ಉತ್ತರ ಕರ್ನಾಟಕ ಇಬ್ಬರ ಮೇಲೆ ಅತ್ಯಾಚಾರ..! ಹಳ್ಳ ಹಿಡಿತಾ ಕಾನೂನು..?

ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚೆಚ್ಚು ವರದಿ ಆಗುತ್ತಲೇ ಇವೆ. ಪೊಲೀಸರು ಅತ್ಯಾಚಾರ ಘಟನೆಗಳು ನಡೆದ ಬಳಿಕ ವಿಚಾರಣೆ ನಡೆಸಿ ಆರೋಪಿಗಳ ಬಂಧನ ಮಾಡುತ್ತಲೇ ಇದ್ದಾರೆ. ಆದರೆ ಕಾನೂನು ಕಠಿಣವಾಗಿ ಇಲ್ಲದ ಕಾರಣ ಅಪರಾಧಕ್ಕೆ ಕಠಿಣ ಶಿಕ್ಷೆ ಜಾರಿಯಾಗುವುದು ಕಷ್ಟವಾಗುತ್ತಿದೆ. ಅಪರಾಧ ಮಾಡುವ ಮುನ್ನ ದುಷ್ಕರ್ಮಿಗಳ ಮನಸಲ್ಲಿ ಭಯ ಇಲ್ಲದಂತಾಗಿದೆ. ಅಪರಾಧ ಚಟುವಟಿಗಳು ಎಗ್ಗಿಲ್ಲದೆ ನಡೆಯುತ್ತಿವೆ. ಕಾನೂನು ಮೂಲಕ ಕಠಿಣ ಶಿಕ್ಷೆಗೆ ಗುರಿ ಮಾಡುತ್ತಾರೆ ಎನ್ನುವ ಆಲೋಚನೆಯೂ ಅಪರಾಧಿಗಳಲ್ಲಿ ಇಲ್ಲದಂತಾಗಿದೆ. ಇದೀಗ ಉತ್ತರ ಕರ್ನಾಟಕ ಭಾಗದ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಿರುವ ವರದಿಯಾಗಿದೆ. ಅದರಲ್ಲಿ ಓರ್ವ ಮಹಿಳೆ ಸರ್ಕಾರಿ ನೌಕರಸ್ಥೆ. ಇನ್ನೊಬ್ಬರು ಟೆಕ್ಕಿ.

ಲಿಫ್ಟ್​ ಕೊಡುವ ನೆಪದಲ್ಲಿ ಮಹಿಳೆ ಮೇಲೆ ರೇಪ್​..!

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕುರಕುಂಟ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಲಿಫ್ಟ್ ಕೊಡುವ ನೆಪದಲ್ಲಿ ಮಹಿಳೆಯನ್ನು ಬೈಕ್​ಗೆ ಹತ್ತಿಸಿಕೊಂಡ ಆರೋಪಿ ರಸ್ತೆ ಬದಿಯಲ್ಲೇ ಅತ್ಯಾಚಾರ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಸರಕಾರಿ ಸಿಬ್ಬಂದಿ ಆಗಿರುವ ಮಹಿಳೆ ಕೆಲಸ ಮುಗಿಸಿ ಊರಿಗೆ ತೆರಳಲು ಸಂಜೆ ವೇಳೆ ಬಸ್​ಗಾಗಿ ಕಾಯುತ್ತಿದ್ದರು ಎನ್ನಲಾಗಿದೆ. ಬಸ್ ಬಾರದೆ ಇದ್ದ ಕಾರಣದಿಂದ ಅಪರಿಚಿತ ಯುವಕನ ಬೈಕ್​ ಬೈಕ್ ಹತ್ತಿ ಊರು ತಲುಪುವ ಮನಸ್ಸು ಮಾಡಿದ್ದಾರೆ. ದಾರಿ ನಡುವೆ ಸೇತುವೆ ಬಳಿ ಬೈಕ್ ನಿಲ್ಲಿಸಿದ ಕಾಮುಕ ಬೈಕ್​ ಸವಾರ ಚಾಕು ತೋರಿಸಿ ಅತ್ಯಾಚಾರ ಮಾಡಿದ್ದಾನೆ.

Read this also;

2 ತಿಂಗಳ ಬಳಿಕ ಬೆಳಕಿಗೆ ಬಂದ ಅತ್ಯಾಚಾರ..!

