ಹೆಂಡತಿ ಹಣದಲ್ಲಿ ಮೋಜು ಮಸ್ತಿ, ಸುಪಾರಿ ಕೊಟ್ಟಳು ಕಿಲಾಡಿ ಪತ್ನಿ..!

ಹೆಂಡತಿ ಕೆಲಸ ಮಾಡ್ತಾಳೆ ಅನ್ನೋದು ಗೊತ್ತಾದ್ರೆ ಕೆಲಸಕ್ಕೆ ಹೋಗದೆ ಮನೆಯಲ್ಲೇ ಕಳ್ಳಾಟ ಆಡುವ ಗಂಡಸು ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿಗಳಲ್ಲೂ ಸಿಗ್ತಾರೆ. ಹೆಂಡತಿ ಕಾಸಿನಲ್ಲೇ ಮೋಜು ಮಸ್ತಿ ಮಾಡಿಕೊಂಡು ಬದುಕು ಸಾಗಿಸ್ತಾರೆ. ಆದರೆ ಇಲ್ಲೊಬ್ಬ ಐನಾತಿ ತನ್ನ ಹೆಂಡತಿ ಕಾಸಿನಲ್ಲೇ ಬೇರೆ ಹುಡುಗಿಯರ ಜೊತೆ ಮೋಜು ಮಸ್ತಿ ಮಾಡುತ್ತಾ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಹುಳಿಮಾವು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಂಡನ ರಾಸಲೀಲೆಯನ್ನು ಕಣ್ಣಾರ ಕಂಡ ಪತ್ನಿ ಸಾಕ್ಷಿ ಸಮೇತ ದೂರು ನೀಡಿದ್ದಾರೆ. ತನ್ನ ಪೋಲಿ ಗಂಡನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಆದರೆ ಗಂಡನ ಕಾಮಲೀಲೆ ಗೊತ್ತಾಗಿದ್ದಕ್ಕೆ ಕಾರಣ ಆತನೇ ಮಾಡಿದ ಎಡವಟ್ಟು.

ಗಂಡ ಮಾಡಿದ ಎಡವಟ್ಟು ಏನು..? ಹೆಂಡ್ತಿಗೆ ಸಿಕ್ಕಿ ಬಿದ್ದಿದ್ಹೇಗೆ..?

ಹೆಂಡತಿ ಹಣದಲ್ಲೇ ಕಂಡ ಕಂಡ ಕನ್ಯಾಮಣಿಗಳ ಜೊತೆಗೆ ಚಕ್ಕಂದ ಆಡುತ್ತಿದ್ದ ಎಡ್ರಿಲ್ ತೈಮಲ್ ಡಿಕುನ್ಹಾ, ಫೋಟೋಗೆ ಪೋಸ್ ಕೊಡ್ತಿದ್ದ. ಬಲೆ ಬೀಸಿದ ಹೆಣ್ಣುಗಳ ಜೊತೆಗಿನ ಖಾಸಗಿ ಕ್ಷಣಗಳನ್ನು ವೀಡಿಯೋ ಕೂಡ ಮಾಡಿಕೊಳ್ತಿದ್ದ. ಒಮ್ಮೊಮ್ಮೆ ಪತ್ನಿಯನ್ನು ಬೇರೆಯವರ ಜೊತೆಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪುಸಲಾಯಿಸುತ್ತಿದ್ದ. ಈತನ ವರ್ತನೆಯನ್ನು ಬೇಸತ್ತ ಪತ್ನಿ ಎಡ್ರಿಲ್ ತೈಮಲ್ ಡಿಕುನ್ಹಾ ಚಲನವಲನಗಳ ಮೇಲೆ ಕಣ್ಣಿಟ್ಟಿದ್ರು. ಆ ಬಳಿಕ ಮೊಬೈಲ್​ನಲ್ಲಿ ‘ಆ ವೀಡಿಯೋ’ಗಳ ಬಂಡಲ್​ ಹೆಂಡತಿ ಕೈಗೆ ಸಿಗ್ತಿದ್ದ ಮನೆಯನ್ನೇ ಬಿಟ್ಟು ಜಾಗ ಖಾಲಿ ಮಾಡಲು ಚಿಂತನೆ ನಡೆಸಿದ್ದ. ಅಷ್ಟರಲ್ಲಿ ಹೆಂಡತಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಆಗಿತ್ತು. ಅತ್ತ ಮತ್ತೊಂದು ಪ್ರಕರಣದಲ್ಲಿ ಗಂಡನಿಗೆ ಸೈಲೆಂಟ್​ ಆಗಿ ಸ್ಕೆಚ್​ ಹಾಕಿದ್ದಾಳೆ ಪತ್ನಿ.

ಗಂಡನ ಪ್ರಾಣಕ್ಕೆ 40 ಲಕ್ಷ ಬೆಲೆ ಕಟ್ಟಿದ ಹೆಂಡತಿ..!

