ಬೆಂಗಳೂರು ಡಾಬಾ.. ಹಾಸನದ ಸಪ್ಲೇಯರ್​​ ಕೊಲೆ.. ಮಾಲೀಕನ ಪತ್ನಿಯ ಕೋಪ..!

ಕಳೆದ ತಿಂಗಳು ಬೆಂಗಳೂರಿನಲ್ಲಿ ಹಾಸನ ಮೂಲಕ ಮನೋಜ್​ ಎಂಬಾತನ ಕೊಲೆ ಆಗಿತ್ತು. ಡಾಬಾದಲ್ಲಿ ಮಲಗಿದ್ದ ವೇಳೆ ಪೆಟ್ರೋಲ್​ ಬಾಂಬ್​​ ಹಾಕಲಾಗಿತ್ತು. ಆಘಾತದಿಂದ ಓಡಿ ಬಂದ ಡಾಬಾ ಸಪ್ಲೇಯರ್​ ಮನೋಜ್​ ಮೇಲೆ ಪೆಟ್ರೋಲ್​​ ಎರಚಿದ್ದ ಆಗಂತುಕರು ಸ್ಥಳದಿಂದ ಪರಾರಿಯಾಗಿದ್ದರು. ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆಯ ದೊಡ್ಡಬ್ಯಾಲಕೆರೆಯ ಯೂ ಟರ್ನ್​ ಡಾಬಾದಲ್ಲಿ ಈ ಘಟನೆ ನಡೆದಿತ್ತು. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನುಗ್ಗೇಹಳ್ಳಿ ಗ್ರಾಮದ 28 ವರ್ಷದ ಮನೋಜ್ ಬೆಂಕಿ ಹೊತ್ತಿಕೊಂಡು ಓಡಾಡುವ ದೃಶ್ಯ ಹಾಗೂ ಬೆಂಕಿ ಹಾಕಿದ್ದ ಇಬ್ಬರು ಆಗಂತುಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಗೆ ಇಳಿದಾಗ ಭಯಾನಕ ಸತ್ಯವೊಂದು ಬಯಲಾಗಿದ್ದು, ಕೊಲೆಗೆ ಸುಪಾರಿ ನೀಡಲಾಗಿತ್ತು ಎನ್ನುವ ವಿಚಾರ ಗೊತ್ತಾಗಿದೆ.

ಯುವಕ ಸತ್ತ ಬಳಿಕ ಕೊಲೆ ಕೇಸ್​ ಆಗಿ ಬದಲಾಗಿದ್ದ ಪ್ರಕರಣ..!

ಮೊದಲು ಡಾಬಾ ಬಾಗಿಲಿಗೆ ಬೆಂಕಿ ಹಾಕಿದ್ದ ಕಿಡಿಗೇಡಿಗಳು, ರಸ್ತೆಯಲ್ಲೇ ನಿಂತಿದ್ದರು. ಅದೇ ಸಮಯಕ್ಕೆ ಬೆಂಕಿ ಕಂಡು ರೂಮಿನ ಒಳಗಿಂದ ಡಾಬಾ ಸಿಬ್ಬಂದಿ ಮನೋಜ್​ ಹೊರಕ್ಕೆ ಓಡೋಡಿ ಬಂದಿದ್ದ. ಬೆಂಕಿ ಹಾಕಿದ್ದು ಯಾರು ಎಂಬುದನ್ನು ನೋಡಿದ್ದ. ಇದರಿಂದ ಆತಂಕಕ್ಕೆ ಒಳಗಾದ ಕಿಡಿಗೇಡಿಗಳು, ನಮ್ಮನ್ನು ಗುರುತಿಸುತ್ತಾರೆ ಎನ್ನುವ ಕಾರಣಕ್ಕೆ ಸಿಬ್ಬಂದಿ ಮೇಲೆಯೇ ಪೆಟ್ರೋಲ್​ ಎರೆಚಿ ಪರಾರಿಯಾಗಿದ್ದರು. ಮೊದಲಿಗೆ IPC ಸೆಕ್ಷನ್​​ 1860, 436, 307, 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮನೋಜ್​ ಸಾವನ್ನಪ್ಪಿದ್ದ. ಆ ಬಳಿಕ ಸೆಕ್ಷನ್​ 302 ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಗೊತ್ತಾಗಿರುವ ಮಾಹಿತಿ ಎಂದರೆ ತನ್ನ ಗಂಡನ ಮೇಲಿನ ಸಿಟ್ಟಿನಿಂದ ಪತ್ನಿಯೇ 20 ಸುಪಾರಿ ಕೊಟ್ಟಿದ್ದಳು ಎನ್ನುವುದು ಗೊತ್ತಾಗಿದೆ.

