ಪೋಷಕರು ಮಾಡಿದ ಚಿಕ್ಕ ತಪ್ಪು ಮಕ್ಕಳ ಪ್ರಾಣವನ್ನೇ ಕಸಿದುಕೊಳ್ತು..!

ಪುಟ್ಟ ಪುಟ್ಟ ಮಕ್ಕಳು ಏನು ಕೇಳಿದರೂ ಇಲ್ಲ ಎನ್ನಲು ಮನಸ್ಸಾಗುವುದಿಲ್ಲ. ಇದಕ್ಕೆ ಕಾರಣ ಆರತಿಗೆ ಒಂದು ಕೀರ್ತಿಗೆ ಒಂದು ಎನ್ನುವಂತೆ ಮಕ್ಕಳನ್ನು ಸಾಕಿಕೊಂಡಿರುತ್ತಾರೆ. ಮಕ್ಕಳು ತನ್ನ ಆಸೆಗೆ ತಕ್ಕಂತೆ ಕೇಳಬಾರದ್ದನ್ನೂ ಕೇಳುತ್ತಾರೆ. ಅವರ ಆಸೆಗೆ ಬೇಡ ಎನ್ನಲಾಗದ ಪೋಷಕರು ಪೂರೈಸುತ್ತಾರೆ. ಆದರೆ ಅದರ ಬಗ್ಗೆ ಎಚ್ಚರಿಕೆ ವಹಿಸುವುದನ್ನು ಮರೆತುಬಿಡುತ್ತಾರೆ. ಇಷ್ಟು ಸಣ್ಣ ಜವಾಬ್ದಾರಿ ತನ್ನ ಕರುಳ ಬಳ್ಳಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಸಣ್ಣ ಆಲೋಚನೆಯೂ ಅವರಲ್ಲಿ ಇರುವುದಿಲ್ಲ. ಆದರೆ ಮಕ್ಕಳನ್ನು ಕಳೆದುಕೊಂಡ ಮೇಲೆ ಗೋಳಾಡುವುದು ಸಾಮಾನ್ಯವಾಗಿರುತ್ತದೆ.

5 ರೂಪಾಯಿ ನಾಣ್ಯದಿಂದ ಮಗು ಸಾವು..!

ಮೈಸೂರು ಜಿಲ್ಲೆಯಲ್ಲಿ ಕರುಳು ಚುರ್​ ಎನ್ನುವ ಘಟನೆ ನಡೆದಿದ್ದು, ಐದು ರೂಪಾಯಿ ನಾಣ್ಯವನ್ನು ನುಂಗಿದ ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಆಯರಹಳ್ಳಿ ಗ್ರಾಮದ ನಾಲ್ಕು ವರ್ಷದ ಹೆಣ್ಣು ಮಗು ಖುಷಿ ಸಾವನ್ನಪ್ಪಿದ್ದಾಳೆ ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿದ್ದ ಮಗು ಖುಷಿ ಶುಕ್ರವಾರ ನಾಣ್ಯದೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ 5 ನುಂಗಿದ ಮಗು ಖುಷಿ ಸಾವನ್ನಪ್ಪಿದ್ದಾಳೆ. ಮಗು ಕಾಯಿನ್​ ನುಂಗಿದ ಬಳಿಕ ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆ ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ.

ಖುಷಿ ಎಕ್ಸ್​ರೇ ಹಾಗೂ ಮುದ್ದು ಖುಷಿ

Read this also;

ಜೋಕಾಲಿ ಆಡುವಾಗ ಬಾಲಕ ಸಾವು..!

ಮೈಸೂರಿನಲ್ಲಿ 4 ವರ್ಷದ ಪುಟಾಣಿ ಹೆಣ್ಣು ಮಗಳು ಸಾವನ್ನಪ್ಪಿದ ಬೆನ್ನಲ್ಲೇ ಹಾಸನದಲ್ಲಿ ಜೋಕಾಲಿ ಆಡುವ ವೇಳೆ ಹಗ್ಗಕ್ಕೆ ಸಿಲುಕಿ 8 ವರ್ಷದ ಮನೋಜ್ ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬೆಂಡೆಕೆರೆ ಗ್ರಾಮದಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕ ಸಾವನ್ನಪ್ಪಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಜೋಕಾಲಿ ಆಡುತ್ತಿದ್ದ ಹೋಗಿ, ಹಗ್ಗಕ್ಕೆ ಸಿಲುಕಿಕೊಂಡು ಬಾಲಕ ಸಾವನ್ನಪ್ಪಿದ್ದಾನೆ. ಲೋಕೇಶ್ ಮತ್ತು ನೇತ್ರಾವತಿ ದಂಪತಿ ಪುತ್ರ ಮನೋಜ್ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆಗಾಗಿ ಅರಸೀಕೆರೆ ಜಯಚಾಮರಾಜೇಂದ್ರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಮನೋಜ್
Read this also

ಪೋಷಕರ ಸಣ್ಣ ಬೇಜವಾಬ್ದಾರಿಯೇ ಸಾವಿಗೆ ಕಾರಣ..!

ಮಕ್ಕಳು ಖುಷಿಯಾಗಿ ಆಟವಾಡಲಿ ಎನ್ನುವುದು ಪೋಷಕರ ಆಸೆಯಾಗಿತ್ತದೆ. ಆದರೆ ಜವಾಬ್ದಾರಿಯನ್ನು ಮರೆಯುವುದೇ ಈ ಸಾವುಗಳಿಗೆ ಪ್ರಮುಖ ಕಾರಣ. ಪುಟ್ಟ ಮಕ್ಕಳ ಕೈಗೆ ನಾಣ್ಯಗಳನ್ನು ಕೊಡುವುದೇ ತಪ್ಪು. ಆದರೂ ಅಂಗಡಿಯಲ್ಲಿ ಏನಾದರು ತೆಗೆದುಕೊಳ್ಳಲಿ ಎನ್ನುವ ಉದ್ದೇಶದಿಂದ ಕೊಟ್ಟಿರುತ್ತಾರೆ. ಆದರ ಬದಲು ಅಂಗಡಿಯ ತಿನಿಸನ್ನೇ ತಂದು ಕೊಟ್ಟಿದ್ದರೆ ಈ ಪುಟಾಣಿ ಬಾಲಕಿಯ ಪ್ರಾಣ ಉಳಿಯುತ್ತಿತ್ತು. ಇನ್ನೂ ಮಗ ಆಟವಾಡಲಿ ಎನ್ನುವ ಕಾರಣಕ್ಕೆ ಸೀರೆಯಲ್ಲಿ ಜೋಕಾಲಿ ಕಟ್ಟುವುದು ಸರಿಯಷ್ಟೆ. ಆದರೆ ಆಟವಾಡಿಸುವ ಜವಾಬ್ದಾರಿ ಕೂಡ ಪೋಷಕರ ಮೇಲಿರುತ್ತದೆ ಎನ್ನುವುದನ್ನು ಮರೆಯುತ್ತೇವೆ. ಸಾಕಷ್ಟು ಮಕ್ಕಳು ಹೀಗೆ ಆಡುವ ವೇಳೆ ಸುತ್ತಿಕೊಂಡು ಪ್ರಾಣ ಹೋಗುವ ಸಂಗತಿಗಳು ಮಾಮೂಲಾಗಿವೆ.

Related Posts

Don't Miss it !