ಉಪಚುನಾವಣೆ: ಕಾಂಗ್ರೆಸ್​-ಜೆಡಿಎಸ್​ ಬಿಕ್ಕಟ್ಟು, ಬಿಜೆಪಿಗೆ ಸಕ್ಸಸ್​​..!

ರಾಜ್ಯದಲ್ಲಿ ತೆರವಾಗಿರುವ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿದೆ. ಹಾವೇರಿಯ ಹಾನಗಲ್​ ಹಾಗೂ ವಿಜಯಪುರದ ಸಿಂಧಗಿ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಹಾನಗಲ್ ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ವಿಜಯ ಸಾಧಿಸಿದ್ದ ಸಿ.ಎಂ ಉದಾಸಿ ಅಕಾಲಿಕ ಮರಣದಿಂದ ಉಪಚುನಾವಣೆ ಘೋಷಣೆಯಾಗಿದೆ. ಹಾಗೆಯೇ ಸಿಂಧಗಿ ಕ್ಷೇತ್ರದಿಂದ ಜೆಡಿಎಸ್​ನ ಎಂ.ಸಿ ಮನಗೂಳಿ jಯಭೇರಿ ಬಾರಿಸಿ ಸಚಿವರಾಗಿದ್ದರು. ಅವರ ನಿಧನದಿಂದ ತೆರವಾಗಿ ಕೇತ್ರಗಳಿಗೆ ಚುನಾವಣೆ ನಿಗದಿಯಾಗಿದೆ. ಅಕ್ಟೋಬರ್​​ 30ರಂದು ಮತದಾನ ನಡೆಯಲಿದ್ದು, ನವಂಬರ್​ 2ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.

ಕ್ಷೇತ್ರ ಉಳಿಸಿಕೊಳ್ಳುವ ಒತ್ತಡದಲ್ಲಿದೆ ಬಿಜೆಪಿ..!

ಕಳಖೆದ ಬಾರಿ ಬಿಜೆಪಿಯ ಅಭ್ಯರ್ಥಿ ಸಿ.ಎಂ ಉದಾಸಿ ಹಾನಗಲ್​ನಲ್ಲಿ ಗೆಲುವು ಸಾಧಿಸಿದ್ದರು. ಆ ಕ್ಷೇತ್ರ ಬಿಜೆಪಿಯದ್ದು ಆಗಿರುವ ಕಾರಣ ಬಿಜೆಪಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಅಷ್ಟು ಮಾತ್ರವಲ್ಲದೆ ಹಾವೇರಿ ಜಿಲ್ಲೆಯಲ್ಲಿ ಸ್ವತಃ ಸಿಎಂ ಉದಾಸಿ ಅವರ ಪುತ್ರ ಶಿವಕುಮಾರ್​ ಉದಾಸಿ ಸಂಸದರಾಗಿದ್ದು, ತನ್ನ ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದೀಗ ಶಿವಕುಮಾರ್​​ ಉದಾಸಿ ಅವರ ಪತ್ನಿ ರೇವತಿ ಉದಾಸಿ ಅವರಿಗೆ ಬಿಜೆಪಿ ಟಿಕೆಟ್​ ಎನ್ನಲಾಗ್ತಿದೆ. ಉದಾಸಿ ಕುಟುಂಬಸ್ಥರಿಗೆ ಟಿಕೆಟ್​ ನೀಡಿ ಸ್ಥಾನ ಉಳಿಸಿಕೊಳ್ಳುವುದು ಬಿಜೆಪಿಯ ತಂತ್ರಗಾರಿಕೆ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಕಳೆದ ಬಾರಿ ಕೇವಲ 6 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದ ಪರಿಷತ್​ ಸದಸ್ಯ ಶ್ರೀನಿವಾಸ ಮಾನೆ ಅವರು ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದು, ಬಿಜೆಪಿಗೆ ಸುಲಭದ ತುತ್ತಲ್ಲ ಎನ್ನುವ ಚರ್ಚೆ ಶುರುವಾಗಿದೆ.

Read this also;

ಸಿಂಧಗಿಯಲ್ಲಿ ಗೆಲ್ಲದಿದ್ದರೂ ಸೋಲಿಸಲು ಸರ್ಕಸ್..!

