇಶ್ ಇಬ್ಬರು ಬಾಲ್ಯ ಸ್ನೇಹಿತರು. ಸಣ್ಣ ವಯಸ್ಸಿನಿಂದಲೇ ಆಟವಾಡುತ್ತಾ, ಒಟ್ಟಿಗೆ ಓದುತ್ತಾ ಕೊನೆಗೆ ಒಟ್ಟಿಗೆ ಕೆಲಸವನ್ನೂ ಮಾಡುತ್ತಿದ್ದರು. ಈ ನಡುವೆ ಫ್ಲವರ್ ಡೆಕೋರೇಷನ್ ಕೆಲಸಕ್ಕೆ ಹೋಗ್ತಿದ್ದ ವೇಳೆ ರಾಕೇಶ ಒಂದು ಹುಡುಗಿಯನ್ನು ಲವ್ ಮಾಡ್ತಿದ್ದ. ಈ ವಿಚಾರ ಸತೀಶನಿಗೆ ಗೊತ್ತಿತ್ತೋ ಗೊತ್ತಿರಲಿಲ್ವೋ ಅನ್ನೋದನ್ನು ಹೇಳೋದಕ್ಕೆ ಸತೀಶನಿಲ್ಲ. ಆದರೆ ಸತೀಶ್ನನ್ನು ಪ್ರೇಮಪಾಶದಲ್ಲಿ ಸೆಳೆದಿದ್ದ ಯುವತಿ ಆತನ ಜೊತೆಗೆ ಮದುವೆಯನ್ನೂ ಮಾಡಿಕೊಂಡಿದ್ದಳು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸತೀಶನ ಅಪ್ಪುಗೆ ಆಕೆಗೆ ಇಷ್ಟ ಆಗಿರಲಿಲ್ಲ ಎನ್ನಲಾಗಿದೆ. ಇದೇ ಕಾರಣದಿಂದ ಹಳೇ ಗೆಳಯನನ್ನು ಸಂಪರ್ಕಿಸಿದ್ದ ಯುವತಿ ನಿನ್ನ ಜೊತೆಗೆ ಬರ್ತೀನಿ ಅಂದಿದ್ದಳು. ಇದೇ ವಿಚಾರವಾಗಿ ರಾಜಿ ಪಂಚಾಯ್ತಿ ಕೂಡ ಆಗಿತ್ತಂತೆ.

ಕೊಲೆಯಾದ ಸತೀಶ್

ದೋಸ್ತಿಗಳ ತೋಳಲ್ಲಿ ಜೂಟಾಟ ಆಡಿದ್ದಾಳೆ ಯುವತಿ..!

ಕೊಲೆಯಾದ ಸತೀಶ್ ಸಹೋದರಿ ಹೇಳುವ ಪ್ರಕಾರ ರಾಕೇಶ್ ಜೊತೆಗೆ ಸೇರಿಕೊಂಡು ಯುವತಿಯೇ ಕೊಲೆಗೆ ಸಂಚು ರೂಪಿಸಿದ್ದಾಳೆ ಎನ್ನಲಾಗ್ತಿದೆ. ಯುವತಿ ಅವನ್ ಬಿಟ್ಟು ಇವನ್ ಬಿಟ್ಟು ಅವನ್ಯಾರು ಅನ್ನೋ ಜೂಟಾಟ ಆಡಿದ್ದಾಳೆ. ಹಳೇ ಗೆಳತಿ ಸಿಗ್ತಾಳೆ ಅನ್ನೋ ಕಾರಣಕ್ಕೆ ಕೆಲಸ ಮುಗಿಸಿ ಮನೆಗೆ ವಾಪಸ್ ಬರ್ತಿದ್ದ ಸತೀಶನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ರಾಕೇಶ. ಬರೋಬ್ಬರಿ 27 ಬಾರಿ ಚಾಕುವಿನಿಂದ ಇರಿದ ಪರಿಣಾಮ ಸತೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪೊಲೀಸ್ರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ರಾಕೇಶ್ನನ್ನು ಬೈಯಪ್ಪನಹಳ್ಳಿ ಪೊಲೀಸರು  ವಶಕ್ಕೆ ಪಡೆದು ವಿಚಾರಣೆ ಮಾಡ್ತಿದ್ದಾರೆ. ಇಬ್ಬರು ಸ್ನೇಹಿತರ ಜೀವನದಲ್ಲಿ ಜೂಟಾಟ ಆಡಿರುವ ಯುವತಿಯನ್ನು ಅರೆಸ್ಟ್ ಮಾಡಬೇಕಿದೆ.

Related Posts

Don't Miss it !