ನಾಯಿ ಸಾಕುವುದು ತಪ್ಪಾ..? ನಾಯಿಗೆ ಹೊಡೆಯುವುದು ತಪ್ಪಾ..? ಕೇಸ್ ಹಾಕಿದ್ಯಾಕೆ..?

ಬೆಂಗಳೂರಿನಲ್ಲಿ ನಾಯಿ ಸಾಕುವುದು ಶ್ರೀಮಂತಿಕೆಯ ಪ್ರತೀಕವಾಗಿದೆ. ಯಂತ್ರಗಳೊಂದಿಗೆ ಬದುಕು ರೂಪಿಸಿಕೊಂಡಿರುವ ಬೆಂಗಳೂರಿನ ಜನ ನಾಯಿ ಸಾಕುತ್ತ ಕೆಲಸದ ಒತ್ತಡ ನಿವಾರಣೆಗೆ ಪ್ರಯತ್ನಿಸುತ್ತಾರೆ. ಅದೇ ರೀತಿ ಮನೆಯಲ್ಲಿ ಒಬ್ಬಂಟಿ ಜೀವನ ಕಷ್ಟ ಎನಿಸಿದಾಗಲೂ ನಾಯಿಯ ಜೊತೆ ಕಾಲ ಕಳೆಯುವ ಅದೆಷ್ಟೋ ಜೀವಗಳು ಬೆಂಗಳೂರಿನಲ್ಲಿವೆ. ಈ ನಾಯಿ ಸಾಕುವುದು ಶೋಕಿಯ ಜೀವನವೂ ಹೌದು. ಆದರೆ ಈ ರೀತಿ ನಾಯಿ ಸಾಕುವಾಗ ಅದಕ್ಕೇ ಪ್ರತ್ಯೇಕ ವ್ಯವಸ್ಥೆ ಮಾಡಿರುತ್ತಾರೆ. ರಾತ್ರಿ ವೇಳೆಯಲ್ಲಿ ಬೇರೆಯವರ ಮನೆ ಬಾಗಿಲಿಗೆ ಕಸ ಹಾಕಿಸುವುದು ಇವರ ದೊಡ್ಡ ಸಮಸ್ಯೆ. ಇನ್ನೂ ಒಂದು ರೀತಿಯಲ್ಲಿ ನಾಯಿ ಸಾಕುವ ಜನ ಬೆಂಗಳೂರಿನಲ್ಲಿ ಇದ್ದಾರೆ.

ನಾಯಿ ವಿಚಾರಕ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು FIR..!!

ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ನಾಯಿ ವಿಚಾರಕ್ಕೆ ದೂರು ದಾಖಲಾಗಿದೆ. ಎರಡು ಕುಟುಂಬಗಳ ನಡುವೆ ನಡೆದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನಾಯಿಯನ್ನು ಕಲ್ಲಿನಿಂದ ಹೊಡೆದಿದ್ದಾರೆ ಎಂದು ದೂರು ದಾಖಲು ಮಾಡಲಾಗಿದೆ. ಮಲ್ಲೇಶ್ವರಂನ ಆರ್.ವಿ.ಎನ್ಕ್ಲೈವ್ ಅಪಾರ್ಟ್ಮೆಂಟ್ ನಿವಾಸಿಗಳು ನಾಯಿ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಪೊಲೀಸರ ಬಳಿಗೆ ಬಂದಿದ್ದಾರೆ. ಮೃದಲಾ ಮತ್ತು ಪ್ರಭಾಕರ್ ಎಂಬುವವರ ಮೇಲೆ ದೂರು ದಾಖಲು ಮಾಡಲಾಗಿದೆ. ನಾಯಿಯನ್ನು ಕಲ್ಲಿನಿಂದ ಒಡೆದು ಸಾಯಿಸಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬೀದಿ ನಾಯಿಗೆ ಊಟ ಹಾಕಿ ಪೋಷಿಸುವುದು ಸರಿಯೇ..?