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಈ ರೀತಿಯ ಘಟನೆ ಒಂದು ನಡೆದಿದೆ. ಗಂಡನ ಹತ್ಯೆಗೆ ಸುಪಾರಿ ಕೊಟ್ಟ ಹೆಂಡತಿ ಜೈಲು ಪಾಲು ಆಗಿದ್ದಾಳೆ. ಗಂಡನ ಜೊತೆಯಲ್ಲೇ ಇದ್ದುಕೊಂಡು ಹತ್ಯೆಗೆ ಸುಪಾರಿ ಕೊಟ್ಟಿದ್ದಾಳೆ. ಬರೋಬ್ಬರಿ ₹40 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ ಹೆಂಡತಿ. ಜೊತೆಗೆ ಸುಪಾಯಿ ಪಡೆದು 10 ಲಕ್ಷ ರೂಪಾಯಿ ಮುಂಗಡ ಹಣ ಪಡೆದಿದ್ದ ಆರೋಪಿಗಳಾದ ಮಮತಾ, ಮೌಲಾ, ನಯೀಮ್, ತಸ್ಲೀಮಾ ಎಂಬಾಕೆಯನ್ನೂ ಕೂಡ ಪೋಲೀಸರು ಬಂಧಿಸಿದ್ದಾರೆ. ಆರೋಪಿ ಮಮತಾ ತನ್ನ ಮೈಮೇಲಿದ್ದ ಒಡವೆಯನ್ನು ಮಾರಾಟ ಮಾಡಿ 10 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಿದ್ದಳು ಎನ್ನುವುದು ಬಯಲಾಗಿದೆ. ಅಡ್ವಾನ್ಸ್​ ಪಡೆದ ಹಣದಲ್ಲಿ ಒಂದು ಕಾರು ಖರೀದಿ ಮಾಡಿದ್ದರು ಅನ್ನೋದು ಕೂಡ ಗೊತ್ತಾಗಿದೆ. ಆದರೆ ಹೆಂಡ್ತಿ ಸುಪಾರಿ ನೀಡೋದಕ್ಕೆ ಕಾರಣ ಮಾತ್ರ ವಿಚಿತ್ರವಾಗಿದೆ.

ಅಕ್ರಮ ಸಂಬಂಧಕ್ಕೆ ಕೊಲೆ ಮಾಡೋದು ಕಾಮನ್​..! ಬಟ್​..

ಅಕ್ರಮ ಸಂಬಂಧದ ವಿಚಾರ ಬಂದಾಗ ಮಾತ್ರ ಗಂಡ ಹೆಂಡತಿಯನ್ನು ಕೊಲೆ ಮಾಡ್ತಾರೆ. ಹೆಂಡ್ತಿಯನ್ನು ಗಂಡ ಮಾಡ್ತಾರೆ ಎನ್ನುವ ಸುದ್ದಿ ಮಾಮೂಲು. ಆದರೆ ಈ ಪ್ರಕರಣದಲ್ಲಿ ಗಂಡನಿಗಾಗಲಿ ಅಥವಾ ಹೆಂಡತಿಗಾಗಿಲಿ ಯಾವುದೇ ಅಕ್ರಮ ಸಂಬಂಧ ಇರಲಿಲ್ಲ. ಆದರೆ ಗಂಡ ಯಾವಾಗಲೂ ಬೈತಾನೆ ಎನ್ನುವ ಕಾರಣಕ್ಕೆ ಕೊಂದು ಬಿಡುವ ನಿರ್ಧಾರಕ್ಕೆ ಬಂದಿದ್ದಳು ಮಮತಾ. ಸಂಬಂಧಿಕರ ಬಳಿ ಚೀಟಿ ಹಾಕಿಕೊಂಡು ನಷ್ಟಕ್ಕೆ ಒಳಗಾಗಿದ್ದ ಹೆಂಡತಿ ಮಮತಾಗೆ ಗಂಡ ಬೈಯ್ತಿದ್ದ. ಸುಮಾರು 20 ಲಕ್ಷದಷ್ಟು ಸಾಲವನ್ನು ಗಂಡನೇ ತೀರಿಸಿದ್ದ. ತಾನು ಮಾಡಿದ್ದ ತಪ್ಪನ್ನು ಮರೆತಿದ್ದ ಪತ್ನಿ ಮಮತಾ ಗಂಡನ ಬೈಗುಳದಿಂದ ಬೇಸತ್ತ ಹೆಂಡತಿ ಸುಪಾರಿ ನೀಡಿದ್ದಳು. ಮೇ 26 ರಂದು ಗಂಡನ ಮೇಲೆ ದಾಳಿ ಕೂಡ ಆಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ರು ಹೆಂಡ್ತಿಯನ್ನೇ ಅರೆಸ್ಟ್​ ಮಾಡಿ ಅಸಲಿ ಕಹಾನಿ ಬಿಚ್ಚಿಟ್ಟಿದ್ದಾರೆ.

Related Posts

Don't Miss it !