ವಿಜಯಪುರದ ಸಿಂಧಗಿ ಮತಕ್ಷೇತ್ರದಿಂದ ಕಳೆದ ಬಾರಿ ಎಂ.ಸಿ ಮನಗೋಳಿ 70 ಸಾವಿರ ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರು. ಆದರೆ ಈ ಬಾರಿ ಮನಗೂಳಿ ಪುತ್ರ ಅಶೋಕ್​ ಮನಗೂಳಿ ಈಗಾಗಲೇ ಕಾಂಗ್ರೆಸ್​ ಸೇರಿದ್ದಾರೆ. ಇದರ ಪರಿಣಾಮ ಈ ಬಾರಿ ಜೆಡಿಎಸ್​ ಪರಿಣಾಮಕಾರಿ ಪೈಪೋಟಿ ನೀಡಬಹುದು. ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಸೇರಿದ ಅಭ್ಯರ್ಥಿ ಅಶೋಕ್​ ಮನಗೂಳಿಯನ್ನು ಸೋಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಬಹುದು. ಸೋಲಿಸಲು ಏನು ಮಾಡಬೇಕೋ ಅದನ್ನು ಖಂಡಿತ ಮಾಡಬಹುದು. ಆದರೆ ಗೆಲ್ಲುವುದು ಕಠಿಣ ಎನ್ನುವ ಪರಿಸ್ಥಿತಿ ಕ್ಷೇತ್ರದಲ್ಲಿದೆ. ಕುರುಬ ಸಮುದಾಯದ ಮತಗಳು ಕಾಂಗ್ರೆಸ್​ ಪಾಲಾದರೆ, ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆದುಕೊಳ್ಳುವ ಕಸರತ್ತು ಈಗಾಗಲೇ ನಡೆದಿದ್ದು, ಬಿಜೆಪಿಗೆ ವರವಾಗುತ್ತಾ ಎನ್ನುವ ಲೆಕ್ಕಾಚಾರಗಳೂ ನಡೆದಿವೆ.

Read this also;

ಸರ್ಕಾರಕ್ಕೆ ಮುಖಭಂಗ, ಕೈ ತಪ್ಪಿದ ಅವಕಾಶ..!

ಹಾನಗಲ್​ನಲ್ಲಿ ಕಾಂಗ್ರೆಸ್​ ಸಿಂಧಗಿಯಲ್ಲಿ ಜೆಡಿಎಸ್​ ಎಂಬಂತೆ ಕ್ಷೇತ್ರ ಹಂಚಿಕೊಂಡು ಕಾಂಗ್ರೆಸ್​, ಜೆಡಿಎಸ್​ ಗೆಲ್ಲುವ ಮೂಲಕ ಸರ್ಕಾರಕ್ಕೆ ಮುಖಭಂಗ ಮಾಡುವ ಅವಕಾಶವಿತ್ತು. ಆದರೆ ಸಿಂಧಗಿಯಲ್ಲಿ ಕಳೆದ ಬಾರಿ ಜೆಡಿಎಸ್​ ಗೆದ್ದಿತ್ತು. ಈಗ ಆಪರೇಷನ್ ಹಸ್ತ ಮಾಡಲಾಗಿದೆ. ಇದೇ ಕಾಂಗ್ರೆಸ್ – ಜೆಡಿಎಸ್​ ಮೈತ್ರಿ ಸಾಧ್ಯವಿಲ್ಲ. ಕಳೆದ ಬಾರಿ ಹಾನಗಲ್​ನಲ್ಲಿ ಬಿಜೆಪಿ ಗೆದ್ದಿದ್ದರೂ ಇದೀಗ ಪ್ರಬಲ ನಾಯಕ ಶ್ರೀನಿವಾಸ ಮಾನೆ ಇರುವ ಕಾರಣದಿಂದ ಸುಲಭವಾಗಿ ಗೆಲುವು ಕಾಣಬಹುದು ಎನ್ನುವುದು ಕಾಂಗ್ರೆಸ್​ ಲೆಕ್ಕಾಚಾರ. ಆದರೆ ಜೆಡಿಎಸ್​ ಯಾವ ದಾಳ ಉರುಳಿಸಿ ಕಾಂಗ್ರೆಸ್​ಗೆ ಕಂಟವಾಗುತ್ತೆ ಎನ್ನುವುದನ್ನು ಹೇಳಲಾಗುವುದಿಲ್ಲ. ಅತ್ತ ಸಿಂಧಗಿಯಲ್ಲೂ ಜೆಡಿಎಸ್​ ಆಪರೇಷನ್​ ಹಸ್ತಕ್ಕೆ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್​ಗೆ ಜೆಡಿಎಸ್​ ಕಂಟಕಪ್ರಾಯವಾಗಲಿದೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಅನುಕೂಲಕರ ವಾತಾವರಣ ಇದ್ದರೂ ಜೆಡಿಎಸ್​ ನಡೆ ಕಾಂಗ್ರೆಸ್​ ಪಕ್ಷವನ್ನು ಸೋಲಿನ ಸುಳಿಗೆ ನೂಕುವುದರಲ್ಲಿ ಯಾವುದೇ ಅನುಮಾವಿಲ್ಲ. ಈ ನಡುವೆ ಉತ್ತಮ ಅಭ್ಯರ್ಥಿ ಕಣಕ್ಕಿಳಿಸಿ ಬಿಜೆಪಿ ಗೆಲುವು ಸಾಧಿಸಿಕೊಳ್ಳುವುದು ನಿಶ್ಚಿತ ಎನ್ನಲಾಗ್ತಿದೆ.

Related Posts

Don't Miss it !