ಇಂಡೋ – ಪಾಕ್​ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕದ 2 ವಿಚಾರಗಳು ಪ್ರಸ್ತಾಪ..!

ಭಾರತದ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವುದು ದಾಖಲಿಸಿದ ಭಾರತ, ಟಿ-20 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿತ್ತು. ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ನಡೆದ ಪಂದ್ಯದಲ್ಲಿ 160 ರನ್​ಗಳ ಟಾರ್ಗೆಟ್​ ಪಡೆದ ಭಾರತ, ವಿರಾಟ್​ ಕೊಹ್ಲಿಯ ಭರ್ಜರಿ ಆಟದ ನೆರವಿನಿಂದ ಗೆಲುವಿನ ದಡ ಮುಟ್ಟಿದ್ದು ಎಲ್ಲರಿಗೂ ಗೊತ್ತಿರೋ ಸಂಗತಿ. ದೀಪಾವಳಿಗೂ ಮುನ್ನ ಪಾಕ್​ ಎದುರು ಸೋಲುಂಡು ಭಾರತೀಯರಿಗೆ ನಿರಾಸೆ ಮಾಡಲಿಲ್ಲ ಭಾರತೀಯ ಕ್ರಿಕೆಟ್​ ಟೀಂ. ಇದರ ನಡುವೆ ಭಾರತ ಹಾಗು ಪಾಕಿಸ್ತಾನದ ನಡುವಿನ ಹೈ ವೋಲ್ಟೇಜ್​​ ಪಂದ್ಯದಲ್ಲಿ ಕರ್ನಾಟಕದ ಎರಡು ವಿಚಾರಗಳು ಪ್ರಸ್ತಾಪ ಆಗಿವೆ.

ಕ್ರಿಕೆಟ್​​ ವೀಕ್ಷಣೆ ವೇಳೆ ಕನ್ನಡಿಗ ಕಿಚ್ಚ ಸುದೀಪ್​ ಕಾಣಿಸಿಕೊಂಡಿದ್ದು ವಿಶೇಷ. ಇದಲ್ಲದೆ ಬಾಗಲಕೋಟೆಯಲ್ಲಿ ಏಮ್ಸ್ ಅಸ್ಪತ್ರೆ ಸ್ಥಾಪಿಸಬೇಕು ಎಂದು ವಿದೇಶದಲ್ಲೂ ಕೂಗು ಕೇಳಿಬಂದಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ನಡೆದ ಇಂಡೋ – ಪಾಕ್ ಪಂದ್ಯದ ವೇಳೆ ನಾಮಫಲಕ ಹಿಡಿದು ಏಮ್ಸ್​​ ಆಸ್ಪತ್ರೆ ಸ್ಥಾಪಿಸಬೇಕು ಎಂದು ಕೂಗು ಕೇಳಿಬಂದಿದೆ. ಬಾಗಲಕೋಟೆ ನಿವಾಸಿ ಆಗಿರುವ ಹೃಷಿಕೇಶ್ ತಿಮ್ಮನಾಯ್ಕ ಅವರು ಪ್ಲಗ್​ ಕಾರ್ಡ್​ ಹಿಡಿದು ಬೆಂಬಲ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಡುವೆ “ಏಮ್ಸ್ ಫಾರ್ ಬಾಗಲಕೋಟೆ, ಇಂಡಿಯಾ” ಎಂದು ನಾಮಫಲಕ ಪ್ರದರ್ಶನ ಮಾಡಿದ್ದಾರೆ. ಮೆಲ್ಬೋರ್ನ್​ನಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಬಾಗಲಕೋಟೆ ಹೃಷಿಕೇಶ್, ತವರೂರಿನ ಬಗ್ಗೆ ಅಭಿಮಾನ ತೋರಿಸಿದ್ದಾರೆ.

ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಗಂಧದ ಗುಡಿ ಸಿನಿಮಾ ಇದೇ ಅಕ್ಟೋಬರ್​ 28ಕ್ಕೆ ತೆರಮೇಲೆ ಬರುವುದಕ್ಕೆ ಸಿದ್ದವಾಗಿದ್ದು, ಈಗಾಗಲೇ ಪ್ರೀ ರಿಲೀಸ್​ ಶೋ ಕೂಡ ನಡೆದಿದೆ. ಪುನೀತ್​ ರಾಜ್​ಕುಮಾರ್​​ ನಿಧನರಾದ ಅಕ್ಟೋಬರ್​​ 29ಕ್ಕೂ ಒಂದು ದಿನ ಮುಂಚಿತವಾಗಿ ಅಕ್ಟೋಬರ್​ 28ರಂದು ತೆರೆಯ ಮೇಲೆ ಪುನೀತ್​ ರಾಜ್​ಕುಮಾರ್​ ನಿಜಜೀವನದ ವ್ಯಕ್ತಿತ್ವ ಪ್ರದರ್ಶನ ಆಗಲಿದೆ. ಇದರ ಅಂಗವಾಗಿ ಗಂಧದ ಗುಡಿ ಸಿನಿಮಾ ಪೋಸ್ಟರ್​ ಹಿಡಿದು ಅಪ್ಪು ಫಾರ್​​ ಎವೆರ್ ಎಂದು ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಕನ್ನಡಿಗರು ಕಾಣಿಸಿಕೊಂಡು, ಕರ್ನಾಟಕದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ.

Related Posts

Don't Miss it !