ಇಬ್ಬರು ಪೇದೆಗಳ ಬಂಧನ ಇನ್ಸ್​​ಪೆಕ್ಟರ್​, ಸಬ್​ ಇನ್ಸ್​ಪೆಕ್ಟರ್​ ಸಸ್ಪೆಂಡ್​..! ಎತ್ತ ಸಾಗುತ್ತಿದೆ ನಮ್ಮ ಸಮಾಜ..?

ಪೊಲೀಸರು ಸಮಾಜದಲ್ಲಿ ರಕ್ಷಕರಾಗಿ, ಕಾನೂನು ಕಾಪಾಡುವ ಹೊಣೆ ಹೊತ್ತವರು ಆಗಿದ್ದಾರೆ. ಕಾನೂನು ಪಾಲನೆ ಹಾಗೂ ಕಾನೂನು ಪಾಲನೆ ಮಾಡುವಂತೆ ಸಮಾಜವನ್ನು ಮುನ್ನೆಡುವ ಜವಾಬ್ದಾರಿ ಪೊಲೀಸರ ಮೇಲಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಪೊಲೀಸರೇ ಕಳ್ಳತನ ಮಾಡಿದ ಪ್ರಕರಣಗಳಲ್ಲಿ ಹಾಗೂ ಕಳ್ಳರು, ಖದೀಮರಿಗೆ ಪೊಲೀಸರೇ ಕುಮ್ಮಕ್ಕು ಕೊಟ್ಟ ಪ್ರಕರಣಗಳು ಸುದ್ದಿ ಆಗುತ್ತಿರುವುದು ಸಮಾಜಕ್ಕೆ ಮಾರಕ ಎನ್ನುವ ಸಂದೇಶ ರವಾನೆ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಕೆಟ್ಟ ದಿನಗಳು ಎದುರಾಗುವ ಸಾಧ್ಯತೆಗಳು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದು ಮುಂದಿನ ಭವಿಷ್ಯದ ಸಮಾಜವನ್ನು ಕಗ್ಗತ್ತಲ ಕೂಪಕ್ಕೆ ತಳ್ಳಲಿದೆಯಾ..? ಎನ್ನುವ ಅನುಮಾನ ಮೂಡುವಂತೆ ಮಾಡುತ್ತಿದೆ. ಸಮಾಜವನ್ನು ಸರಿದಾರಿಗೆ ಹಿಡಿದು ತರಬೇಕಿದ್ದವರೇ ದುಷ್ಟ ಮಾರ್ಗವನ್ನು ತುಳಿದಿರುವುದು ಸ್ಪಷ್ಟವಾಗಿದೆ. ಇದನ್ನು ಸರಿ ದಾರಿಗೆ ತರುವುದು ಹೇಗೆ ಎನ್ನುವುದೇ ಮುಂದಿನ ಸವಾಲು.