Read This;

ಮೃತ ಮನೋಜ್​, ಡಾಬಾ ಸಿಬ್ಬಂದಿ

ಮಾಲೀಕನ ಪತ್ನಿಯಿಂದ 20 ಸಾವಿರ ರೂಪಾಯಿ ಸುಪಾರಿ..!

ಯೂಟರ್ನ್​ ಡಾಬಾವನ್ನು ಮೂವರು ಸ್ನೇಹಿತರು ಪಾರ್ಟರ್ನರ್​​ಶಿಪ್​ ರೀತಿಯಲ್ಲಿ ನಡೆಸುತ್ತಿದ್ದರು. ದೀಪಕ್, ಸಚಿನ್ ಹಾಗೂ ಅರ್ಪಿತ್ ಮೂವರು ಸೇರಿ ಡಾಬಾ ನಡೆಸುತ್ತಿದ್ದರು. ಇತ್ತೀಚಿಗೆ ಅರ್ಪಿತ್​ ಮ್ಯಾಟರಿಮೋನಿಯಲ್ಲಿ ಪರಿಚಯವಾಗಿದ್ದ ಶೀತಲ್​ ಎಂಬಾಕೆಯನ್ನು ಮದುವೆಯಾಗಿದ್ದನು. ನಾಲ್ಕು ತಿಂಗಳ ಸಂಸಾದರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಶುರುವಾಗಿತ್ತು. ದಿನನಿತ್ಯ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಇದ್ರಿಂದ ಹಿಂಸೆಗೊಳಗಾದ ಅರ್ಪಿತ್​​, ಪತ್ನಿ ಶೀತಲ್​ನನ್ನು ತವರಿಗೆ ಕಳುಹಿಸಿದ್ದರು. ಆದರೆ ತುಂಬಾ ದಿನಗಳಾದರೂ ಆಕೆಯನ್ನು ನೋಡಲು ಹೋಗಿರಲಿಲ್ಲ. ಈ ಬಗ್ಗೆ ಅಸಮಾಧಾನ ಹೊಂದಿದ್ದ ಪತ್ನಿ ಶೀತಲ್​​, ತನ್ನ ಗಂಡ ಮಾಲೀಕನಾಗಿದ್ದ ಯೂ ಟರ್ನ್​ ಡಾಬಾಗೆ ಬೆಂಕಿ ಹಾಕುವುದಕ್ಕೆ 20 ಸಾವಿರ ರೂಪಾಯಿ ಸುಪಾರಿ ಕೊಟ್ಟಿದ್ದಳು. ರೌಡಿಶೀಟರ್​ ಆಗಿದ್ದ ಹಳೇ ಸ್ನೇಹಿತ ಮನುಕುಮಾರ್​ಗೆ ಕೆಲಸ ವಹಿಸಿದ್ದಳು. ಸೇಡಿನ ಉದ್ದೇಶ ಈಗ ಕೊಲೆ ಪ್ರಕರಣವಾಗಿ ಬದಲಾಗಿದೆ.

Also Read;

ಸುಂದರಿ ಶೀತಲ್​​ಗಾಗಿ ಪೊಲೀಸರ ಹುಡುಕಾಟ..!

ಡಿಸೆಂಬರ್ 24 ರಂದು ಪೆಟ್ರೊಲ್ ಹಾಕಿ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಮಂಜುನಾಥ್ ಹಾಗೂ ಹೇಮಂತ್ ಎಂಬ ಆರೋಪಿಗಳನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಸುಪಾರಿ ಪಡೆದಿದ್ದ ರೌಡಿಶೀಟರ್​ ಮನುಕುಮಾರ್​ನನ್ನೂ ಪೊಲೀಸರು ಬಂಧಿಸಿದ್ದಾರೆ. ಆದರೆ ಸುಪಾರಿ ಕೊಟ್ಟಿದ್ದ ಚಲುವೆ ಶೀತಲ್​ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್‌, ಡಿಸೆಂಬರ್ 24ರಂದು ಸೋಲದೇವನಹಳ್ಳಿ ಠಾಣೆಯಲ್ಲಿ 436, 307 ಪ್ರಕರಣ ದಾಖಲಾಗಿತ್ತು. ಮೊದಲು ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು. ಸಿಬ್ಬಂದಿ ಬಂದು ಕೇಳಿದಾಗ ಆತನ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು. ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಆ ನಂತರ ಸೋಲದೇವನಹಳ್ಳಿಯಲ್ಲಿ 302 ಪ್ರಕರಣ ದಾಖಲು ಮಾಡಲಾಗಿತ್ತು. ಮೂವರು ಆರೋಪಿಗಳಲ್ಲಿ ಒಬ್ಬ ಡಕಾಯತಿ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮುಖ್ಯ ಆರೋಪಿ ರಾಬರಿ, ಅಪಹರಣ, ಡಕಾಯಿತಿ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದಿದ್ದಾರೆ.

See this Video

Related Posts

Don't Miss it !