ಅನುರಾಧ ಎಂಬುವರು ಸಾಕಷ್ಟು ವರ್ಷದಿಂದ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಪತ್ನಿ ನಾಯಿಗಳಿಗೆ ಊಟ ಹಾಕುವ ಕೆಲಸಕ್ಕೆ ಪತಿ ಶ್ರೀನಿವಾಸ್ ಕೂಡ ಕೈ ಜೋಡಿಸಿದ್ದಾರೆ. ಸಾಕಷ್ಟು ವರ್ಷಗಳಿಂದ ನಾಯಿಗಳಿಗೆ ಊಟ ಹಾಕುವ ಕಾರಣ, ಬೀದಿ ನಾಯಿಗಳು ಗುಂಪು ಗುಂಪಾಗಿ ಬರುತ್ತವೆ. ಈ ವೇಳೆ ನಾಯಿಯನ್ನು ಕಲ್ಲಿನಿಂದ ಹೊಡೆದಿದ್ದಾರೆ ಎಂದು ಅನುರಾಧ ದೂರು ದಾಖಲಿಸಿದ್ದಾರೆ. ಆದರೆ, ಅನುರಾಧ ಮತ್ತು ಪತಿ ಶ್ರೀನಿವಾಸ್ ಬೀದಿನಾಯಿಯನ್ನು ಸಾಕಿಕೊಂಡಿದ್ದಾರೆ. ಪ್ರತಿದಿನ ಬೀದಿ ನಾಯಿಗೆ ಊಟ ಹಾಕಿಕೊಂಡು ಸುತ್ತ ಮುತ್ತ ವಾಸವಿರುವ ಜನರಿಗೆ ತೊಂದರೆ ನೀಡ್ತಿದ್ದಾರೆ. ನಾಯಿ ಹಲವಾರು ಬಾರಿ ಕಚ್ಚಲು ಬಂದಿರುತ್ತದೆ. ಈ ಬಾರಿ ಕೂಡ ಕಚ್ಚಲು ಬಂದಾಗ ಅದನ್ನು ಚೀಲದಿಂದ ಓಡಿಸಿದ್ದೇವೆ. ಬೀದಿ ನಾಯಿಗೆ ಊಟ ಹಾಕುವ ಕಾರಣದಿಂದ ಸಮಸ್ಯೆ ಆಗ್ತಿದೆ ಎಂದು ಹೇಳಲು ಅನುರಾಧ ಮತ್ತು ಶ್ರೀನಿವಾಸ್ ಮನೆಗೆ ಹೋಗಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಲಾಗಿದೆ.

ನಾಯಿ ಸಾಕುವುದು ತಪ್ಪಲ್ಲ, ಬೀದಿನಾಯಿಗೆ ಬಿಸ್ಕೆಟ್ ಹಾಕುವುದು ತಪ್ಪು..!

ಮನೆಯಲ್ಲಿ ಹೆತ್ತ ತಂದೆ ತಾಯಿ ನೋಡಿಕೊಳ್ಳಲು ಆಗದವರು ಹಿಂಡು ಹಿಂಡು ನಾಯಿಗಳಿಗೆ ಬಿಸ್ಕೆಟ್ ಹಾಕುವ ಕೆಲಸ ಮಾಡ್ತಾರೆ. ಕೆಲವರು ಕೆಜಿಗಟ್ಟಲೆ ಅನ್ನವನ್ನು ಬೀದಿ ನಾಯಿಗಳಿಗೆ ಹಾಕುವ ಕೆಲಸ ಮಾಡ್ತಾರೆ. ಅದು ಶ್ರೇಷ್ಠ ಕೆಲಸವೆಂದು ಭಾವಿಸುತ್ತಾರೆ. ಆದರೆ ನಾಯಿಗಳ ಹಿಂಡಿಗೆ ಅನ್ನ ಹಾಕುವುದು, ಬಿಸ್ಕೆಟ್ ಹಾಕುವುದು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೃತ್ಯ ಎಂಬುದನ್ನು ಕಾನೂನು ಮೂಲಕ ತಿಳಿಸುವ ಕೆಲಸ ಮಾಡಬೇಕಿದೆ. ಯಾಕೆಂದರೆ ಮೊನ್ನೆಯಷ್ಟೇ ರಾಮನಗರದಲ್ಲಿ ನಾಯಿಗಳು ಶಾಲೆಯಲ್ಲಿದ್ದ ವಿದ್ಯಾರ್ಥಿನಿ ಕಾಲು ಕಚ್ಚಿ ಹಾಕಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗದಲ್ಲಿ ನಾಯಿಗಳ ದಾಳಿ ಹೆಚ್ಚಾಗಿದೆ. ಇವರು ಊಟ ಹಾಕುವುದು ಸಂತಾನೋತ್ಪತ್ತಿ ಹೆಚ್ಚಾಗಲು ಒಂದು ಕಾರಣವಾದರೆ ಒಂದುದಿನ ಊಟ ಹಾಕುವುದು ತಪ್ಪಿದರೆ ಊಟಕ್ಕಾಗಿ ನಾಯಿಗಳು ಸಣ್ಣ ಮಕ್ಕಳನ್ನೇ ಕೊಂದು ತಿನ್ನುವ ಸಾಧ್ಯತೆಯೂ ಇರುತ್ತದೆ. ಅತ್ತೆ ಸಾಕುವ ಬದಲು ಕೊತ್ತಿ ( ಬೆಕ್ಕು ) ಸಾಕು. ತಾಯಿ ಸಾಕುವ ಬದಲು ಒಂದು ನಾಯಿ ಸಾಕು ಎನ್ನುವ ಗಾಧೆ ಮಾತು ಈಗ ಬದಲಾಗಬೇಕಿದೆ. ಕಾಲ ಬದಲಾಗಿದೆ. ಪ್ರಾಣಿಗಳ ಮೇಲೆ ವಿಶ್ವಾಸವಿರಲಿ. ಆದರೆ ಸಮಾಜದ ಕಡೆಗೂ ಕಾಳಜಿ ನಿಮ್ಮದಾಗಿರಲಿ.

Related Posts

Don't Miss it !