ಮುಖ್ಯಮಂತ್ರಿ ಮನೆ ಭದ್ರತೆಗೆ ಇದ್ದವರಿಂದ ಗಾಂಜಾ ಖರೀದಿ..!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್​.ಟಿ ನಗರ ನಿವಾಸದ ಬಳಿ ಭದ್ರತೆಗೆ ನಿಯೋಜನೆಯಾಗಿದ್ದ ಇಬ್ಬರು ಪೇದೆಗಳನ್ನು ಆರ್​.ಟಿ ನಗರ ಪೊಲೀಸರು ಬಂಧನ ಮಾಡಿದ್ದಾರೆ. ಕೋರಮಂಗಲ ಪೊಲೀಸ್​ ಠಾಣೆಯಲ್ಲಿ ಕಾನ್ಸ್​ಟೇಬಲ್​ ಆಗಿದ್ದ ಸಂತೋಷ್ ಮತ್ತು ಶಿವಕುಮಾರ್ ಎಂಬುವರು ಸಿಕ್ಕಿಬಿದ್ದಿದ್ದಾರೆ. ಮುಖ್ಯಮಂತ್ರಿ ನಿವಾಸದ ಬಳಿ ಭದ್ರತೆಗೆ ನೀಯೋಜನೆ ಆಗಿದ್ದ ಇಬ್ಬರು ಪೇದೆಗಳು, ಸಂಕ್ರಾಂತಿ ಹಬ್ಬದ ಹಿಂದಿನ ದಿನ ಸಿಎಂ ಮನೆ ಸುತ್ತಮುತ್ತ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಸಾರ್ವಜನಿಕರು ಕೊಟ್ಟ ದೂರಿನ ಮೇಲೆ R T ನಗರ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ನಡೆಸಿ ಬಂಧಿಸಿದ್ದರು. ಆದರೆ, ಸರಳವಾಗಿ ಜಾಮೀನು ಸಿಗುವಂತೆ ಕೇಸ್​ ದಾಖಲಿಸಿದ್ದ ಆರೋಪದ ಮೇಲೆ ಆರ್​.ಟಿ ನಗರ ಪೊಲೀಸ್​ ಇನ್ಸ್​ಪೆಕ್ಟರ್​ ​ ಅಶ್ವಥ್​ ಗೌಡ ಹಾಗೂ ಸಬ್​​ ಇನ್ಸ್​ಪೆಕ್ಟರ್​ ವೀರಭದ್ರ ಎಂಬುವರನ್ನು ಸಸ್ಪೆಂಡ್​ ಮಾಡಿ ಕಮಲ್​ ಪಂತ್​ ಆದೇಶ ಹೊರಡಿಸಿದ್ದಾರೆ. ಜೊತೆಗೆ ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿಗೂ ಮೆಮೋ ಕೊಡಲಾಗಿದೆ. 750 ಗ್ರಾಂ ಗಾಂಜಾ ಖರೀದಿ ಮಾಡಿದ್ದ ಪೊಲೀಸ್​ ಪೇದೆಗಳನ್ನು ಬಜಾವ್​ ಮಾಡಲು ಮುಂದಾಗಿದ್ದಕ್ಕೆ ಇನ್ಸ್​​ಪೆಕ್ಟರ್​​ ಹಾಗೂ ಸಬ್​ ಇನ್ಸ್​ಪೆಕ್ಟರ್​​ ಅಮಾನತು ಮಾಡಲಾಗಿದೆ.

Read This: ಬನಶಂಕರಿ ದೇವರ ಭಕ್ತರಿಗೆ ಬಿತ್ತು ಬೆತ್ತದಲ್ಲಿ ಏಟು.. ಉಡುಪಿಯಲ್ಲಿ..!?

ಅಪ್ರಾಪ್ತರನ್ನು ಬಳಸಿ ಕಳ್ಳತನಕ್ಕೆ ಇಳಿದಿದ್ದ ಪೊಲೀಸಪ್ಪ..!

ಇತ್ತೀಚಿಗೆ ಅಪ್ರಾಪ್ತರ ಬಳಸಿ ಬೈಕ್​ ಕಳ್ಳತನ ಮಾಡಿಸ್ತಿದ್ದ ಪೇದೆಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಕಾಕೋಳು ಗ್ರಾಮದ ಹೊನ್ನಪ್ಪ ದುರುಗಪ್ಪ ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಬೈಕ್​ ಕಳ್ಳತನ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದ. 2016 ರ ಬ್ಯಾಚ್​ನ ಸಿವಿಲ್ ಕಾನ್​ಸ್ಟೇಬಲ್ ಆಗಿದ್ದ ಹೊನ್ನಪ್ಪ ಅಲಿಯಾಸ್​ ರವಿ, ರಾಜಸ್ಥಾನ ಮೂಲದ ರಮೇಶ್​ ಎಂಬಾತನ ಜೊತೆಗೆ ಸೇರಿಕೊಂಡು ಈ ಕೆಲಸ ಮಾಡ್ತಿದ್ದ. ಮಾಗಡಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕಾನ್​ಸ್ಟೇಬಲ್ ಆಗಿದ್ದ ಹೊನ್ನಪ್ಪ, ಸದ್ಯ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಅಪ್ರಾಪ್ತ ಬಾಲಕರು ಬೈಕ್​ ಕಳವು ಮಾಡಿದ ಬಳಿಕ ಬಾರ್​ನಲ್ಲಿ ಕುಳಿತು ಕುಡಿಯುತ್ತಿದ್ದ ವ್ಯಕ್ತಿಯೊಬ್ಬ ಕೇಳಿಸಿಕೊಂಡಡು ಪೊಲೀಸರಿಗೆ ಮಾಹಿತಿ ನೀಡಿದ್ದ. ಪೊಲೀಸ್​ ಕಾನ್ಸ್​ಟೇಬಲ್​ ಹೊನ್ನಪ್ಪ ಐಶಾರಾಮಿ ಜೀವನ ನಡೆಸುವ ಉದ್ದೇಶದಿಂದಲೇ ಹೀಗೆ ಅಪ್ರಾಪ್ತರನ್ನು ಬಳಸಿ ಕಲ್ಳತನ ಮಾಡುತ್ತಿದ್ದ ಎನ್ನುವ ಜೊತೆಗೆ ಕಳವು ಮಾಡುವ ವೇಳೆ ಸಿಕ್ಕಿಬಿದ್ದಾಗ ಪೊಲೀಸರ ಜೊತೆಗೆ ಮಾತನಾಡಿ ಬಿಡಿಸುತ್ತಿದ್ದ ಎನ್ನುವುದೂ ಬಯಲಾಗಿತ್ತು. ಕಳವು ಮಾಡಿದ್ದ 53 ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