ಅತ್ಯಾಚಾರ ನಡೆದು ಬರೋಬ್ಬರಿ 2 ತಿಂಗಳು ಕಳೆದು ಹೋಗಿದೆ. ಅತ್ಯಾಚಾರ ಘಟನೆ ಬಳಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ 15 ದಿನಗಳ ಹಿಂದೆ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದರು ಎನ್ನಲಾಗಿದೆ. ಆ ಬಳಿಕ ಕರಕುಂಟ ಪೊಲೀಸರಿಗೆ ದೂರಿನ ಪ್ರತಿ ರವಾನೆ ಆಗಿದ್ದು, ಅಖಾಡಕ್ಕೆ ಇಳಿದ ಕರಕುಂಟ ಪೊಲೀಸರು ವಿಚಾರಣೆ ನಡೆಸಿ ಆರೋಪಿ ಆರೋಪಿ 26 ವರ್ಷದ ನಾಗರಾಜ್ ಎಂಬಾತನನ್ನು ಬಂಧಿಸಿದ್ದಾರೆ. ಸೇಡಂ ತಾಲೂಕಿನ ಇಂಜಳ್ಳಿ ಗ್ರಾಮದ ವ್ಯಕ್ತಿಯಾಗಿದ್ದು, ಸದ್ಯಕ್ಕೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಮೇ 24 ರಂದು ಅತ್ಯಾಚಾರ ನಡೆದಿದೆ ಎಂದು ಉಲ್ಲೇಖ ಮಾಡಿದ್ದು, ಜುಲೈ 28 ರಂದು ಮಹಿಳೆ ದೂರು ದಾಖಲಿಸಿದ್ದಾರೆ.

Read this also;

ಮದ್ಯ ಕುಡಿಸಿ ಸ್ನೇಹಿತರಿಂದ ಅತ್ಯಾಚಾರ..!

ಬೆಂಗಳೂರಿನಲ್ಲಿ ಟಿಕ್ಕಿ ಯುವತಿಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರ ಆರೋಪ ಹೊತ್ತ ನೈಜೀರಿಯನ್​ ಪ್ರಜೆಗಳನ್ನು ಬಾಣಸವಾಡಿ ಪೊಲೀಸರು ಬಂಧನ ಮಾಡಿದ್ದಾರೆ. ಸಾಫ್ಟ್​ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಉತ್ತರ ಕರ್ನಾಟಕ ಮೂಲದ ಯುವತಿ ಮೇಲೆ ನೈಜೀರಿಯಾ ಮೂಲದ ಟೋನಿ, ಉಬಾಕಾ ಎಂಬ ಇಬ್ಬರು ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ. ಸಂತ್ರಸ್ತ ಯುವತಿಗೆ ಆರೋಪಿ ಟೋನಿ ಪರಿಚಿತನಾಗಿದ್ದ ಎನ್ನಲಾಗಿದ್ದು, ಆಗಸ್ಟ್​ 29ರಂದು ಯುವತಿಯ ಜೊತೆ ಉಬಾಕಾ ಮನೆಗೆ ಹೋಗಿದ್ದನು. ಈ ವೇಳೆ ಒಟ್ಟಿಗೆ ಪಾರ್ಟಿ ಮಾಡಿದ್ದ ಮೂವರು ಸ್ನೇಹಿತರು, ಅಮಲಿನಲ್ಲಿದ್ದಾಗ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ದೂರು ನೀಡಿದ್ದಾಳೆ. ಯುವತಿ ದೂರಿನ ಮೇರೆಗೆ ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ.

ಅತ್ಯಾಚಾರಕ್ಕೆ ರಾಜ್ಯ ಸರ್ಕಾರವೇ ಹೊಣೆ..!

ಬೆಂಗಳೂರಿನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ಯುವತಿಯ ಸ್ವಯಂ ಕೃತ ಅಪರಾಧ ಇರಬಹುದು. ಇದರಲ್ಲಿ ಅತ್ಯಾಚಾರ ನಡೆದಿರುವ ಕಾರಣ ಆರೋಪಿಗಳ ಬಂಧನವಾಗಿದ್ದು, ಮುಂದಿನ ಕಾನೂನು ಕ್ರಮ ಕೋರ್ಟ್​ ಕಟಕಟೆಯಲ್ಲಿ ಜರುಗಲಿದೆ. ಆದರೆ ಕಲಬುರಗಿಯಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೆರಹೊಣೆ ಎನ್ನಬಹುದು. ನೌಕರಿಗಾಗಿ ಬಂದಿದ್ದ ಮಹಿಳೆ ಊರಿಗೆ ತೆರಳುವ ಉದ್ದೇಶದಿಂದ ಬಸ್​ಗಾಗಿ ಕಾದು ನಿಂತಿದ್ದರು. ಬಸ್​ ಬಾರದೆ ಇದ್ದಾಗ ಅನಿವಾರ್ಯವಾಗಿ ಅಪರಿಚಿತ ಬೈಕ್​ ಮೇಲೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಬಸ್​ ಬಂದಿದ್ದರೆ ಮಹಿಳೆ ಅನಾಮಿಕನ ಬೈಕ್​ ಹತ್ತುವ ಸಾಹಸ ಮಾಡುತ್ತಿರಲಿಲ್ಲ ಎನ್ನಬಹುದು.

Related Posts

Don't Miss it !