Also Read: ಆನ್​ಲೈನ್​ ಶಾಪಿಂಗ್​, ಕೈ ತುಂಬಾ ಕ್ಯಾಶ್​​ ಬ್ಯಾಕ್​..!! ಇಲ್ಲಿದೆ ಕಂಪ್ಲೀಟ್​ ಮಾಹಿತಿ

ಬೇಲಿಯೇ ಎದ್ದು ಹೊಲ ಮೇಯ್ದರೆ ರಕ್ಷಣೆ ಮಾಡೋದ್ಯಾರು..?

ಪೊಲೀಸರು ಸಮಾಜದ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುವ ಕಾನೂನು ಪಾಲಕರು. ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುವುದು ಸಹಜ. ಈ ಎಲ್ಲಾ ಆರೋಪಗಳನ್ನು ಒಂದು ಕಡೆಗೆ ಇಟ್ಟರೂ ಈ ರೀತಿಯ ಡ್ರಗ್ಸ್​ ವ್ಯವಹಾರ, ಮಕ್ಕಳನ್ನು ಬಳಸಿಕೊಂಡು ಕಳ್ಳತನ ಮಾಡಿಸುವುದಕ್ಕೆ ಪೊಲೀಸರೇ ಮುಂದಾದರೆ ಸಾರ್ವಜನಿಕರನ್ನು ಕಾಪಾಡುವುದು ದೇವರಿಗೂ ಸಾಧ್ಯವಾಗುವುದಿಲ್ಲ. ಇನ್ನೂ ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ಪೊಲೀಸರು ಮಧ್ಯವರ್ತಿಗಳಾಗಿ ಕೆಲಸ ಮಾಡುವ ಕಾರಣಕ್ಕೆ ಬಡವರಿಗೆ ನ್ಯಾಯ ಸಿಗುತ್ತಿಲ್ಲ. ಹಣವುಳ್ಳವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬಡವರನ್ನು ಪೊಲೀಸರೇ ಹಿಂಸಿಸುತ್ತಾರೆ ಎನ್ನುವ ಆರೋಪವೂ ಇದೆ. ಪೊಲೀಸರ ನಿಯಂತ್ರಣಕ್ಕೆ ಬೇರೊಂದು ಮಾರ್ಗವನ್ನು ಹುಡುಕುವ ಅನಿವಾರ್ಯತೆ ಇದೆ ಎಂದೆನಿಸುತ್ತದೆ ಎನ್ನುತ್ತಾರೆ ಕಾನೂನು ತಜ್ಞರು. ಜೊತೆಗೆ ಖದೀಮ ಕೃತ್ಯಕ್ಕೆ ಮುಂದಾಗುವ ಅಥವಾ ಬೆಂಬಲಿಸುವ ಪೊಲೀಸರ ನಡುವೆ ಇನ್ನೂ ಕೂಡ ನಿಷ್ಠಾವಂತರು ಇದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ ಎನ್ನಬಹುದು.

Related Posts

Don't Miss it !